ಕರ್ನಾಟಕ

karnataka

ETV Bharat / state

ಪರಿಷ್ಕೃತ ಪಠ್ಯ ರದ್ದತಿಗೆ ಆಗ್ರಹಿಸಿ ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್​ ಪ್ರತಿಭಟನೆ - protest over syllabus issue

ಪರಿಷ್ಕೃತ ಪಠ್ಯ ರದ್ದುಗೊಳಿಸಿ, ಹಿಂದಿನ ಪಠ್ಯಕ್ರಮ ಮುಂದುವರಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು.

Congress protest over revised syllabus issue
ಕಾಂಗ್ರೆಸ್ ಬೃಹತ್ ಪ್ರತಿಭಟನೆ

By

Published : Jun 9, 2022, 3:31 PM IST

ಬೆಂಗಳೂರು: ಪರಿಷ್ಕೃತ ಪಠ್ಯ ರದ್ದುಗೊಳಿಸಿ ಹಿಂದಿನ ಪಠ್ಯಕ್ರಮ ಮುಂದುವರಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿ ಪಕ್ಷದ ಪ್ರಮುಖರು ಭಾಗಿಯಾಗಿದ್ದರು.

ಇತಿಹಾಸ ತಿರುಚುತ್ತಿರುವ ಶಿಕ್ಷಣ ಸಮಿತಿಗೆ ಧಿಕ್ಕಾರ, ಪಠ್ಯಕ್ರಮ ಬದಲು ಮಾಡಲು ಹೊರಟ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ, ಶಿಕ್ಷಣವನ್ನು ಕೇಸರೀಕರಣ ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಧಿಕ್ಕಾರ, ರೋಹಿತ್ ಚಕ್ರತಿರ್ಥರನ್ನು ಬಂಧಿಸಿ, ಸಂಘಪರಿವಾರವನ್ನು ಬೆಂಬಲಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಪರಿಷ್ಕೃತ ಪಠ್ಯ ಕ್ರಮವನ್ನು ರದ್ದುಗೊಳಿಸಿ, ಇಲ್ಲವಾದರೆ ಹೋರಾಟ ಮುಂದುವರಿಸಲಾಗುವುದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಸಾರ್ವಜನಿಕರು, ಮಠಾಧೀಶರು, ಸಾಹಿತಿಗಳಿಂದ, ಶಿಕ್ಷಣ ತಜ್ಞರಿಂದ, ರಾಜಕಾರಣಿಗಳಿಂದ ಪಠ್ಯ ಪರಿಷ್ಕರಣೆಗೆ ವಿರೋಧ ವ್ಯಕ್ತವಾಯಿತು. ಅದಕ್ಕಾಗಿ ರೋಹಿತ್ ಚಕ್ರತೀರ್ಥರ ಸಮಿತಿ ವಿಸರ್ಜನೆ ಮಾಡಲಾಗಿದೆ. ವಿಸರ್ಜನೆ ಆದ ಮೇಲೆ ಅವರು ಪರಿಷ್ಕರಿಸಿದ ಪಠ್ಯ ರದ್ದು ಮಾಡಬೇಕು. ಅದರಲ್ಲಿ ಇತಿಹಾಸ ತಿರುಚಲಾಗಿದ್ದು, ಮಕ್ಕಳಿಗೆ ಆ ಪಾಠವನ್ನು ಭೋದಿಸಬಾರದು. ಆರ್​ಎಸ್​ಎಸ್, ಕೇಸರಿಕರಣದ ವಿರುದ್ಧ ನಾವಿದ್ದೇವೆ. ಅವರು ಅಂಬೇಡ್ಕರ್, ಕನಕದಾಸರಿಗೆ, ಬಸವಣ್ಣ, ಕುವೆಂಪು ಸೇರಿದಂತೆ ದಾಸರು, ವಚನಕಾರರಿಗೆ ಅಪಮಾನ ಮಾಡಿದ್ದಾರೆ. ಮಕ್ಕಳ ಮನಸ್ಸಿಗೆ ವಿಷವುಣಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ:'ನಾನು ಬಜೆಪಿ ನಾಯಕರನ್ನು ಟೀಕಿಸಿದರೆ ನಮ್ಮ ಪಕ್ಷದವರೇ ನನ್ನನ್ನು ಸಮರ್ಥಿಸಿಕೊಳ್ಳುವುದಿಲ್ಲ'

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಮಾತನಾಡಿ, ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಬೇಕೆಂಬ ಅಭಿಲಾಷೆ ಜೆಡಿಎಸ್​​ಗಿದ್ದರೆ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಅನ್ನು ಬೆಂಬಲಿಸಬೇಕೆಂದು ಹೇಳಿದರು. ಹಿಂದೆ ನಾವು ದೇವೇಗೌಡರ ಗೆಲುವಿಗೆ ಬೆಂಬಲ ಕೊಟ್ಟಿದ್ದೆವು. ಈಗ ಅವರೇ ಬೆಂಬಲ ಕೊಡಲಿ ಎಂದು ಕೈಮುಗಿದು ಕೇಳಿಕೊಂಡರು. ಹಳೆಯದೆಲ್ಲ ಮರೆಯೋಣ, ಮಾತುಕತೆ ನಡೆಸೋಣ, ಉಳಿದದ್ದೆಲ್ಲ ಮುಂದೆ. ಈಗ ಜೆಡಿಎಸ್ ನವರೇ ನಮಗೆ ಬೆಂಬಲ ಕೊಡಲಿ ಎಂದರು.

ABOUT THE AUTHOR

...view details