ಕರ್ನಾಟಕ

karnataka

ETV Bharat / state

ಬಿಬಿಎಂಪಿ ವಾರ್ಡ್ ಮೀಸಲಾತಿಗೆ ಕಾಂಗ್ರೆಸ್​ ವಿರೋಧ, ಪ್ರತಿಭಟನೆ - Congress protest

ಬಿಬಿಎಂಪಿ ವಾರ್ಡ್ ಮೀಸಲಾತಿ ಘೋಷಣೆಯಾಗಿದೆ. ಇದನ್ನು ವಿರೋಧಿಸಿ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Etv Bhaಬಿಬಿಎಂಪಿ ವಾರ್ಡ್ ಮೀಸಲಾತಿಗೆ ಕಾಂಗ್ರೆಸ್​ ವಿರೋಧ: ಪ್ರತಿಭಟನೆrat
Etv Bharaಬಿಬಿಎಂಪಿ ವಾರ್ಡ್ ಮೀಸಲಾತಿಗೆ ಕಾಂಗ್ರೆಸ್​ ವಿರೋಧ: ಪ್ರತಿಭಟನೆt

By

Published : Aug 5, 2022, 4:26 PM IST

Updated : Aug 5, 2022, 4:56 PM IST

ಬೆಂಗಳೂರು: ಬಿಬಿಎಂಪಿ ವಾರ್ಡ್ ಮೀಸಲಾತಿ ವಿರೋಧಿಸಿ ಕಾಂಗ್ರೆಸ್ ಮುಖಂಡರು ಇಂದು ವಿಕಾಸಸೌಧದಲ್ಲಿರುವ ನಗರಾಭಿವೃದ್ಧಿ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಕಾಸಸೌಧದ 4ನೇ ಮಹಡಿಯಲ್ಲಿರುವ ಕಚೇರಿಗೆ ಬಿಜೆಪಿ, ಆರ್​​ಎಸ್​​ಎಸ್ ಕಚೇರಿ ಎಂದು ಬೋರ್ಡ್ ಹಿಡಿದು ಲಗ್ಗೆ ಇಟ್ಟ ಕಾಂಗ್ರೆಸ್ ಮುಖಂಡರು, ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ಖಾನ್, ಸಂಸದ ಡಿ.ಕೆ.ಸುರೇಶ್, ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ನೂಕುನುಗ್ಗಲು ಉಂಟಾಯಿತು.

ಬಿಬಿಎಂಪಿ ವಾರ್ಡ್ ಮೀಸಲಾತಿಗೆ ಕಾಂಗ್ರೆಸ್​ ವಿರೋಧ, ಪ್ರತಿಭಟನೆ

'ಮನಸ್ಸಿಗೆ ಬಂದಂತೆ ಮೀಸಲಾತಿ': ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಇವತ್ತು ಡಿ ಲಿಮಿಟೇಷನ್ ಕಂದಾಯ ಇಲಾಖೆ ಮಾಡಬೇಕಿತ್ತು. ಆರ್​​ಎಸ್​​​ಎಸ್, ಬಿಜೆಪಿ ನಾಯಕರು ಡಿ ಲಿಮಿಟೇಷನ್ ಮಾಡಿದ್ದಾರೆ. ಮೂರುವರೆ ಸಾವಿರ ಆಕ್ಷೇಪಣೆಗಳು ಬಂದಿದ್ದವು. ಅದನ್ನು ಸರ್ಕಾರ ಕೇರ್ ಮಾಡಿಲ್ಲ. ಮೀಸಲಾತಿ ಸರಿಯಾಗಿ ಮಾಡಿಲ್ಲ. ಮನಸ್ಸಿಗೆ ಬಂದಂತೆ ಮೀಸಲಾತಿ ಮಾಡಿದ್ದಾರೆ. ನಮ್ಮ ಪಕ್ಷದ ಕಾರ್ಪೋರೇಟರ್ ನಿಲ್ಲದ ಹಾಗೆ ಮಾಡಿದ್ದಾರೆ. ಮಹಿಳೆಯರಿಗೂ ಕಾಂಗ್ರೆಸ್ ಶಾಸಕರ ಕ್ಷೇತ್ರದಲ್ಲಿ 100% ನೀಡಿದ್ದಾರೆ. ಒಬಿಸಿ ಮೀಸಲಾತಿಯನ್ನು ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಹೆಚ್ಚು ಹಾಕಿದ್ದಾರೆ. ಇದೊಂದು ವ್ಯವಸ್ಥಿತವಾಗಿ ಮಾಡಿರೋ ಅನ್ಯಾಯ, ಅಕ್ರಮ ಮಾಡಿದ್ದಾರೆ ಎಂದು ಆರೋಪಿಸಿದರು.

'ಬಿಜೆಪಿ ರಾಜಧರ್ಮ, ಕಾನೂನಿನ ಪಾಲನೆ‌‌ ಮಾಡಿಲ್ಲ': ಕಾನೂನು ಮೊರೆ ಹೋಗುತ್ತೇವೆ. ಚುನಾವಣೆಗೆ ನಾವು ಸಿದ್ಧವಾಗಿ ಇದ್ದೇವೆ. ಆದರೆ, ಕಾನೂನು ಪ್ರಕಾರ ಮೀಸಲಾತಿ ಘೋಷಣೆ ಮಾಡಬೇಕು. ನಮಗೂ ಚುನಾವಣೆ ಆಗಬೇಕು. ಚುನಾವಣೆ ‌ಮುಂದೂಡುವುದು ನಮಗೂ ಇಷ್ಟ ಇಲ್ಲ. ಆದರೆ, ಮೀಸಲಾತಿ ಅನ್ಯಾಯ ಸರಿ ಮಾಡಬೇಕು. ಸಿಎಂಗೆ ಗೊತ್ತೇ ಇದು ಮಾಡಿದ್ದಾರೆ. ಕೂಡಲೇ ಮೀಸಲಾತಿ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಮತ್ತೆ 'ನಕಲಿ ಛಾಪಾ ಕಾಗದ ತೆಲಗಿ'ಗಳ ಸದ್ದು; ಸಿಸಿಬಿಯಿಂದ 10 ಮಂದಿ ಬಂಧನ

Last Updated : Aug 5, 2022, 4:56 PM IST

ABOUT THE AUTHOR

...view details