ಕರ್ನಾಟಕ

karnataka

ETV Bharat / state

6 ತಿಂಗಳಿಂದ ಬೇಗುದಿಯಲ್ಲಿ ಬೇಯುತ್ತಿರುವ ಬಿಎಸ್​​ವೈ ಸರ್ಕಾರ, ಅಭಿವೃದ್ಧಿ ಕೆಲಸ ಆರಂಭಿಸೋದು ಯಾವಾಗ?: ಕಾಂಗ್ರೆಸ್​​ - Bangalore News

ಆಪರೇಷನ್ ಕಮಲದಂತಹ ಅನೈತಿಕ ರಾಜಕಾರಣದಿಂದ ಅಧಿಕಾರಕ್ಕೆ ಬಂದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ವಿರೋಧ ಪಕ್ಷ ಕಾಂಗ್ರೆಸ್ ತನ್ನ ಟ್ವಿಟರ್​ನಲ್ಲಿ​ ತೀವ್ರ ವಾಗ್ದಾಳಿ ನಡೆಸಿದೆ.

congress-tweet-against-state-bjp-govt
congress-tweet-against-state-bjp-govt

By

Published : Feb 4, 2020, 12:16 PM IST

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷ ಕಾಂಗ್ರೆಸ್ ಟ್ವಿಟರ್​ನಲ್ಲಿ​ ತೀವ್ರ ವಾಗ್ದಾಳಿ ನಡೆಸಿದೆ.

ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಟ್ವೀಟ್

ಬಿಜೆಪಿ ಸರ್ಕಾರದ ಆಡಳಿತ ವೈಖರಿ ಕುರಿತು ಟ್ವೀಟ್ ಮೂಲಕ ತನ್ನ ಬೇಸರ ವ್ಯಕ್ತಪಡಿಸಿರುವ ರಾಜ್ಯ ಕಾಂಗ್ರೆಸ್, 6 ತಿಂಗಳಿಂದ ಆಂತರಿಕ ಬೇಗುದಿಯಲ್ಲೇ ಬೇಯುತ್ತಿರುವ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ, ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಆರಂಭಿಸುವುದು ಯಾವಾಗಾ? ಅಧಿಕಾರ ಉಳಿಸಿಕೊಳ್ಳಲು ಸ್ವಪಕ್ಷಿಯರು, ಅನರ್ಹರ ಸಂತೈಸುವಿಕೆ, ಹೈಕಮಾಂಡ್ ಒಲೈಕೆಯಲ್ಲೇ 6 ತಿಂಗಳು ಕಳೆದಿವೆ ಎಂದು ಲೇವಡಿ ಮಾಡಿದೆ.

ಆಪರೇಷನ್ ಕಮಲದಂತಹ ಅನೈತಿಕ ರಾಜಕಾರಣದಿಂದ ಅಧಿಕಾರಕ್ಕೆ ಬಂದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಹೇಳುವ ಮೂಲಕ ತಮ್ಮ ಪಕ್ಷದ ಶಾಸಕರನ್ನು ಸೆಳೆದುಕೊಂಡು ಸರ್ಕಾರ ರಚಿಸಿರುವ ಬಿಜೆಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ABOUT THE AUTHOR

...view details