ಕರ್ನಾಟಕ

karnataka

ETV Bharat / state

ಯಾತ್ರೆಯಲ್ಲಿ ಫೈರಿಂಗ್​ ಪ್ರಕರಣ:  ಸಚಿವ ಖೂಬಾ, ಚಿಂಚನಸೂರು ಬಂಧಿಸುವಂತೆ ಕಾಂಗ್ರೆಸ್​ ಒತ್ತಾಯ - Bhagwant Khoba and Baburao Chinchsanur

ಬಂದೂಕು ಹಿಡಿದು ಅಟ್ಟಹಾಸಗೈದಿದ್ದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಮತ್ತು ಇತರ ಬಿಜೆಪಿ ಮುಖಂಡರು. ಆದರೆ, ಪೊಲೀಸರು ಬಂಧಿಸಿದ್ದು ಕೇವಲ ಕಾರ್ಯಕರ್ತರನ್ನ ಮಾತ್ರ ಎಂದು ರಾಜ್ಯ ಕಾಂಗ್ರೆಸ್ ಘಟಕ ಆರೋಪಿಸಿದೆ.

congress
ಕಾಂಗ್ರೆಸ್

By

Published : Aug 19, 2021, 3:34 PM IST

ಬೆಂಗಳೂರು: ತಾಲಿಬಾನಿ ಬಿಜೆಪಿಯ ಭಯೋತ್ಪಾದಕ ಯಾತ್ರೆಯಲ್ಲಿ ಗುಂಡು ಹಾರಿಸಿದ ಪ್ರಕರಣದಲ್ಲಿ ಭಗವಂತ್ ಖೂಬಾ, ಬಾಬುರಾವ್ ಚಿಂಚನಸೂರ್‌ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರ ಮೇಲೆ ಕೇಸ್ ದಾಖಲಿಸಿ ಬಂಧಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಘಟಕ ಆಗ್ರಹಿಸಿದೆ.

ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್​

ಈ‌ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಗುಂಡು ಹಾರಿಸಿದ ಪ್ರಕರಣದಲ್ಲಿ ಭಗವಂತ್ ಖೂಬಾ, ಬಾಬುರಾವ್ ಚಿಂಚನಸೂರ್‌ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರ ಮೇಲೆ ಕೇಸ್ ದಾಖಲಿಸಿ ಬಂಧಿಸಬೇಕು. ಇವರೇ ಈ ಪ್ರಕರಣದ ಹೊಣೆಗಾರರು. ಬಿಜೆಪಿ ಪಕ್ಷ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿರುವ ಶಂಕೆ ಇದ್ದು, ಪೊಲೀಸರು ಬಿಜೆಪಿ ಕಚೇರಿಗಳನ್ನು ಶೋಧಿಸಬೇಕು ಎಂದು ಒತ್ತಾಯಿಸಿದೆ.

ಬಂದೂಕು ಹಿಡಿದು ಅಟ್ಟಹಾಸ ಮಾಡಿರುವ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಮತ್ತು ಇತರ ಬಿಜೆಪಿ ಮುಖಂಡರು. ಆದರೆ, ಪೊಲೀಸರು ಬಂಧಿಸಿದ್ದು ಕೇವಲ ಕಾರ್ಯಕರ್ತರನ್ನ ಮಾತ್ರ. ಮಾಜಿ ಸಚಿವರ ಮೇಲೆ ಕೇಸ್ ದಾಖಲಿಸಿ, ಬಂಧಿಸದಿರುವುದೇಕೆ?. ತನ್ನ ರಾಜಕೀಯ ಹಿತಾಸಕ್ತಿಗೆ ಅಮಾಯಕ ಕಾರ್ಯಕರ್ತರನ್ನ ಬಲಿ ಕೊಡುವುದು ತಾಲಿಬಾನ್ ಸಂಸ್ಕೃತಿಯ ಬಿಜೆಪಿಗೆ ಹಳೆಯ ಚಾಳಿ ಎಂದು ಟೀಕಿಸಿದೆ.

ಓದಿ:ಮೂರನೇ ಅಲೆ ನಿಯಂತ್ರಣದಲ್ಲಿದೆ, ಯಾರೂ ಆತಂಕಪಡಬೇಕಿಲ್ಲ: ಸಚಿವ ಅಶ್ವತ್ಥ ನಾರಾಯಣ

ABOUT THE AUTHOR

...view details