ಕರ್ನಾಟಕ

karnataka

ETV Bharat / state

ದೇಶದ ಎಲ್ಲಾ ಅಧಃಪತನಗಳಿಗೂ ಕಾರಣ ಯಾರೆಂದು ಬಿಜೆಪಿಗರೇ ತಿಳಿಸಿದ್ದಾರೆ: ಕಾಂಗ್ರೆಸ್​​​ - Bangalore

ಕೇಂದ್ರ ಸರ್ಕಾರದ ಬೆಲೆ ಏರಿಕೆಯನ್ನು ನಿರಂತರವಾಗಿ ಖಂಡಿಸುತ್ತಲೇ ಬಂದಿದ್ದ ರಾಜ್ಯ ಕಾಂಗ್ರೆಸ್​ ಇದೀಗ ಮತ್ತೊಂದು ಹಂತದಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದೆ.

Congress
ಕಾಂಗ್ರೆಸ್

By

Published : Mar 21, 2021, 4:30 PM IST

ಬೆಂಗಳೂರು:ದೇಶದ ಎಲ್ಲಾ ಅಧಃಪತನಗಳಿಗೂ ಕಾರಣವಾದವರು ಯಾರು ಎಂಬುದನ್ನು ಬಿಜೆಪಿ ತಿಳಿಸಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ರಾಜ್ಯ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವೀಟ್ ಖಾತೆಯಲ್ಲಿ ಈ ಲೇವಡಿ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ "ದೇವರ" ಅವತಾರ ಎಂದು ಲಡಾಖ್​ ಬಿಜೆಪಿ ಸಂಸದ ಜಮಿಯಾಂಗ್ ಸೆರಿಂಗ್ ನಂಬ್ಯಾಲ್ ಹೇಳಿದ್ದಾರೆ.

ಇನ್ನೊಂದೆಡೆ ದೇಶದ ಆರ್ಥಿಕ ಕುಸಿತಕ್ಕೆ "ದೇವರ ಆಟ"ವೇ ಕಾರಣ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಎರಡೂ ಹೇಳಿಕೆಯನ್ನು ಗಮನಿಸಿದಾಗ ದೇಶದ ಎಲ್ಲಾ ಅಧಃಪತನಗಳಿಗೂ ಕಾರಣವಾದವರು ಯಾರು ಎಂದು ಭಾರತೀಯರಿಗೆ ಬಿಜೆಪಿಗರೇ ತಿಳಿಸಿದಂತಾಯಿತು ಎಂದಿದೆ.

ಭಾರತೀಯರ ಬಗ್ಗೆ ಕಾಳಜಿ ತೋರಿಸಿ ಪಾಕಿಸ್ತಾನದ ಪಿಎಂ ಮಗಳ ಮದುವೆಗೆ ಹೋಗಿ ಬಂದರು. ಪಾಕ್ ಪಿಎಂರಿಂದ ಸೀರೆ ಉಡುಗೊರೆ ಪಡೆದರು. ಪಾಕ್ ಪಿಎಂಗೆ ಹೃದಯ ಶಸ್ತ್ರ ಚಿಕಿತ್ಸೆ ಆದಾಗ ಹಾರೈಸಿದರು. ಪಾಕ್‌ಗೆ ಉಚಿತ ಲಸಿಕೆ ನೀಡಿ ಔದಾರ್ಯತೆ ಮೆರೆದರು. ಪಾಕ್ ಪಿಎಂ ಕೊರೊನಾದಿಂದ ಗುಣವಾಗಲಿ ಎಂದರು. ನರೇಂದ್ರ ಮೋದಿ ಅವರೇ ಭಾರತೀಯರಿಗೂ ಸ್ವಲ್ಪ ಕಾಳಜಿ ತೋರಿ, 300 ರೈತರು ಸತ್ತಿದ್ದಾರೆ ಎಂದು ಕಾಂಗ್ರೆಸ್​ ಹೇಳಿದೆ.

ಕೇಂದ್ರ ಸರ್ಕಾರದ ಬೆಲೆ ಏರಿಕೆಯನ್ನು ನಿರಂತರವಾಗಿ ಖಂಡಿಸುತ್ತಲೇ ಬಂದಿದ್ದ ರಾಜ್ಯ ಕಾಂಗ್ರೆಸ್​ ಇದೀಗ ಮತ್ತೊಂದು ಹಂತದಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧವೇ ನೇರ ಆಪಾದನೆ ಮಾಡಿದೆ.

ABOUT THE AUTHOR

...view details