ಕರ್ನಾಟಕ

karnataka

ETV Bharat / state

ಮುಂದಿನ ಬಾರಿ ಅನ್ನೋದೆಲ್ಲಾ ನಂಬಕ್ಕಾಗಲ್ಲ - ನಂಗೂ‌ ಈಗಲೇ ಸಚಿವ ಸ್ಥಾನ‌ ಬೇಕು: ತಿಪ್ಪಾರೆಡ್ಡಿ ಆಗ್ರಹ - Chitrdurga MLA Thippareddy

ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಸಮೀಪಿಸುತ್ತಿದ್ದು, ಶಾಸಕರೆಲ್ಲರೂ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಇನ್ನು ಸಚಿವ ಸ್ಥಾನ ನೀಡುವಂತೆ ಶಾಸಕ ತಿಪ್ಪಾರೆಡ್ಡಿ ಪಟ್ಟುಹಿಡಿದಿದ್ದು, ರಾಜಕೀಯದಲ್ಲಿ ಮುಂದಿನ ಬಾರಿ ಎಂಬುದಿಲ್ಲ, ನಂಗೆ ಈ ಬಾರಿಯೇ ಸಚಿವ ಸ್ಥಾನ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Thippa reddy
ಶಾಸಕ ತಿಪ್ಪಾರೆಡ್ಡಿ ಹೇಳಿಕೆ

By

Published : Jan 25, 2020, 5:07 PM IST

ಬೆಂಗಳೂರು:ರಾಜಕೀಯದಲ್ಲಿ ಮುಂದಿನ ಬಾರಿ ಎನ್ನುವುದನ್ನು ನಂಬಲು‌ ಸಾಧ್ಯವಿಲ್ಲ, ಹಿರಿಯ ಶಾಸಕರಲ್ಲಿ ನಾನೂ ಕೂಡ ಒಬ್ಬನಾಗಿದ್ದು‌ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದೇನೆ. ಈ ಬಾರಿ ನನಗೂ ಸಚಿವ ಸ್ಥಾನ ಸಿಗಲಿದೆ ಎಂದು ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಹೇಳಿದ್ದಾರೆ.

ಸಸ್ಯದಲ್ಲೇ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಪಡೆಯಲು ಪಕ್ಷದ ಮೂಲ ಶಾಸಕರಿಂದಲೂ ಲಾಬಿ‌ ಜೋರಾಗಿ ನಡೆಯುತ್ತಿದೆ. ಚಿತ್ರದುರ್ಗದ ಹಿರಿಯ ಶಾಸಕ‌ ಜಿ‌ ಎಚ್ ತಿಪ್ಪಾರೆಡ್ಡಿ ಇಂದು ಬೆಳಗ್ಗೆಯೇ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲಿ ಸಿಎಂ ಭೇಟಿ ಮಾಡಿ ಮಂತ್ರಿಗಿರಿಗೆ ಒತ್ತಾಯಿಸಿದರು. ನಂತರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ರನ್ನು ಭೇಟಿ ಮಾಡಿದರು. ಪಕ್ಷ ನಿಷ್ಠರಾಗಿರುವ ತಮಗೂ ಸಚಿವ ಸ್ಥಾನ ಕೊಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಶಾಸಕ ತಿಪ್ಪಾರೆಡ್ಡಿ ಹೇಳಿಕೆ

ಬಿ.ಎಲ್ ಸಂತೋಷ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಜಿ ಎಚ್ ತಿಪ್ಪಾರೆಡ್ಡಿ, ಇವತ್ತು ಸಿಎಂ ಮತ್ತು ಬಿ.ಎಲ್ ಸಂತೋಷ್ ರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ ನನಗೂ ಸಚಿವ ಸ್ಥಾನ ಕೊಡುವಂತೆ ಬೇಡಿಕೆ ಇಟ್ಟಿದ್ದೇನೆ. ಪಕ್ಷದಲ್ಲಿರುವ ಎಂಟು ಹತ್ತು ಹಿರಿಯ ಶಾಸಕರ ಪೈಕಿ‌ ನಾನೂ ಒಬ್ಬ, ಚಿತ್ರದುರ್ಗ ಕ್ಷೇತ್ರದಲ್ಲಿ ನಾನು ಆರು ಬಾರಿ ಗೆದ್ದಿದ್ದೇನೆ ಹಾಗಾಗಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೇನೆ ಎಂದರು.

ನನಗೂ ಸಚಿವ ಸ್ಥಾನ ಸಿಗುವ ಭರವಸೆ ಇದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಜೊತೆ ಚರ್ಚೆ ಮಾಡುತ್ತೇವೆ ಎಂದು ಸಂತೋಷ್ ಹೇಳಿದ್ದಾರೆ. ಸಚಿವ ಸ್ಥಾನ ಕೊಡುವ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಈ ತಿಂಗಳಲ್ಲಿ ಸಂಪುಟ ವಿಸ್ತರಣೆ ಅಂತ ಸಿಎಂ ಹೇಳಿದ್ದಾರೆ ನನಗೂ ಮಂತ್ರಿ ಮಾಡುವ ಭರವಸೆ ಇದೆ ರಾಜಕೀಯದಲ್ಲಿ ಮುಂದಿನ ಬಾರಿ‌ ಅನ್ನೋದನ್ನು ನಂಬಕ್ಕಾಗಲ್ಲ ಆದ್ದರಿಂದ ಈ ಬಾರಿಯೇ ಸಿಗುವ ನಿರೀಕ್ಷೆ ಇದೆ ಎಂದರು.

ABOUT THE AUTHOR

...view details