ಬೆಂಗಳೂರು: ರಾಜ್ಯ ಉಳಿಸುವುದಕ್ಕೆ, ದೇಶ ಉಳಿಸುವುದಕ್ಕೆ, ಸಂವಿಧಾನ ಉಳಿಸುವುದಕ್ಕೆ 'ಕಾಂಗ್ರೆಸ್ ಪಕ್ಷವನ್ನು ಕಿತ್ತು ಒಗೆಯಬೇಕು' ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ ಪಕ್ಷವನ್ನು ಕಿತ್ತು ಒಗೆಯಬೇಕು ಎನ್ನುವುದರ ಬದಲು ಈ ರೀತಿ ಹೇಳಿದ್ದು, ನೆರೆದಿದ್ದ ಕಾರ್ಯಕರ್ತರು ಕ್ಷಣಕಾಲ ದಂಗಾದರು. ತಕ್ಷಣವೇ ಎಚ್ಚೆತ್ತ ಅವರು ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಂಡರು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕೇಂದ್ರ ಸರ್ಕಾರದ ಇಂಧನ ಬೆಲೆ ಏರಿಕೆ ಹಾಗೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಖಂಡಿಸಿ ಕಾಂಗ್ರೆಸ್ ಪಕ್ಷ ಕರೆದಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಅವರು, ಪಕ್ಷದ ವಿರುದ್ಧವೇ ಬಾಯ್ತಪ್ಪಿ ಮಾತನಾಡಿದರು. ಸಿದ್ದರಾಮಯ್ಯ ಈ ರೀತಿ ಮಾತನಾಡುವುದು ಹೊಸದೇನೂ ಅಲ್ಲ. ಸಾಮಾನ್ಯವಾಗಿ ಬಿಜೆಪಿ ಪಕ್ಷವನ್ನು ತೆಗಳುವ ಸಂದರ್ಭದಲ್ಲಿ ಬಿಜೆಪಿ ಬದಲು ಕಾಂಗ್ರೆಸ್ ಪಕ್ಷದ ಹೆಸರನ್ನು ಬಾಯಿತಪ್ಪಿ ಹೇಳಿದ್ದು ಈ ಹಿಂದೆಯೂ ವರದಿಯಾಗಿತ್ತು.
'ದೇಶ ಉಳಿಸಲು ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕು' ಎಂದ ಸಿದ್ದರಾಮಯ್ಯ! ಇದನ್ನೂ ಓದಿ: ಮೇ ಎರಡನೇ ವಾರದಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ: ಶಿಕ್ಷಣ ಸಚಿವ ನಾಗೇಶ್
ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಂದರ್ಭ, ನಾವು ಅಧಿಕಾರ ಅನುಭವಿಸಬೇಕು ಎಂದಲ್ಲ. ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಿರಿ ಎಂದರು. ಸಿದ್ದರಾಮಯ್ಯ ಮಾತಿಗೆ ಬೆಚ್ಚಿದ ಕಾರ್ಯಕರ್ತರು ಅಚ್ಚರಿ ವ್ಯಕ್ತಪಡಿಸಿದರು. 'ಸರ್ ಕಾಂಗ್ರೆಸ್ ಅಲ್ಲ, ಬಿಜೆಪಿ ಸರ್' ಎಂದರು. ಈಗ ಇದು ಉದ್ದೇಶಪೂರ್ವಕವಾಗಿ ಆಡಿದ ಮಾತಲ್ಲ, ಬಾಯಿ ತಪ್ಪಿ ಆಡಿದ ಮಾತು. ಬಿಜೆಪಿಯನ್ನು ಕಿತ್ತು ಒಗೆಯಬೇಕು ಎಂದು ಹೇಳಿಕೆ ಸರಿಪಡಿಸಿಕೊಂಡರು.
ಕಾಂಗ್ರೆಸ್ ಪಕ್ಷ ಸಾಮಾನ್ಯ ಜನರ ಧ್ವನಿಯಾಗಿ ಹೋರಾಟ ಮಾಡುತ್ತಿದೆ. ಮೋದಿ ಸಿಎಂ ಆಗಿದ್ದಾಗ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ರು. ಸ್ವಲ್ಪ ಬೆಲೆ ಏರಿಕೆ ಆಗಿದ್ದಕ್ಕೆ ಮೋದಿ ಹೋರಾಟ ಮಾಡಿದ್ರು. ಕಟುವಾದ ಶಬ್ದದಿಂದ ಟೀಕೆ ಮಾಡಿದ್ರು. ಬಿಜೆಪಿ ಅಂದ್ರೆ ಸುಳ್ಳಿನ ಕಾರ್ಖಾನೆ. ಮೋದಿ ನಿರಂತರವಾಗಿ ಸುಳ್ಳು ಹೇಳ್ತಾರೆ. ಒಂದು ಸತ್ಯ ಕೂಡ ಇಲ್ಲಿಯವರೆಗೆ ಹೇಳಲಿಲ್ಲ ಎಂದು ವಾಗ್ದಾಳಿ ನಡೆಸಿದರು.