ಬೆಂಗಳೂರು:ರಾಜ್ಯ ಸರ್ಕಾರದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಪೇಸಿಎಂ ಅಭಿಯಾನವನ್ನು ಮುಂದುವರಿಸಿದೆ. ಸಾಮಾಜಿಕ ಜಾಲತಾಣದ ಮೂಲಕ ಪೇಸಿಎಂ ಅಭಿಯಾನ ನಡೆಸಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರಕ್ಕೆ ತೀವ್ರ ಮಜುಗರ ಉಂಟಾಗುತ್ತಿದೆ. ಇದನ್ನು ಹತ್ತಿಕ್ಕಲು ಸಾಕಷ್ಟು ಪ್ರಯತ್ನ ಮುಂದುವರಿಸಿರುವ ಬೆನ್ನಲ್ಲೇ ಇನ್ನೊಂದು ಹಂತದಲ್ಲಿ ಅಭಿಯಾನ ಕಾಂಗ್ರೆಸ್ ಆರಂಭಿಸಿದೆ.
ಬೆಂಗಳೂರು ನಗರದಲ್ಲಿ ಸಂಚರಿಸುವ ಕೆಲ ಆಟೋಗಳಿಗೆ ಶೇ 40ರಷ್ಟು ಕಮಿಷನ್ ಸರ್ಕಾರ ಎಂಬ ಜಾಹೀರಾತು ಒಳಗೊಂಡ ಕವರ್ಗಳನ್ನ ಅಳವಡಿಸಿ ಪ್ರಚಾರ ಮಾಡಿದರೆ, ಸಂಜೆಯ ಹೊತ್ತಿಗೆ ಗ್ರಾಫಿಕ್ ವಿಡಿಯೋ ಸಹ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಈ ಅಭಿಯಾನವನ್ನು ಕಾಂಗ್ರೆಸ್ ಮುಂದುವರೆಸಿಕೊಂಡು ಸಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ನ ಪೇಸಿಎಂ ಅಭಿಯಾನಕ್ಕೆ ತಿರುಗೇಟು: ಕೈಪೇ ಕ್ಯೂಆರ್ ಕೋಡ್ ಬಿಡುಗಡೆ ಮಾಡಿದ ಬಿಜೆಪಿ
ಮೂರು ದಿನದ ಹಿಂದೆ ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ರಾತೋರಾತ್ರಿ ನಗರದ ಹಲವೆಡೆ ಸಿಎಂ ಭಾವಚಿತ್ರ ಒಳಗೊಂಡ ಪೇಸಿಎಂ ಕ್ಯೂಆರ್ ಕೋಡ್ ಒಳಗೊಂಡ ಪೋಸ್ಟರ್ಗಳನ್ನು ಅಂಟಿಸುವ ಮೂಲಕ ಅಭಿಯಾನವನ್ನು ಕಾಂಗ್ರೆಸ್ ಆರಂಭಿಸಿತ್ತು. ಇದಾದ ಬಳಿಕ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ವಿವಿಧ ಹಗರಣಗಳ ಮಾಹಿತಿ ನೀಡಿ ಲೇವಡಿ ಮಾಡಲಾಗಿತ್ತು.