ಬೆಂಗಳೂರು :ಹಿಂದಿನ ಕಾಂಗ್ರೆಸ್ ಸರ್ಕಾರ ಉಳಿದುಕೊಂಡಿದ್ದು, ಆಡಳಿತ ನಡೆಸಿದ್ದು ಡ್ರಗ್ಸ್ ಮಾಫಿಯಾದಿಂದ ಎಂದು ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿರುದ್ಧ ಕಾಂಗ್ರೆಸ್ ಸರಿಯಾಗಿಯೇ ತಿರುಗೇಟು ನೀಡಿದೆ.
'ಕಾಮಿಡಿ ಕಿಲಾಡಿ ಕಟೀಲ್ ಅವ್ರೇ, ಕಲಬೆರಕೆ ಬಿಜೆಪಿ ಸರ್ಕಾರ ರಚನೆಗೆ 'ಡ್ರಗ್ಸ್ ಮಾಫಿಯಾ'ದ ಹಣ ಬಳಕೆ..' - dinesh gundurao tweet against nalin kumar katil
ಕುದುರೆ ವ್ಯಾಪಾರ, ಶಾಸಕರ ಖರೀದಿಯ ಮೂಲಕ ನಿಮ್ಮ ಕಲಬೆರಕೆ ಸರ್ಕಾರ ರಚಿಸಲು ಬಳಕೆಯಾಗಿದ್ದು ಇದೇ 'ಡ್ರಗ್ಸ್ ಮಾಫಿಯಾ'ದ ಹಣ ಎಂಬ ಚರ್ಚೆ ಹಿಂದಿನಿಂದಲೂ ಇದೆ. ಡ್ರಗ್ಸ್ ದಂಧೆಯ ಬಗ್ಗೆ ನಡೆಯುತ್ತಿರುವ ಗಂಭೀರ ತನಿಖೆಯ ದಾರಿ ತಪ್ಪಿಸಲು ಬಾಲಿಶ ಹೇಳಿಕೆಗಳನ್ನು ನೀಡಬೇಡಿ..
!['ಕಾಮಿಡಿ ಕಿಲಾಡಿ ಕಟೀಲ್ ಅವ್ರೇ, ಕಲಬೆರಕೆ ಬಿಜೆಪಿ ಸರ್ಕಾರ ರಚನೆಗೆ 'ಡ್ರಗ್ಸ್ ಮಾಫಿಯಾ'ದ ಹಣ ಬಳಕೆ..' tweet](https://etvbharatimages.akamaized.net/etvbharat/prod-images/768-512-9691754-thumbnail-3x2-dinesh.jpg)
ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆ ಮೂಲಕ ವಾಗ್ದಾಳಿ ನಡೆಸಲಾಗಿದ್ದು, ಕಾಮಿಡಿ ಕಿಲಾಡಿ ನಳಿನ್ ಕುಮಾರ್ ಕಟೀಲು ಅವರೆ, ಕುದುರೆ ವ್ಯಾಪಾರ, ಶಾಸಕರ ಖರೀದಿಯ ಮೂಲಕ ನಿಮ್ಮ ಕಲಬೆರಕೆ ಸರ್ಕಾರ ರಚಿಸಲು ಬಳಕೆಯಾಗಿದ್ದು ಇದೇ 'ಡ್ರಗ್ಸ್ ಮಾಫಿಯಾ'ದ ಹಣ ಎಂಬ ಚರ್ಚೆ ಹಿಂದಿನಿಂದಲೂ ಇದೆ. ಡ್ರಗ್ಸ್ ದಂಧೆಯ ಬಗ್ಗೆ ನಡೆಯುತ್ತಿರುವ ಗಂಭೀರ ತನಿಖೆಯ ದಾರಿ ತಪ್ಪಿಸಲು ಬಾಲಿಶ ಹೇಳಿಕೆಗಳನ್ನು ನೀಡಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷರಿಗೆ ತಿರುಗೇಟು ನೀಡಿದೆ ಕಾಂಗ್ರೆಸ್.
ದಿನೇಶ್ ಗುಂಡೂರಾವ್ ವಾಗ್ದಾಳಿ :ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲುರವರಿಗೆ ಆದಷ್ಟೂ ಬೇಗ ಮಾನಸಿಕ ಚಿಕಿತ್ಸೆ ಕೊಡಿಸುವುದು ಒಳಿತು. 'ತಾನು ಕಳ್ಳ..ಪರರ ನಂಬ' ಎಂಬಂತೆ ಇವರೇ ಡ್ರಗ್ಸ್ ನಶೆಯಲ್ಲಿ ಮಾತನಾಡುತ್ತಿದ್ದಾರೆ. ಡ್ರಗ್ಸ್ ಮಾಫಿಯಾದ ಬಗ್ಗೆ ನಾನೇ ಬರೆದಿರುವ ಲೇಖನವನ್ನೊಮ್ಮೆ ಕಟೀಲ್‌ರವರು ಓದಲಿ. ಬಾಯಿಗೆ ಬಂದಂತೆ ಮಾತನಾಡುವುದು ನಾಯಕನ ಲಕ್ಷಣವಲ್ಲ ಎಂದಿದ್ದಾರೆ.
TAGGED:
ಕಾಂಗ್ರೆಸ್ ಲೇಟೆಸ್ಟ್ ಟ್ವೀಟ್