ಕರ್ನಾಟಕ

karnataka

ETV Bharat / state

'ಈ ಪಿಕ್‌ ಪ್ಯಾಕೇಟ್‌ ಬಿಜೆಪಿ ಸರ್ಕಾರಗಳು ರಾಜ್ಯ ಮತ್ತು ದೇಶದಿಂದ ತೊಲಗಬೇಕು..' ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ ಮುಖಂಡರ ಆಕ್ರೋಶ - ಬೆಂಗಳೂರಿನಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ನಿತ್ಯವೂ ಜನರ ಮೇಲೆ ಬೆಲೆ ಏರಿಕೆ ಹೊರಿಸುತ್ತಿರುವುದನ್ನು ಕಂಡರೂ ಕಾಣದ ಹಾಗೆ ನರೇಂದ್ರಮೋದಿ ನಿದ್ರಿಸುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಶ್ಮೀರಿ ಚಿತ್ರಕ್ಕೆ ರಿಯಾಯಿತಿ ನೀಡುತ್ತಿದ್ದಾರೆ ಹೊರತು ಜನರ ಉಪಯೋಗಿಸುವ ವಸ್ತುಗಳಿಗೆ ರಿಯಾಯಿತಿ ನೀಡುತ್ತಿಲ್ಲ. ಇವರು ಕೇವಲ ಕೋಮುವಾದವನ್ನು ಸೃಷ್ಟಿಸಿ ಚುನಾವಣೆಯಲ್ಲಿ ಮತ ಗಳಿಸುವ ತಂತ್ರವನ್ನು ಮಾತ್ರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು..

ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಪ್ರತಿಭಟನೆ
ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಪ್ರತಿಭಟನೆ

By

Published : Apr 5, 2022, 4:47 PM IST

ಬೆಂಗಳೂರು : ಕರ್ನಾಟಕ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ನಿರಂತರವಾಗಿ ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಸಿ ಜನರ ಜೀವಕ್ಕೆ ಕುತ್ತು ತರುತ್ತಿದೆ. ಪ್ರಸ್ತುತ ಏಪ್ರಿಲ್ ತಿಂಗಳಿನಿಂದ ಪ್ರತಿ ಯೂನಿಟ್​ಗೆ 35 ಪೈಸೆ ದರ ಏರಿಕೆ ಮಾಡುವುದರ ಮೂಲಕ ವಿದ್ಯುತ್ ದರ ಏರಿಸಿ ಜನರಿಗೆ ಶಾಕ್ ನೀಡಿದೆ.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜನ ವಿರೋಧಿ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಜನರು ನಿತ್ಯ ಜೀವನ ಸಾಗಿಸುವುದು ಅತ್ಯಂತ ಕಷ್ಟಕರವಾಗಿದೆ. ಬೆಲೆ ಏರಿಕೆಯೇ ಬಿಜೆಪಿಯ ಒಂದಂಶದ ಕಾರ್ಯಕ್ರಮವಾಗಿದೆ ಎಂದು ಆರೋಪಿಸಿ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆಯ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಪ್ರತಿಭಟನೆ

ರಾಜ್ಯ ಕಂಡ ಅತ್ಯಂತ ಜನವಿರೋಧಿ ಆಡಳಿತ : ಡೀಸೆಲ್, ಪೆಟ್ರೋಲ್, ಅಗತ್ಯ ವಸ್ತುಗಳ ದರ ಏರಿಕೆಯಿಂದ ಪ್ರತಿನಿತ್ಯ ಜನಸಾಮಾನ್ಯರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಜನರ ಸಂಕಷ್ಟವನ್ನು ಕಣ್ಣಾರೆ ಕಾಣುವ ಶಕ್ತಿಯನ್ನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಳೆದುಕೊಂಡಿವೆ. ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗಿವೆ. ಬಿಜೆಪಿ ಪಕ್ಷ ಸ್ವಾತಂತ್ರ್ಯ ಇತಿಹಾಸದಲ್ಲಿ ದೇಶ ಹಾಗೂ ರಾಜ್ಯ ಕಂಡ ಅತ್ಯಂತ ಜನವಿರೋಧಿ ಆಡಳಿತ ನೀಡಿದೆ ಹಾಗೂ ಭ್ರಷ್ಟ ಸರ್ಕಾರ ಎಂದು ಖ್ಯಾತಿಗಳಿಸಿದೆ ಎಂದು ಕಾಂಗ್ರೆಸ್ ಮುಖಂಡ ಎಸ್. ಮನೋಹರ್ ಆರೋಪಿಸಿದರು.

ನಿತ್ಯವೂ ಜನರ ಮೇಲೆ ಬೆಲೆ ಏರಿಕೆ ಹೊರಿಸುತ್ತಿರುವುದನ್ನು ಕಂಡರೂ ಕಾಣದ ಹಾಗೆ ನರೇಂದ್ರಮೋದಿ ನಿದ್ರಿಸುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಶ್ಮೀರಿ ಚಿತ್ರಕ್ಕೆ ರಿಯಾಯಿತಿ ನೀಡುತ್ತಿದ್ದಾರೆ ಹೊರತು ಜನರ ಉಪಯೋಗಿಸುವ ವಸ್ತುಗಳಿಗೆ ರಿಯಾಯಿತಿ ನೀಡುತ್ತಿಲ್ಲ. ಇವರು ಕೇವಲ ಕೋಮುವಾದವನ್ನು ಸೃಷ್ಟಿಸಿ ಚುನಾವಣೆಯಲ್ಲಿ ಮತ ಗಳಿಸುವ ತಂತ್ರವನ್ನು ಮಾತ್ರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರಕ್ಕೆ ಜನರಿಂದ ಶಾಪ : ರಸ್ತೆಯಲ್ಲಿ ಜನರು ರಾಜ್ಯ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಈ ಸರ್ಕಾರ ಕೂಡಲೇ ತೊಲಗಬೇಕು ಇದೊಂದು ಜನವಿರೋಧಿ ಸರ್ಕರವೆಂದು ಸಾರ್ವಜನಿಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಬೆಲೆ ಏರಿಕೆಗೆ ಕಡಿವಾಣ ಹಾಕುವ ಪ್ರಯತ್ನವನ್ನು ಮಾಡುತ್ತಿಲ್ಲ. ಲಕ್ಷ, ಕೋಟಿಗಟ್ಟಲೆ ಸಾಲ ಮಾಡಿ ನಿತ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಈ ಪಿಕ್ ಪ್ಯಾಕೆಟ್ ಸರ್ಕಾರ ಕೂಡಲೇ ದೇಶ ಹಾಗೂ ಕರ್ನಾಟಕದಿಂದ ತೊಲಗಬೇಕು. ಈ ಸರ್ಕಾರ ತೊಲಗದೆ ಹೋದರೆ ಜನರು ಇನ್ನೂ ಜೀವಂತವಾಗಿ ಉಳಿಯುವುದು ಅತ್ಯಂತ ಕಠಿಣವಾಗಲಿದೆ ಎಂದರು.

ಅಗತ್ಯ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಿ :ಕೂಡಲೇ ಡೀಸೆಲ್, ಪೆಟ್ರೋಲ್, ವಿದ್ಯುತ್ ದರ ಏರಿಕೆಗೆ ಕಡಿವಾಣ ಹಾಕಬೇಕು ಮತ್ತು ವಿದ್ಯುತ್ ದರವನ್ನು ಕಡಿತಗೊಳಿಸಬೇಕು. ಅಗತ್ಯ ವಸ್ತುಗಳ ಮೇಲೆ ಹೊರಿಸುತ್ತಿರುವ ತೆರಿಗೆಯನ್ನು ಕಡಿತಗೊಳಿಸಿ ಜನಸಾಮಾನ್ಯರ ಜೀವ ಉಳಿಸಲು ಮುಂದಾಗಬೇಕು. ಇಲ್ಲದೆ ಹೋದರೆ ರಾಜೀನಾಮೆ ಕೊಟ್ಟು ತೊಲಗಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ABOUT THE AUTHOR

...view details