ಕರ್ನಾಟಕ

karnataka

ETV Bharat / state

ಸಿಡಿ ಪ್ರಕರಣವನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ : ಅರುಣ್ ಸಿಂಗ್ - CD case lastest news

ಮೂರು ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಾಳೆ ಚರ್ಚೆ ನಡೆಸಲಾಗುತ್ತದೆ. ರಾಜ್ಯ ಬಿಜೆಪಿ ಘಟಕದ ಜೊತೆ ನಾಳೆ ಚರ್ಚೆ ನಡೆಸಿದ ಬಳಿಕ ಪಟ್ಟಿಯನ್ನು ಕೇಂದ್ರ ಬಿಜೆಪಿ ಚುನಾವಣಾ ಸಮಿತಿಗೆ ಕಳಿಸಿಕೊಡಲಾಗುತ್ತದೆ. ಕೇಂದ್ರದ ಸಮಿತಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲಿದೆ..

Arun Singh
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್

By

Published : Mar 19, 2021, 8:19 PM IST

ಬೆಂಗಳೂರು :ಸಿಡಿ ಪ್ರಕರಣದಲ್ಲಿ ಆರೋಪ ಕೇಳಿ ಬಂದ ಕೂಡಲೇ ರಮೇಶ್ ಜಾರಕಿಹೊಳಿ ರಾಜೀನಾಮೆ ಪಡೆಯಲಾಯಿತು. ಆರೋಪ ಬಂದ ತಕ್ಷಣ ಈ ರೀತಿ ರಾಜೀನಾಮೆ ಬಿಜೆಪಿಯಲ್ಲಿ ಮಾತ್ರ ಪಡೆಯೋದು, ಕಾಂಗ್ರೆಸ್​ನಲ್ಲಿ ಇಂಥ ಸನ್ನಿವೇಶ ಇರಲ್ಲ. ಆದರೆ, ಕಾಂಗ್ರೆಸ್ ರಾಜಕೀಯವಾಗಿ ಸಿಡಿ ಪ್ರಕರಣ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್

ಕುಮಾರಕೃಪಾ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ 24 ಗಂಟೆಯೊಳಗೆ ನೈತಿಕವಾಗಿ ರಾಜೀನಾಮೆ ಪಡೆಯಲಾಗುತ್ತದೆ. ಆರೋಪ ಬಂದ ತಕ್ಷಣ ನೈತಿಕವಾಗಿ ರಮೇಶ್ ಜಾರಕಿಹೊಳಿ ಸ್ವತಃ ರಾಜೀನಾಮೆ ಕೊಟ್ಟಿದ್ದಾರೆ. ಕಾಂಗ್ರೆಸ್ ಆಗ್ರಹಿಸದಿದ್ರೂ ರಮೇಶ್ ಜಾರಕಿಹೊಳಿ ನೈತಿಕವಾಗಿ ರಾಜೀನಾಮೆ ಕೊಟ್ಟರು.

ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಆದರೆ, ಕಾಂಗ್ರೆಸ್ ಈ ವಿಚಾರದಲ್ಲಿ ಗೊಂದಲ‌ ಸೃಷ್ಟಿಸ್ತಿದೆ. ಕಾಂಗ್ರೆಸ್ ಜನತೆಗೆ ಸುಳ್ಳು ಮಾಹಿತಿ‌ ಕೊಡುತ್ತಿದೆ. ಕಾಂಗ್ರೆಸ್ ಷಡ್ಯಂತ್ರ ಹೆಣೆಯೋದು, ಸುಳ್ಳು ಹೇಳೋದು, ಭ್ರಷ್ಟಾಚಾರ ನಡೆಸೋದ್ರಲ್ಲಿ ತೊಡಗಿದೆ.

ಕಾಂಗ್ರೆಸ್​ನಲ್ಲಿ ದೊಡ್ಡ ದೊಡ್ಡ ನಾಯಕರೇ ಸುಳ್ಳು ಹೇಳುತ್ತಿದಾರೆ. ಆರು ಸಚಿವರು ಕೋರ್ಟ್ಗೆ ಹೋದರೆ ಕಾಂಗ್ರೆಸ್​ಗೆ ಏನ್ ಸಮಸ್ಯೆ? ಕಾಂಗ್ರೆಸ್​ಗೆ ಸಮಸ್ಯೆ ಇಲ್ಲವೆಂದಾದ ಮೇಲೆ ಸುಳ್ಳು ಆರೋಪ ಮಾಡೋದ್ಯಾಕೆ? ಎಂದು ಕಾಂಗ್ರೆಸ್ ವಿರುದ್ಧ ಅರುಣ್ ಸಿಂಗ್ ವಾಗ್ದಾಳಿ ನಡೆಸಿದರು.

ಓದಿ:ಬಟ್ಟೆ ಹಾಕೋದು, ಬಿಚ್ಚೋದ್ರ ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಚರ್ಚೆ: ಸಿದ್ದರಾಮಯ್ಯ ಹೇಳಿದ್ದೇನು ಕೇಳಿ..

ಆರು ಸಚಿವರು ಕೋರ್ಟ್​ಗೆ ಅರ್ಜಿ ಹಾಕಿ ತಡೆ ತಂದಿದ್ದಾರೆ. ಅವರೆಲ್ಲಾ ಕೋರ್ಟ್​ಗೆ ಹೋಗಿರೋದು ತಮ್ಮ ವಿರುದ್ಧ ತೇಜೋವಧೆ ಮಾಡುತ್ತಾರೆ ಅಂತಾ. ಇದರ ಬಗ್ಗೆ ಸಮರ್ಥನೆ ಮಾಡಿಕೊಳ್ಳೊ ಪ್ರಶ್ನೆ ಉದ್ಭವಿಸಲ್ಲ. ಅವರ ವಿರುದ್ಧದ ಷಡ್ಯಂತ್ರ ತಡೆಯಲು ಕೋರ್ಟ್ ಗೆ ಹೋಗಿದ್ದಾರೆ ಅಷ್ಟೇ ಎಂದು ಆರು ಸಚಿವರ ನಡೆಯನ್ನು ಸಿಂಗ್ ಸಮರ್ಥಿಸಿದರು. ‌

ನಾಳೆ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ :ಮೂರು ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಾಳೆ ಚರ್ಚೆ ನಡೆಸಲಾಗುತ್ತದೆ. ರಾಜ್ಯ ಬಿಜೆಪಿ ಘಟಕದ ಜೊತೆ ನಾಳೆ ಚರ್ಚೆ ನಡೆಸಿದ ಬಳಿಕ ಪಟ್ಟಿಯನ್ನು ಕೇಂದ್ರ ಬಿಜೆಪಿ ಚುನಾವಣಾ ಸಮಿತಿಗೆ ಕಳಿಸಿಕೊಡಲಾಗುತ್ತದೆ. ಕೇಂದ್ರದ ಸಮಿತಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲಿದೆ ಎಂದರು.

ಯತ್ನಾಳ್ ಹೇಳಿಕೆ ಗಂಭೀರವಾಗಿ ಪರಿಗಣಿಸಬೇಕಿಲ್ಲ :ಶೋಕಾಸ್ ನೋಟಿಸ್ ನೀಡಿದ್ದರೂ ಸಿಎಂ ಯಡಿಯೂರಪ್ಪ ವಿರುದ್ಧ ಆರೋಪ ಮಾಡುವುದನ್ನು ಮುಂದುವರೆಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳದ ಕುರಿತು ಪ್ರತಿಕ್ರಿಯೆ ನೀಡಿದ ಅರುಣ್ ಸಿಂಗ್, ಯತ್ನಾಳ್ ಹೇಳಿಕೆಗಳನ್ನು ನಾನಾಗಲೀ, ನಮ್ಮ ಕಾರ್ಯಕರ್ತರಾಗಲೀ ಗಂಭೀರವಾಗಿ ಪರಿಗಣಿಸಿಲ್ಲ.

ಯತ್ನಾಳ್ ಹೇಳಿಕೆಗಳ ಬಗ್ಗೆ ಮಾತಾಡೋದನ್ನು ನೀವೂ ಬಿಡಿ, ಯತ್ನಾಳ್ ಮಾತ್ರ ಈ ತರದ ಹೇಳಿಕೆಗಳನ್ನು ನಿಲ್ಸಲ್ಲ, ಅವರು ಮಾತಾಡುತ್ತಲೇ ಇರ್ತಾರೆ ಎಂದರು. ಯತ್ನಾಳ್​ಗೆ ಪಕ್ಷದಲ್ಲಿ ಕೆಲವರ ಬೆಂಬಲ ಇದೆಯಾ ಎಂಬ ಪ್ರಶ್ನೆಗೆ ಇರಬಹುದು ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದರು.

ABOUT THE AUTHOR

...view details