ಬೆಂಗಳೂರು : ಕೊರೋನಾ ವೈರಸ್ ಎದುರಿಸಲು ಸಜ್ಜಾಗೋಣ, ಆತಂಕ ಬೇಡ ಎಂದು ಜನರಿಗೆ ಕಾಂಗ್ರೆಸ್ ಪಕ್ಷ ಟ್ವೀಟ್ ಮೂಲಕ ಕರೆ ನೀಡಿದೆ.
ಕೊರೋನಾ ವೈರಸ್ ಎದುರಿಸಲು ಸಜ್ಜಾಗೋಣ : ಕಾಂಗ್ರೆಸ್ ಟ್ವೀಟ್ - ಕಾಂಗ್ರೆಸ್ ಟ್ವೀಟ್ ಸುದ್ದಿ
ಕೋವಿಡ್-19 ಕುರಿತು ಯಾರೂ ಆತಂಕಗೊಳ್ಳಬೇಕಾಗಿಲ್ಲ, ಎಲ್ಲರೂ ಧೈರ್ಯವಾಗಿ ಎದುರಿಸೋಣ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
![ಕೊರೋನಾ ವೈರಸ್ ಎದುರಿಸಲು ಸಜ್ಜಾಗೋಣ : ಕಾಂಗ್ರೆಸ್ ಟ್ವೀಟ್ Congress Tweet](https://etvbharatimages.akamaized.net/etvbharat/prod-images/768-512-6417495-thumbnail-3x2-dr.jpg)
ಕಾಂಗ್ರೆಸ್ ಟ್ವೀಟ್
ಈ ಸಂಬಂಧ ಟ್ವೀಟ್ ಮಾಡಿರುವ ಪಕ್ಷ, ದೇಶದಲ್ಲಿ ಕೋವಿಡ್–19 ಸೋಂಕಿತರ ಸಂಖ್ಯೆ 83ಕ್ಕೆ ಏರಿದೆ, ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ, ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಮನೆಗೆ ತೆರಳಿದವರ ಸಂಖ್ಯೆ 10 ಕ್ಕೆ ಏರಿದೆ.
ಸಾರ್ವಜನಿಕರು ಆತಂಕಪಡದೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಕೊರೊನಾ ವೈರಸ್ ಸೋಂಕು ಹರಡದಂತೆ ಹೋರಾಟವನ್ನು ಮುಂದುವರೆಸೋಣ ಎಂದು ಹೇಳಿದೆ.
ಈ ಮೂಲಕ ಕಾಂಗ್ರೆಸ್ ಪಕ್ಷ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದ ಬಳಕೆ ಮಾಡಿದೆ.