ಬೆಂಗಳೂರು:ಕೋವಿಡ್ ಲಸಿಕೆ ನೀಡಿಕೆಯಲ್ಲಿ ವಿಳಂಬವಾಗುತ್ತಿದ್ದು ಸಾಕಷ್ಟು ಮಂದಿ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಲಸಿಕೆ ನೀಡಿಕೆಗೆ ಕಾಂಗ್ರೆಸ್ ಪಕ್ಷಕ್ಕೆ ಅನುಮತಿ ನೀಡಬೇಕೆಂದು ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜನರೆಡೆಗೆ ಸರ್ಕಾರದ ನಿರಾಸಕ್ತಿಯ ಕಾರಣದಿಂದಾಗಿ ನಿನ್ನೆ 382 ಕೋವಿಡ್ ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ದುಃಖತಪ್ತ ಕುಟುಂಬಗಳ ಪರಿಸ್ಥಿತಿ ನೋಡಿದರೆ ಹೃದಯ ಭಾರವಾಗುತ್ತದೆ. ಜೀವಗಳನ್ನು ಉಳಿಸಲು ಸಮಯ ಅತ್ಯಂತ ಮಹತ್ವದ್ದು ಮತ್ತು ಸರ್ಕಾರ ತಡಮಾಡದೆ ಕಾಂಗ್ರೆಸ್‌ಗೆ ಲಸಿಕೆ ವಿತರಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.