ಬೆಂಗಳೂರು :ಕೇಂದ್ರ ಸರ್ಕಾರದಿಂದ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವಿರೋಧಿಸಿ ನಾಳೆ ಕಾಂಗ್ರೆಸ್ ನಾಯಕರು ವಿನೂತನ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಪೆಟ್ರೋಲ್,ಡೀಸೆಲ್ ದರ ಏರಿಕೆ ಖಂಡಿಸಿ ನಾಳೆ ಸಿದ್ದು,ಡಿಕೆಶಿ ಸೈಕಲ್ ಪ್ರತಿಭಟನೆ.. - ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
10.30ಕ್ಕೆ ಪಕ್ಷದ ಎಲ್ಲಾ ನಾಯಕರು ಸೈಕಲ್ ಮೇಲೆ ತೆರಳಿ ಆದಾಯ ತೆರಿಗೆ ಕಟ್ಟಡದ ಮುಂಭಾಗ ಧರಣಿ ನಡೆಸಲಿದ್ದಾರೆ. ಡಿ ಕೆ ಶಿವಕುಮಾರ್ ತಮ್ಮ ಸದಾಶಿವನಗರದ ನಿವಾಸದಿಂದ ಹೊರಟ್ರೆ, ಶಿವಾನಂದ ವೃತ್ತ ಸಮೀಪ ಇರುವ ಸರ್ಕಾರಿ ನಿವಾಸದಿಂದ ಸಿದ್ದರಾಮಯ್ಯ ಹೊರಡಲಿದ್ದಾರೆ..
ನಾಳೆ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಮಿನ್ಸ್ ಸ್ಕ್ವೇರ್ ವೃತ್ತದ ಆದಾಯ ತೆರಿಗೆ ಕಟ್ಟಡದ ಮುಂಭಾಗದಲ್ಲಿ ಕೆಪಿಸಿಸಿ ಧರಣಿ ಹಮ್ಮಿಕೊಂಡಿದೆ. ಈ ಧರಣಿಯಲ್ಲಿ ಭಾಗವಹಿಸಲು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಮನೆಯಿಂದಲೇ ಬೆಳಗ್ಗೆ 9.30ಕ್ಕೆ ಸೈಕಲ್ನಲ್ಲಿ ಹೊರಟು ಬೆಳಗ್ಗೆ 10 ಗಂಟೆಗೆ ಕೆಪಿಸಿಸಿ ಕಚೇರಿ ತಲುಪಲಿದ್ದಾರೆ.
ಆನಂತರ 10.30ಕ್ಕೆ ಪಕ್ಷದ ಎಲ್ಲಾ ನಾಯಕರು ಸೈಕಲ್ ಮೇಲೆ ತೆರಳಿ ಆದಾಯ ತೆರಿಗೆ ಕಟ್ಟಡದ ಮುಂಭಾಗ ಧರಣಿ ನಡೆಸಲಿದ್ದಾರೆ. ಡಿ ಕೆ ಶಿವಕುಮಾರ್ ತಮ್ಮ ಸದಾಶಿವನಗರದ ನಿವಾಸದಿಂದ ಹೊರಟ್ರೆ, ಶಿವಾನಂದ ವೃತ್ತ ಸಮೀಪ ಇರುವ ಸರ್ಕಾರಿ ನಿವಾಸದಿಂದ ಸಿದ್ದರಾಮಯ್ಯ ಹೊರಡಲಿದ್ದಾರೆ. ಸೈಕಲ್ ಏರಿ ಬರುವುದನ್ನು ಇಬ್ಬರೂ ನಾಯಕರು ಕೆಲ ದಿನದಿಂದ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರಂತೆ.