ಬೆಂಗಳೂರು: ಗ್ಯಾಸ್ ಬೆಲೆ ಏರಿಕೆಯಾಗಿರುವುದನ್ನು ಖಂಡಿಸಿ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ಇಂಡಿಯನ್ ಎಕ್ಸ್ಪ್ರೆಸ್ ವೃತ್ತದವರೆಗೆ ತಲೆ ಮೇಲೆ ಗ್ಯಾಸ್ ಸಿಲಿಂಡರ್ ಹೊತ್ತುಕೊಂಡು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು.
ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್ನಾಥ್ ಮಾತನಾಡಿದರು. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರ್ನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾ ಮೆರವಣಿಗೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವು ಮಹಿಳಾ ಕಾರ್ಯಕರ್ತರು ಭಾಗಿಯಾಗಿದ್ದರು.
ಬೆಲೆ ಹೆಚ್ಚಳ ಆಗುವ ಸಾಧ್ಯತೆ ಇದೆ:ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್ನಾಥ್ ಮಾತನಾಡಿ, ಉಜ್ವಲ ಯೋಜನೆಯಡಿ ಕೇಂದ್ರ ಸರ್ಕಾರ ಮಹಿಳೆಯರಿಗೆ ಫ್ರೀ ಗ್ಯಾಸ್ ಕೊಡ್ತಿವಿ ಅಂದಿದ್ರು. ಈಗ ಉಜ್ವಲ ಯೋಜನೆ ಎಲ್ಲಿದೆ ಅನ್ನೊದು ದುರ್ಬಿನ್ ಹಾಕಿಕೊಂಡು ಹುಡುಕಾಟ ಮಾಡಬೇಕು. ದೇಶದಲ್ಲಿ ದಿನದಿಂದ ದಿನಕ್ಕೆ ಗ್ಯಾಸ್ ಬೆಲೆ ಜಾಸ್ತಿ ಆಗ್ತಿದೆ. ಸದ್ಯ ಗ್ಯಾಸ್ ಬೆಲೆ 1053 ರೂ. ಆಗಿದೆ. ಸರ್ಕಾರ 50 ರೂಪಾಯಿ ಗ್ಯಾಸ್ ಬೆಲೆ ಜಾಸ್ತಿ ಮಾಡಿದೆ. ಇಲ್ಲಿಗೆ ಕೇಂದ್ರ ಸರ್ಕಾರ ಶಾಂತವಾಗುವ ಹಾಗೆ ಕಾಣ್ತಿಲ್ಲ. ಇನ್ನು ಗ್ಯಾಸ್ ಬೆಲೆ ಹೆಚ್ಚಳ ಆಗುವ ಸಾಧ್ಯತೆ ಇದೆ ಎಂದರು.
ಅಡುಗೆ ಮಾಡಲು ಸೌದೆ ಕೂಡ ಸಿಗ್ತಿಲ್ಲ. ಮಳೆ ಇದೆ, ಸೌದೆ ಎಲ್ಲ ಹಸಿಯಾಗಿದೆ. ಹೇಗೆ ಅಡುಗೆ ಮಾಡಬೇಕು? ಎಂದು ಕೇಂದ್ರ ಸರ್ಕಾರದ ವಿರುದ್ಧ ಪುಷ್ಪ ಅಮರನಾಥ ಆಕ್ರೋಶ ವ್ಯಕ್ತಪಡಿಸಿದರು.
ಓದಿ:ಶಿಕ್ಷಣ ಸಚಿವರ ಹೇಳಿಕೆ ಬೇಜವಾಬ್ದಾರಿಯುತ, ಕ್ರೂರತನದಿಂದ ಕೂಡಿದೆ: ಸಿದ್ದರಾಮಯ್ಯ ಆಕ್ರೋಶ