ಕರ್ನಾಟಕ

karnataka

ETV Bharat / state

ಗೋವಿನ ಚಿಹ್ನೆ ಮೇಲೆ ಗೆದ್ದ ಕಾಂಗ್ರೆಸ್​ನವರು ಅದನ್ನೇ ಮರೆತರು; ಕಟೀಲ್ - ಸಿದ್ದರಾಮಯ್ಯ ವಿರುದ್ಧ ನಳಿನ್ ಕುಮಾರ್ ಕಟೀಲು ವಾಗ್ದಾಳಿ

ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್ ಗೆದ್ದದ್ದೇ ಹಸು ಮತ್ತು ಕರುವಿನ ಚಿಹ್ನೆ ಮೇಲೆ. ಗೆದ್ದ ಮೇಲೆ ಅವರು ಗೋವನ್ನ ಮರೆತುಬಿಟ್ಟರು. ಈ ರಾಜ್ಯದ ಪ್ರತಿಷ್ಠಿತ ವ್ಯಕ್ತಿ ಗೋ ಮಾಂಸ ತಿನ್ನುವುದಾಗಿ ಹೇಳುತ್ತಾರೆ ಅಂತಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದರು.

kateel
ಕಟೀಲ್

By

Published : Jan 13, 2021, 4:59 PM IST

ಬೆಂಗಳೂರು: ಕಾಂಗ್ರೆಸ್​​ಗೆ ಗೋವಿನ ಶಾಪವಿದೆ. ಹೀಗಾಗಿ ರಾಜ್ಯದಲ್ಲಿ ಆ ಪಕ್ಷ ನೆಲ ಕಚ್ಚಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

ಅರಮನೆ ಮೈದಾನದಲ್ಲಿ ನಡೆದ ಜನಸೇವಕ ಸಮಾರೋಪ ಸಮಾವೇಶದಲ್ಲಿ ಮಾತನಾಡಿದ ಅವರು, ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್​ ಗೆದ್ದದ್ದೇ ಹಸು ಮತ್ತು ಕರುವಿನ ಚಿಹ್ನೆ ಮೇಲೆ. ಗೆದ್ದ ಮೇಲೆ ಅವರು ಗೋವನ್ನ ಮರೆತುಬಿಟ್ಟರು. ಈ ರಾಜ್ಯದ ಪ್ರತಿಷ್ಠಿತ ವ್ಯಕ್ತಿ ಎನಿಸಿಕೊಳ್ಳುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗೋ ಮಾಂಸ ತಿನ್ನುವುದಾಗಿ ಹೇಳುತ್ತಾರೆ ಎಂದು ಕಿಡಿಕಾರಿದರು.

ಸಿಎಂ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 46 ಸಾವಿರ ಜನ ಗೆಲುವನ್ನು ಪಡೆದಿದ್ದಾರೆ. ಮಹಾತ್ಮ ಗಾಂಧಿ ಆಶಯದಂತೆ ಗ್ರಾಮ ಸ್ವರಾಜ್ಯ ಯಾತ್ರೆ ಮಾಡಿದ್ದೇವೆ. ಗ್ರಾಮ ಪಂಚಾಯಿತಿಗೆ ತೆರಳಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ಆಯೋಜಿಸಿದ್ದೆವು. ಇಂದು ಮೂರೂವರೆ ಸಾವಿರ ಪಂಚಾಯಿತಿ ಅಧ್ಯಕ್ಷರ ಆಯ್ಕೆಯಾಗಿದೆ. ಬಾದಾಮಿಯಲ್ಲಿ ಅತಿ ಹೆಚ್ಚು ಸ್ಥಾನ ಪಡೆದಿದ್ದೇವೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕನಕಪುರದಲ್ಲಿ ಗೆಲುವು ಸಾಧಿಸಿದ್ದೇವೆ. ಇದಕ್ಕೆಲ್ಲ ಕಾರಣ ಆರೂವರೆ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಕೆಲಸ ಎಂದು ಕಟೀಲ್​ ಹೇಳಿದ್ರು.

ಈ ರಾಜ್ಯದಲ್ಲಿ ಯಡಿಯೂರಪ್ಪ ದೊಡ್ಡ ಹೋರಾಟ ಮಾಡಿ ಬಂದವರು. ಇಂದು ಸಿಎಂ ಆಗಿದ್ದಾರೆ. ಬಿಎಸ್​ವೈ ಅವರ ಕೆಲಸ, ಅವರ ಹೋರಾಟ ನಮ್ಮ ಹೆಮ್ಮ ಮತ್ತು ಆದರ್ಶ. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆ ಮತ್ತು ಬಿಬಿಎಂಪಿ ಚುನಾವಣೆ ಎದುರಾಗ್ತಿದೆ. ಅಲ್ಲಿಯೂ ನಮ್ಮ ಗೆಲುವಿನ ಓಟ ಮುಂದುವರಿಯಬೇಕು. ಅದಕ್ಕೆ ಕಾರ್ಯಕರ್ತರಾದ ನಿಮ್ಮೆಲ್ಲರ ಹೋರಾಟ ಮುಂದುವರೆಯಲಿ ಎಂದು ಕರೆ ನೀಡಿದರು.

ಬಿಜೆಪಿ ಗೆಲುವಿನ ಓಟ ನಿಲ್ಲಲ್ಲ:
ಬಿಜೆಪಿಯ ಗೆಲುವಿನ ಓಟ ನಿಲ್ಲುವುದಿಲ್ಲ, ಮುಂದುವರೆಯುತ್ತದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು. ಮುಂಬರುವ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಯಲ್ಲೂ ನಮ್ಮ ಅಭ್ಯರ್ಥಿಗಳು ಇದೇ ರೀತಿಯ ಗೆಲುವು ಮುಂದುವರೆಯಲಿದೆ. ಈ ಸಲ ಗ್ರಾ.ಪಂ.ಚುನಾವಣೆಯಲ್ಲಿ ಶೇ.60 ಕ್ಕೂ ಹೆಚ್ಚು ಬಿಜೆಪಿ ಬೆಂಬಲಿತರು ಗೆದ್ದಿದ್ದಾರೆ. ಇದು ಕಾರ್ಯಕರ್ತರ ಗೆಲುವು, ರಾಜ್ಯದ ಜನರ ಗೆಲುವು ಎಂದು ಬಣ್ಣಿಸಿದರು.

ABOUT THE AUTHOR

...view details