ಕರ್ನಾಟಕ

karnataka

ETV Bharat / state

’ಕೇಂದ್ರ ಬಿಜೆಪಿ ಸರ್ಕಾರ ತೊಲಗದ ಹೊರತು ದೇಶಕ್ಕೆ ಉಳಿಗಾಲವಿಲ್ಲ’ ಕೈ ಟ್ವೀಟಾಸ್ತ್ರ - ಕಾಂಗ್ರೆಸ್​ ಟ್ವೀಟ್

ಕೃಷಿ ಆದಾಯ, ರಫ್ತು ಹಾಗೂ ಹೂಡಿಕೆಯೂ ಇಲ್ಲ, ಬೇಡಿಕೆಯೂ ಇಲ್ಲ ಎಂದು ರಾಜ್ಯ ಕಾಂಗ್ರೆಸ್​ ತನ್ನ ಅಧಿಕೃತ ಟ್ವೀಟರ್​ ಖಾತೆಯಲ್ಲಿ ನರೇಂದ್ರ ಮೋದಿ ಸರ್ಕಾರವನ್ನುಟೀಕಿಸಿದೆ.

Congress tweet against central government
ಕಾಂಗ್ರೆಸ್ ಟ್ವೀಟ್

By

Published : Nov 30, 2019, 2:36 PM IST

ಬೆಂಗಳೂರು:ರಾಷ್ಟ್ರದ ಆರ್ಥಿಕ ಸ್ಥಿತಿಯ ಬಗ್ಗೆ ಕಾಂಗ್ರೆಸ್ ಮತ್ತೊಮ್ಮೆ ಮೋದಿ ಸರ್ಕಾರದ ವಿರುದ್ಧ ಕೆಂಡಕಾರಿದೆ. ಈ ಬಗ್ಗೆ ತೀವ್ರವಾಗಿ ಖಂಡಿಸಿ ತನ್ನ ಟ್ವೀಟರ್​ ಖಾತೆಯಲ್ಲಿ ಟೀಕಾಸ್ತ್ರ ಪ್ರಯೋಗಿಸಿದೆ.

ಕಾಂಗ್ರೆಸ್ ಟ್ವೀಟ್

ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ನಿದ್ರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ತೀವ್ರ ನಿಗಾ ಘಟಕದಲ್ಲಿರುವ ದೇಶದ ಆರ್ಥಿಕ ಸ್ಥಿತಿ ತುಂಬಾ ಗಂಭೀರವಾಗಿದೆ. ಹೂಡಿಕೆಯೂ ಇಲ್ಲ, ಬೇಡಿಕೆಯೂ ಇಲ್ಲ, ಉತ್ಪಾದನೆ ಕುಸಿತ, ರಫ್ತು ಕುಸಿತ, ಕೃಷಿ ಆದಾಯ ಕುಸಿತ ಆಗಿದೆ. ಕೇಂದ್ರ ಬಿಜೆಪಿ ಸರ್ಕಾರ ತೊಲಗದ ಹೊರತು ದೇಶಕ್ಕೆ ಉಳಿಗಾಲವಿಲ್ಲ ಎಂದು ಹೇಳಿದೆ.

ಕೇಂದ್ರದ ಆರ್ಥಿಕ ನೀತಿಯನ್ನು ಸದಾ ಟೀಕಿಸುತ್ತ ಬಂದಿರುವ ಕಾಂಗ್ರೆಸ್ ಈ ಸಾರಿಯೂ ಅದನ್ನು ಮುಂದುವರಿಸಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರಕ್ಕೆ ಎದುರಾಗುವ ಆತಂಕಕ್ಕೆ ಬಿಜೆಪಿ ಹೊಣೆಯಾಗಲಿದೆ ಎಂದು ಆರೋಪಿಸಿದೆ.

ABOUT THE AUTHOR

...view details