ಬೆಂಗಳೂರು:ರಾಜರಾಜೇಶ್ವರಿ ನಗರಕ್ಕೆ ಮಂಜೂರಾಗಿದ್ದ 10 ಸಾವಿರ ಕೋಟಿ ರೂ. ಎಲ್ಲಿ ಹೋಯ್ತು ಎಂದು ಪ್ರಶ್ನಿಸಿ ರಾಜ್ಯ ಕಾಂಗ್ರೆಸ್ ಮತ್ತೊಂದು ಹಂತದ ಪೋಸ್ಟರ್ ಪಾಲಿಟಿಕ್ಸ್ ಆರಂಭಿಸಿದೆ. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಪೋಸ್ಟರ್ ಅಳವಡಿಸಿ ಸ್ಥಳೀಯ ಶಾಸಕ ಹಾಗೂ ಸಚಿವ ಮುನಿರತ್ನ ವಿರುದ್ಧ ಇದೀಗ ಕಾಂಗ್ರೆಸ್ ಹೋರಾಟ ಆರಂಭಿಸಿದೆ.
ಆರ್ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ದಿಢೀರ್ ಕಾಣಿಸಿಕೊಂಡ ಪೋಸ್ಟರ್ಗಳು ಸಚಿವರನ್ನು ತೀವ್ರವಾಗಿ ಮುಜುಗರಕ್ಕೆ ಒಳಪಡಿಸಿದೆ. ಸ್ಥಳೀಯ ಶಾಸಕ ಮುನಿರತ್ನ ವಿರುದ್ಧದ ಬರಹಗಳಿರುವ ಪೋಸ್ಟರ್ಗಳು, ನೊಂದ ಗುತ್ತಿಗೆದಾರರು ಪ್ರಾಯೋಜಿಸುವ ಗೆಸ್ ಹಾಗೂ ವಿನ್ ಕಂಟೆಂಟ್, ಗೆಸ್ ಆ್ಯಂಡ್ ಕಂಟೆಸ್ಟ್ ಎಂದು ಬರೆಸಿರುವ ಪೋಸ್ಟರ್ಗಳು ರಾರಾಜಿಸುತ್ತಿವೆ.
ಕಾಂಗ್ರೆಸ್ ಪೋಸ್ಟರ್ ಪಾಲಿಟಿಕ್ಸ್ 2013 ರಿಂದ ಇಲ್ಲಿಯವರೆಗೆ 10 ಸಾವಿರ ಕೋಟಿ ರೂ.ಗಳನ್ನು ಶಾಸಕ ಮುನಿರತ್ನ ಮಂಜೂರು ಮಾಡಿಸಿಕೊಂಡಿದ್ದಾರೆ. ಆದರೆ ರಸ್ತೆ, ಪಾರ್ಕ್, ಕೆರೆಗೆ ವಿನಿಯೋಗಿಸಿರುವುದು 2 ರಿಂದ 3 ಸಾವಿರ ಕೋಟಿ ರೂ. ಅಷ್ಟೇ. ಉಳಿದ ಹಣ ಎಲ್ಲಿ ಹೋಯ್ತು? ಊಹಿಸಿ. ಅಥವಾ 10 ಸಾವಿರ ಕೋಟಿ ರೂ. ಕಾಮಗಾರಿ ತೋರಿಸುವುದಾದರೆ ಕರೆ ಮಾಡಿ ಅತ್ಯಾಕರ್ಷಕ ಉಡುಗೊರೆ ಗೆಲ್ಲಿ ಎಂದು ಹಾಕಿರುವ ಪೋಸ್ಟರ್ಗಳು ಎಲ್ಲೆಡೆ ರಾತ್ರಿ ಬೆಳಗಾಗುವುದರಲ್ಲಿ ರಾರಾಜಿಸುತ್ತಿವೆ.
ಸ್ಥಳೀಯ ಶಾಸಕ ಹಾಗೂ ಸಚಿವ ಮುನಿರತ್ನಂ ಕಚೇರಿ, ಆರ್ಆರ್ನಗರ ಆರ್ಚ್, ಬಸ್ ನಿಲ್ದಾಣಗಳಲ್ಲಿ, ಅಂಬೇಡ್ಕರ್ ಕಾಲೇಜು ಬಸ್ ನಿಲ್ದಾಣ, ಮಾರತ್ಹಳ್ಳಿ ಬಸ್ ನಿಲ್ದಾಣ, ಸೇರಿದಂತೆ ಹಲವೆಡೆ ಕಂಡು ಬಂದಿರುವ ಪೋಸ್ಟರ್ಗಳು ಮುನಿರತ್ನ ಅವರನ್ನು ಅಣಕಿಸುವಂತಿದೆ.
ಇದನ್ನೂ ಓದಿ:ಕಾಂಗ್ರೆಸ್ ನ 'ಸೇ ಸಿಎಂ'ಗೆ ಬಿಜೆಪಿಯಿಂದ 'ಸೇ ಸಿದ್ದು' ಗುದ್ದು