ಕರ್ನಾಟಕ

karnataka

ETV Bharat / state

ತರೀಕೆರೆ​ ಟಿಕೆಟ್​ ಸಂಬಂಧ ಗೋಪಿಕೃಷ್ಣ ಬೆಂಬಲಿಗರ ಪ್ರತಿಭಟನೆ: ಕೆಪಿಸಿಸಿ ಕಚೇರಿ ಬಳಿ ವ್ಯಕ್ತಿ ಆತ್ಮಹತ್ಯೆ ಯತ್ನ - ಕೆಪಿಸಿಸಿ ಕಚೇರಿ ಮುಂಭಾಗ ಮಡಿವಾಳ ಸಮುದಾಯದವರು ಪ್ರತಿಭಟನೆ

ಕಾಂಗ್ರೆಸ್​​ ಟಿಕೆಟ್ ಹಂಚಿಕೆ ವಿಚಾರ ಸಂಬಂಧ ಕೆಪಿಸಿಸಿ ಕಚೇರಿ ಮುಂಭಾಗ ಮಡಿವಾಳ ಸಮುದಾಯದವರು ಪ್ರತಿಭಟನೆ ನಡೆಸಿದ್ದು, ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ.

congress-ticket-aspirant-supporters-protest-near-kpcc-office
ತರೀಕೆರೆ​ ಟಿಕೆಟ್​ ಸಂಬಂಧ ಗೋಪಿಕೃಷ್ಣ ಬೆಂಬಲಿಗರಿಂದ ಪ್ರತಿಭಟನೆ: ಕೆಪಿಸಿಸಿ ಕಚೇರಿ ಬಳಿ ಆತ್ಮಹತ್ಯೆ ಯತ್ನ

By

Published : Apr 3, 2023, 12:39 PM IST

Updated : Apr 3, 2023, 2:58 PM IST

ತರೀಕೆರೆ​ ಟಿಕೆಟ್​ ಸಂಬಂಧ ಗೋಪಿಕೃಷ್ಣ ಬೆಂಬಲಿಗರ ಪ್ರತಿಭಟನೆ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರಿನ ತರೀಕೆರೆ ಕ್ಷೇತ್ರದಿಂದ ಹೆಚ್​​.ಎಂ. ಗೋಪಿಕೃಷ್ಣಗೆ ಕಾಂಗ್ರೆಸ್ ಟಿಕೆಟ್​ ನೀಡುವಂತೆ ಆಗ್ರಹಿಸಿ ಮಡಿವಾಳ ಸಮುದಾಯದವರು ಹಾಗೂ ಬೆಂಬಲಿಗರು ಕೆಪಿಸಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭ ಬೆಂಬಲಿಗನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಹ ನಡೆದಿದೆ.

ಕೆಪಿಸಿಸಿ ಕಚೇರಿ ಮುಂಭಾಗ ತರಿಕೆರೆ ಹೆಚ್​.ಎಂ ಗೋಪಿಕೃಷ್ಣ ಮಡಿವಾಳ ಸಮುದಾಯದ ಬೆಂಬಲಿಗರು ಹೈಡ್ರಾಮಾ ನಡೆಸಿದ್ದಾರೆ. ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಶ್ರೀನಿವಾಸ್​​ಗೆ ಅವಕಾಶ ಸಿಗುವ ಸಾಧ್ಯತೆ ಇರುವ ಕಾರಣ ಗೋಪಿಕೃಷ್ಣ ಅಭಿಮಾನಿಗಳು ಪ್ರತಿಭಟನೆ ಮೂಲಕ ಒತ್ತಡ ಹೇರುವ ತಂತ್ರಗಾರಿಕೆ ನಡೆಸಿದ್ದಾರೆ. ಇದೇ ವೇಳೆ ಬೆಂಬಲಿಗ ವ್ಯಕ್ತಿಯೋರ್ವ ಟಿಕೆಟ್ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದು, ಆಗ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಸಮಸ್ಯೆ ಏನೇ ಇದ್ದರೂ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಿ, ಈ ರೀತಿಯ ಪ್ರತಿಭಟನೆಯಿಂದ ಪ್ರಯೋಜನವಿಲ್ಲ ಎಂದು ತಿಳಿಹೇಳಿದ್ದಾರೆ.

''ಮಡಿವಾಳ ಸಮುದಾಯಕ್ಕೆ ತರೀಕೆರೆಯಿಂದ ಟಿಕೆಟ್ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದರು. ಒಂದು ವಿಧಾನಸಭೆ ಟಿಕೆಟ್, ಮತ್ತೊಂದು ಪರಿಷತ್​ ಟಿಕೆಟ್ ಕೊಡುವುದಾಗಿ ಭರವಸೆ ಕೊಟ್ಟಿದ್ದರು. ಹೀಗೆ ಕೊಟ್ಟ ಮಾತಿನಂತೆ ತರೀಕೆರೆಯಲ್ಲಿ ಮಡಿವಾಳ ಸಮುದಾಯಕ್ಕೆ ಟಿಕೆಟ್ ನೀಡಬೇಕು. ಗೋಪಿಕೃಷ್ಣಗೆ ಟಿಕೆಟ್ ಸಿಗಬೇಕು'' ಎಂದು ಮಡಿವಾಳರ ಸಂಘದ ಅಧ್ಯಕ್ಷ ನಂಜಪ್ಪ ಆಗ್ರಹ ಮಾಡಿದರು.

ಇದನ್ನೂ ಓದಿ : ರಾಜ್ಯ ಕಾಂಗ್ರೆಸ್ ನಾಸಿಎಂ ಅಭ್ಯರ್ಥಿ ಘೋಷಣೆಗೆ ಕಾಂಗ್ರೆಸ್, ಬಿಜೆಪಿ ಹೈಕಮಾಂಡ್ ಹಿಂದೇಟು; ಸಾರಥಿ ಇಲ್ಲದೇ ಚುನಾವಣೆ ಪ್ರಚಾರ

ಕಾಂಗ್ರೆಸ್​ ನಾಯಕರು ಇಂದು ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಗಮನ ಸೆಳೆಯಲು ತರೀಕೆರೆ ಭಾಗದ ಗೋಪಿಕೃಷ್ಣ ಬೆಂಬಲಿಗರು, ಅಭಿಮಾನಿಗಳು ಈ ಹೈಡ್ರಾಮಾ ನಡೆಸಿದ್ದಾರೆ. ಈ ವಿಚಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿದ್ದು, ''ತರೀಕೆರೆ ಟಿಕೆಟ್ ಯಾರಿಗೆ ಅಂತ ಇನ್ನೂ ಫೈನಲ್ ಆಗಿಲ್ಲ. ನಾಳೆ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ತೀರ್ಮಾನ ಆಗಲಿದೆ. ಹೆಸರುಗಳು ಶಿಫಾರಸು ಆಗಿವೆ'' ಎಂದಿದ್ದಾರೆ.

ಕಾಂಗ್ರೆಸ್​ನಿಂದ ಹಾನಿ ನಿಯಂತ್ರಣ :ಪಕ್ಷದ ವರ್ಚಸ್ಸಿಗೆ ಹಾನಿ ಉಂಟುಮಾಡುವ ಚಟುವಟಿಕೆಗೆ ಕಡಿವಾಣ ಹಾಕಲು ಮುಂದಾಗಿರುವ ಕಾಂಗ್ರೆಸ್ ನಾಯಕರು ಟಿಕೇಟ್ ಸಿಗದೇ ಬಂಡಾಯ ಏಳುವವರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಮಾಡುವಂತಿಲ್ಲ. ಪಕ್ಷ ಘೊಷಿಸಿರುವ ಅಭ್ಯರ್ಥಿಗಳ ವಿರುದ್ದ ಪೋಸ್ಟ್ ಮಾಡುವುದಾಗಲಿ ಅಥವಾ ಕಮೆಂಟ್ಸ್ ಕೂಡ ಮಾಡುವಂತಿಲ್ಲ. ಹಾಗೆ ಮಾಡಿದರೆ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಗಂಭೀರವಾಗಿ ಪರಿಗಣಿಸಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಶಿಸ್ತು ಪಾಲನಾ ಸಮಿತಿಯಿಂದ ಎಚ್ಚರಿಕೆಯ ಸೂಚನೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ :ಮಾಸ್ ಲೀಡರ್​​ಗಳ ಕೊರತೆ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್​​ಗೆ 'ಮಾಜಿ ಸಿಎಂ'ಗಳೇ ಪಿಲ್ಲರ್!

Last Updated : Apr 3, 2023, 2:58 PM IST

ABOUT THE AUTHOR

...view details