ಬೆಂಗಳೂರು: ಸೆಸ್ ದರ ಏರಿಕೆ ಮೂಲಕ ರಾಜ್ಯ ಸರ್ಕಾರ ಎಪಿಎಂಸಿ ಮುಗಿಸುವ ಮೊದಲ ಹೆಜ್ಜೆ ಇರಿಸಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.
ಟ್ವೀಟ್ ಮೂಲಕ ಆರೋಪ ಮಾಡಿರುವ ಕಾಂಗ್ರೆಸ್ ಪಕ್ಷ, ಎಪಿಎಂಸಿ ಮಾರುಕಟ್ಟೆ ಮುಗಿಸುವ ಸಂಚಿನ ಭಾಗವೇ ಸೆಸ್ ದರ ಏರಿಕೆ. ಹಮಾಲರು, ಧಾನ್ಯಗಳನ್ನು ತುಂಬಿಸುವ ಕೂಲಿಗಳು, ಧಾನ್ಯಗಳನ್ನು ವಿಂಗಡಿಸುವವರು, ಚೀಲ ಮಾರಾಟ ಮಾಡುವವರು ಎಪಿಎಂಸಿಗಳಿಂದ ಜೀವನ ಕಟ್ಟಿಕೊಂಡ ಇವರೆಲ್ಲರ ಬದುಕನ್ನು ಬಿಜೆಪಿ ಸರ್ಕಾರ ಮುಗಿಸಲು ಹೊರಟಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರೇ ಕೂಡಲೇ ಸೆಸ್ ಹೊರೆ ಇಳಿಸಿ, ಎಪಿಎಂಸಿ ಉಳಿಸಿ ಎಂದು ಒತ್ತಾಯಿಸಿದೆ.