ಕರ್ನಾಟಕ

karnataka

ETV Bharat / state

ಮುಖ್ಯಮಂತ್ರಿಗೆ ಮತಿ ಇಲ್ಲ, ಬಿಜೆಪಿಗೆ ಲಜ್ಜೆ ಇಲ್ಲ.. ಬಿಎಸ್​ವೈ ಮುಕ್ತ ಬಿಜೆಪಿ ಅಭಿಯಾನಕ್ಕೆ ವೇಗ.. ಕಾಂಗ್ರೆಸ್ ಟ್ವೀಟಾಸ್ತ್ರ - ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್

ಪ್ರತಿ ಇವಿಎಂ ಕೆಟ್ಟಾಗಲೂ ಅದು ಬಿಜೆಪಿ ಬಟನ್ ಪರವಾಗಿಯೇ ಕೆಲಸ ಮಾಡುತ್ತಿರುತ್ತದೆ. ಪ್ರತಿ ಬಾರಿ ಇವಿಎಂ ಸಾಗಿಸುವಾಗ ಸಿಕ್ಕಿಬೀಳುವ ವಾಹನ ಬಿಜೆಪಿಯದ್ದೇ ಆಗಿರುತ್ತದೆ. ಪ್ರತಿ ಬಾರಿ ಚುನಾವಣಾ ವಾಹನ ಕೆಟ್ಟು ನಿಂತಾಗಲೂ ಬಿಜೆಪಿ ವಾಹನವೇ ಸಹಾಯಕ್ಕೆ ಬರುತ್ತದೆ. "ಕಾಕತಾಳೀಯ" ಎಂಬ ಪದವೂ ಕೂಡ ಒಂದು ಪಕ್ಷದ ಪರವಾಗಿರುವುದು ಕಾಕತಾಳಿಯವೇ? ಎಂದು ಕೇಳಿದೆ.

congress-party-tweet-about-cm-bsy-issue
ಕಾಂಗ್ರೆಸ್ ಕಿಡಿ

By

Published : Apr 3, 2021, 5:26 PM IST

ಬೆಂಗಳೂರು :ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಾಗ್ದಾಳಿ ನಡೆಸಿದೆ.

ಓದಿ: ಸಿಡಿ ಪ್ರಕರಣ: 5ನೇ ದಿನದ ವಿಚಾರಣೆ ಅಂತ್ಯ... ಯುವತಿಯನ್ನು ಗೌಪ್ಯ ಸ್ಥಳಕ್ಕೆ ಕರೆದೊಯ್ದ ಎಸ್​ಐಟಿ

ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಪಕ್ಷದ ಅಧ್ಯಕ್ಷ, ಉಸ್ತುವಾರಿ, ಕಾರ್ಯದರ್ಶಿ ಸರ್ಕಾರದ ಚಟುವಟಿಕೆಗಳಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದರೆ ಏನರ್ಥ?. ರಾಜ್ಯ ಬಿಜೆಪಿ, ಬಿಜೆಪಿಯೊಳಗೆ ಕೆಜೆಪಿ ಇನ್ನೂ ಜೀವಂತವಾಗಿದೆ ಎಂದರ್ಥವೇ?. ಯತ್ನಾಳ್‌ರನ್ನು ನಿಯಂತ್ರಿಸದೆ ಮಜಾ ನೋಡಿಕೊಂಡು ಬಿಟ್ಟಿದ್ದು ಏಕೆಂದು ಈಗ ಸ್ಪಷ್ಟವಾಗುತ್ತಿದೆ. ಬಿಎಸ್​​ವೈ ಮುಕ್ತ ಬಿಜೆಪಿ ಅಭಿಯಾನ ವೇಗ ಪಡೆದುಕೊಳ್ಳುತ್ತಿದೆ ಎಂದು ತಿಳಿಸಿದೆ.

ಪ್ರತಿ ಇವಿಎಂ ಕೆಟ್ಟಾಗಲೂ ಅದು ಬಿಜೆಪಿ ಬಟನ್ ಪರವಾಗಿಯೇ ಕೆಲಸ ಮಾಡುತ್ತಿರುತ್ತದೆ. ಪ್ರತಿ ಬಾರಿ ಇವಿಎಂ ಸಾಗಿಸುವಾಗ ಸಿಕ್ಕಿಬೀಳುವ ವಾಹನ ಬಿಜೆಪಿಯದ್ದೇ ಆಗಿರುತ್ತದೆ. ಪ್ರತಿ ಬಾರಿ ಚುನಾವಣಾ ವಾಹನ ಕೆಟ್ಟು ನಿಂತಾಗಲೂ ಬಿಜೆಪಿ ವಾಹನವೇ ಸಹಾಯಕ್ಕೆ ಬರುತ್ತದೆ. "ಕಾಕತಾಳೀಯ" ಎಂಬ ಪದವೂ ಕೂಡ ಒಂದು ಪಕ್ಷದ ಪರವಾಗಿರುವುದು ಕಾಕತಾಳಿಯವೇ? ಎಂದು ಕೇಳಿದೆ.

ಸಚಿವರಿಗೆ ಸ್ವತಂತ್ರವಿಲ್ಲ, ಶಾಸಕರಿಗೆ ಅನುದಾನವಿಲ್ಲ, ಖಜಾನೆಯಲ್ಲಿ ಹಣವಿಲ್ಲ, ಜನಹಿತದ ಯೋಜನೆ ಇಲ್ಲ, ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ, ಬಜೆಟ್‌ನಲ್ಲಿ ಹುರುಳಿಲ್ಲ, ಜನರ ಸಂಕಷ್ಟಕ್ಕೆ ಕೊನೆಯಿಲ್ಲ, ಭ್ರಷ್ಟಾಚಾರಕ್ಕೆ ಮಿತಿ ಇಲ್ಲ, ಮುಖ್ಯಮಂತ್ರಿಗೆ ಮತಿ ಇಲ್ಲ, ಬಿಜೆಪಿಗೆ ಲಜ್ಜೆ ಇಲ್ಲ. ಇದು ಸ್ವತಃ ಬಿಜೆಪಿಗರೇ ಬಾಯ್ಬಿಟ್ಟ ಸತ್ಯಗಳಿವು ಎಂದು ಲೇವಡಿ ಮಾಡಿದೆ.

ABOUT THE AUTHOR

...view details