ಬೆಂಗಳೂರು: ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ನಿರೀಕ್ಷಿತ ಅನುದಾನ ಸಿಗದ ಹಿನ್ನೆಲೆ ರಾಜ್ಯ ಕಾಂಗ್ರೆಸ್ 'ಜವಾಬ್ ದೋ ಮಂತ್ರಿಜಿ' ಎಂದು ಟ್ವಿಟ್ಟರ್ ಅಭಿಯಾನ ಆರಂಭಿಸಿದೆ.
ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಸಿಗದ ನಿರೀಕ್ಷಿತ ಅನುದಾನ: 'ಜವಾಬ್ ದೋ ಮಂತ್ರಿಜಿ' ಕಾಂಗ್ರೆಸ್ ಟ್ವೀಟ್ ಅಭಿಯಾನ ಆರಂಭ - ಕಾಂಗ್ರೆಸ್ ಟ್ವೀಟ್ ಅಭಿಯಾನ
ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ನಿರೀಕ್ಷಿತ ಅನುದಾನ ಸಿಗದ ಹಿನ್ನೆಲೆ ರಾಜ್ಯ 'ಕಾಂಗ್ರೆಸ್ ಜವಾಬ್ ದೋ ಮಂತ್ರಿಜಿ' ಹೆಸರಿನ ಟ್ವಿಟ್ಟರ್ ಅಭಿಯಾನ ಆರಂಭಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಕಳೆದ ವರ್ಷ 1 ಕೋಟಿ ಉದ್ಯೋಗಗಳು ನಷ್ಟವಾಗಿ, ಯುವಜನತೆ ಬೀದಿಗೆ ಬಿದ್ದಿದ್ದಾರೆ. ಮೋದಿಯವರು ಹೋದ ಕಡೆಯೆಲ್ಲೆಲ್ಲಾ ಸಿಎಎ, ಎನ್‌ಆರ್‌ಸಿ ಬಗ್ಗೆ ಮಾತನಾಡುತ್ತಿದ್ದಾರೆ, ನಿರುದ್ಯೋಗ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸುತ್ತಿಲ್ಲ ಏಕೆ? ಎಂದು ಪ್ರಶ್ನಿಸಲಾಗಿದೆ. ಹೊಸ ವೈಯಕ್ತಿಕ ಆದಾಯ ತೆರಿಗೆ ವ್ಯವಸ್ಥೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೇ ಸ್ಪಷ್ಟತೆ ಇಲ್ಲ. ‘ಹೊಸ ತೆರಿಗೆ ದರದಿಂದ ಆಗುವ ಪ್ರಯೋಜನಗಳ ಬಗ್ಗೆ ಸಚಿವಾಲಯಕ್ಕೂ ಇನ್ನು ಲೆಕ್ಕ ಸಿಕ್ಕಿಲ್ಲ. ಹಾಗಿದ್ದರೂ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗೊಂದಲದಲ್ಲೇ ಬಜೆಟ್ ಮಂಡಿಸಿದ್ದು ಏಕೆ? ಜನರಿಗೆ ಗೊಂದಲ ಮೂಡಿಸುತ್ತಿರುವುದೇಕೆ? ಎಂದು ಕಾಂಗ್ರೆಸ್ ನೇರವಾಗಿ ಕೇಳಿದೆ.
ನಿರ್ಮಲಾ ಸೀತಾರಾಮನ್ ಅವರ ಬಜೆಟ್ನಲ್ಲಿ ಆಡಳಿತಾತ್ಮಕ ದೂರದೃಷ್ಟಿಯ ಕೊರತೆ ಎದ್ದು ಕಾಣುತ್ತಿದೆ. ಕುಸಿದಿರುವ ಆರ್ಥಿಕತೆಯ ಸುಧಾರಣೆಗೆ, ಉದ್ಯೋಗ ಸೃಷ್ಟಿಗೆ, ನಿರುದ್ಯೋಗ ನಿಯಂತ್ರಣಕ್ಕೆ ಯಾವುದೇ ಕಾರ್ಯಕ್ರಮಗಳಿಲ್ಲ ಏಕೆ? ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಿಸುವ ಆಶಯದಲ್ಲಿದ್ದ ಬಡ-ಮಧ್ಯಮ ವರ್ಗಕ್ಕೆ ನೀವು ಕೊಟ್ಟ ಕೊಡುಗೆ ಏನು? ಎಂದು ಕೇಳಿದೆ. ಒಟ್ಟಾರೆ ಈ ಎಲ್ಲ ಪ್ರಶ್ನೆಗಳಿಗೆ ಕೇಂದ್ರ ಸಚಿವರು ಉತ್ತರ ನೀಡಬೇಕು ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.