ಶಾಸಕ ಹೆಚ್.ಸಿ. ಬಾಲಕೃಷ್ಣ ಹಾಗೂ ಕೆ.ಹೆಚ್. ಮುನಿಯಪ್ಪ ಮಾತನಾಡಿದರು. ದೇವನಹಳ್ಳಿ:ಕಾಂಗ್ರೆಸ್ನಲ್ಲಿ ಸಿಎಂ ಆಗಿ ಸಿದ್ದರಾಮಯ್ಯ ಆಯ್ಕೆ ಹಾಗೂ ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಆಯ್ಕೆ ಸಂಬಂಧಪಟ್ಟಂತೆ ಅಧಿಕಾರದ ಸೂತ್ರದ ಬಗ್ಗೆ ಶಾಸಕ ಹೆಚ್.ಸಿ.ಬಾಲಕೃಷ್ಣ ಮಾತನಾಡಿದ್ದಾರೆ. ಅಂದಹಾಗೆ ದೆಹಲಿಗೆ ತೆರಳಿದ್ದ ಹಲವು ಕಾಂಗ್ರೆಸ್ ಶಾಸಕರು ಸಂಜೆ ಶಾಸಕಾಂಗ ಸಭೆಯ ಹಿನ್ನಲೆ ವಾಪಸ್ ಆಗುತ್ತಿದ್ದಾರೆ.
ಇದನ್ನೂ ಓದಿ:91ನೇ ಜನ್ಮದಿನದ ಸಂಭ್ರಮದಲ್ಲಿ ದೇವೇಗೌಡರು.. ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಪ್ರಧಾನಿ
ಮುಂದೆ ಡಿಕೆ ಸಿಎಂ ಆಗ್ತಾರೆ ಎನ್ನುವ ನಂಬಿಕೆಯಿದೆ: ದೆಹಲಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಶಾಸಕ ಹೆಚ್.ಸಿ. ಬಾಲಕೃಷ್ಣ, ಕೆ.ಹೆಚ್. ಮುನಿಯಪ್ಪ, ಹೆಚ್.ಕೆ. ಪಾಟೀಲ್ ಆಗಮಿಸಿದರು. ಇನ್ನು ಈ ವೇಳೆ ಮಾತನಾಡಿದ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರು, ''ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ ಎನ್ನುವ ವಿಶ್ವಾಸವಿತ್ತು. ಆದರೆ ಅದು ಈಗಲೇ ಸಾಧ್ಯವಾಗಲಿಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದರು. ''ಮುಂದೆ ಡಿಕೆ ಸಿಎಂ ಆಗ್ತಾರೆ ಎನ್ನುವ ನಂಬಿಕೆ ಹಾಗೂ ದೃಢವಾದ ವಿಶ್ವಾಸವಿದೆ. ಅಧಿಕಾರ ಹಂಚಿಕೆ ಸೂತ್ರ ಮಾಧ್ಯಮಗಳಲ್ಲಿ ಬರುತ್ತಿರೋ ಮಾಹಿತಿ ಸರಿಯಿದೆ'' ಎಂದು ಬಾಲಕೃಷ್ಣ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ಉಚಿತ ವಿದ್ಯುತ್ ಗ್ಯಾರಂಟಿ ಮಧ್ಯೆ ಪ್ರಸಕ್ತ ಐದು ಎಸ್ಕಾಂಗಳ ಹಣಕಾಸು ಸ್ಥಿತಿಗತಿ ಹೇಗಿದೆ ನೋಡಿ!
ನನಗೂ ಕೂಡ ಸಚಿವರಾಗಬೇಕೆಂಬ ಬಯಕೆಯಿದೆ- ಬಾಲಕೃಷ್ಣ:''ಸಿದ್ದರಾಮಯ್ಯ ಹಾಗೂ ಡಿಕೆಶಿಗೆ 30 -30 ಸೂತ್ರ ಮಾಡಿದ್ದಾರೆ'' ಎಂದು ಪರೋಕ್ಷವಾಗಿ ಹೇಳಿದ ಅವರು, ''ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದೇನೆ. ಎಲ್ಲರಿಗೂ ಸಚಿವರಾಗಬೇಕೆಂಬ ಆಸೆ ಇರುತ್ತೆ. ಅದರಲ್ಲಿ ನನಗೂ ಕೂಡ ಸಚಿವರಾಗಬೇಕು ಎಂಬ ಬಯಕೆ ಇದೆ'' ಎಂದು ಶಾಸಕ ಬಾಲಕೃಷ್ಣ ಮಾಧ್ಯಮಗಳ ಮುಂದೆ ತಮ್ಮ ಆಸೆಯನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ:ಸಿದ್ದರಾಮಯ್ಯಗೆ ಸಿಎಂ ಪಟ್ಟ, ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಗೊರವಜ್ಜ ನುಡಿದ ಕಾರ್ಣಿಕ ನಿಜವಾಯ್ತಾ?
ಉಳಿದದ್ದು ಹೈಕಮಾಂಡ್ಗೆ ಬಿಟ್ಟದ್ದು- ಕೆ.ಹೆಚ್. ಮುನಿಯಪ್ಪ: ಇನ್ನು ದೆಹಲಿಯಿಂದ ಆಗಮಿಸಿದ ಕೆ.ಹೆಚ್. ಮುನಿಯಪ್ಪ ಹೈಕಮಾಂಡ್ ಸೂತ್ರದ ಬಗ್ಗೆ ನಾವೇನು ಹೇಳಲು ಆಗುವುದಿಲ್ಲ. ಸಿದ್ದರಾಮಯ್ಯ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ದಲಿತ ಡಿಸಿಎಂ ರೇಸ್ ನಲ್ಲಿ ನಾನಂತೂ ಇಲ್ಲ. ನಾನು ದೇಶದಲ್ಲಿ ಮಂತ್ರಿಯಾಗಿದ್ದವನು. ರಾಜ್ಯದಲ್ಲಿ ನನಗೆ ಮಂತ್ರಿಸ್ಥಾನ ಬೇಕು ಅಂತಾನೂ ಇಲ್ಲ. ನೀವು ರಾಜ್ಯದಲ್ಲಿ ಸ್ವರ್ಧೆ ಮಾಡಿ ಅಂತ ಹೈಕಮಾಂಡ್ ಹೇಳಿತ್ತು. ಅದರಂತೆ ನಾನು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದೇನೆ. ಉಳಿದದ್ದು ಹೈಕಮಾಂಡ್ಗೆ ಬಿಟ್ಟದ್ದು'' ಎಂದು ಕೇಂದ್ರದ ಮಾಜಿ ಸಚಿವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ:ನಾನೇಕೆ ಅಸಮಾಧಾನಗೊಳ್ಳಬೇಕು? ನಾವು ಸಾಗಬೇಕಾದ ದಾರಿ ಬಹಳ ದೂರವಿದೆ: ನಿಯೋಜಿತ ಡಿಸಿಎಂ ಡಿಕೆ ಶಿವಕುಮಾರ್
ಇದನ್ನೂ ಓದಿ:ವಿದ್ಯಾರ್ಥಿ ದೆಸೆಯಿಂದಲೇ ಸಂಘಟನಾ ಚತುರ.. ಬಂಡೆಯಂತೆ ನಿಂತು ಕಾಂಗ್ರೆಸ್ ಗೆಲ್ಲಿಸಿದ ಡಿಕೆಶಿ ರಾಜಕೀಯ ಹಾದಿ