ಕರ್ನಾಟಕ

karnataka

ETV Bharat / state

ಶಿಕ್ಷಕರ ದಿನಾಚರಣೆ: ಕಾಂಗ್ರೆಸ್ ನಾಯಕರಿಂದ ಶುಭಾಶಯ ಸಲ್ಲಿಕೆ - tweet

ಶಿಕ್ಷಕರ ದಿನಾಚರಣೆಗೆ ಕಾಂಗ್ರೆಸ್​ ಪಕ್ಷ ಹಾಗೂ ನಾಯಕರುಗಳು ಟ್ವಿಟ್​ ಮಾಡುವ ಮೂಲಕ ಗುರು ವೃಂದಕ್ಕೆ ಶುಭಾಶಯವನ್ನು ಕೋರಿದ್ದಾರೆ.

ಸಿದ್ದರಾಮಯ್ಯ

By

Published : Sep 5, 2019, 11:53 AM IST

ಬೆಂಗಳೂರು: ದೇಶಾದ್ಯಂತ ಇಂದು ಆಚರಣೆಯಾಗುತ್ತಿರುವ ಶಿಕ್ಷಕರ ದಿನಾಚರಣೆಗೆ ಕಾಂಗ್ರೆಸ್ ಪಕ್ಷ ಹಾಗೂ ನಾಯಕರು ಶುಭಾಶಯ ಸಲ್ಲಿಸಿದ್ದಾರೆ.

ಟ್ವೀಟ್ ಮೂಲಕ ಪಕ್ಷ ಹಾಗೂ ನಾಯಕರು ಶಿಕ್ಷಕರ ದಿನಾಚರಣೆಯ ಶುಭಾಶಯ ಸಲ್ಲಿಸಿದ್ದಾರೆ. ಈ ಬಾರಿ ರಾಧಾಕೃಷ್ಣ ಅವರ ಜನ್ಮಶತಮಾನೋತ್ಸವ ವರ್ಷ ಕೂಡ ಆಗಿರುವುದು ಕೂಡ ವಿಶೇಷವಾಗಿದೆ. ಸಕಲ ಶಿಕ್ಷಕ ಬಾಂಧವರಿಗೆ ನಾಯಕರು ಶುಭ ಕೋರಿದ್ದಾರೆ.

ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆ ಮೂಲಕ ಶುಭ ಕೋರಲಾಗಿದ್ದು, ಮೈಸೂರು, ಕೋಲ್ಕೊತಾ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಾಗಿ, ಆಂಧ್ರ, ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ಉಪಕುಲಪತಿಗಳಾಗಿ, ದೆಹಲಿ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ, ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ ಶ್ರೇಷ್ಠ ಶಿಕ್ಷಣ ತಜ್ಞ ಸರ್ವಪಲ್ಲಿ ರಾಧಾಕೃಷ್ಣನ್ ಗೌರವಾರ್ಥವಾಗಿ ಆಚರಿಸಲಾಗುವ ಶಿಕ್ಷಕರ ದಿನಾಚರಣೆಯ ಶುಭಾಷಯಗಳು ಎಂದು ತಿಳಿಸಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಟ್ವಿಟರ್​ನಲ್ಲಿ 'ಬದುಕಲ್ಲಿ ಕಲಿಕೆಗೆ ಕೊನೆ ಇಲ್ಲ, ಶಾಲೆಯಲ್ಲಿ ಕಲಿತದ್ದು ಮಾತ್ರ ಶಿಕ್ಷಣವೂ ಅಲ್ಲ. ತರಗತಿಯ ಒಳಗೆ ಮತ್ತು ಹೊರಗೆ ಕಲಿಸಿದ, ಬೆಳೆಸಿದ, ತಿದ್ದಿದ, ತೀಡಿದ ಎಲ್ಲ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಗೌರವದ ನಮನಗಳು, ಹಾರ್ದಿಕ ಶುಭಾಶಯಗಳು' ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಎರಡನೇ ಅಧ್ಯಕ್ಷರು ಕೂಡ ಆಗಿದ್ದ ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಆಚರಣೆ ಇನ್ನಷ್ಟು ಅರ್ಥ ಪಡೆದಿದೆ ಎಂದಿದ್ದಾರೆ.

ABOUT THE AUTHOR

...view details