ಕರ್ನಾಟಕ

karnataka

ETV Bharat / state

​​​​​​​ವಾಪಾಸ್​ ಕಾಂಗ್ರೆಸ್​ಗೆ ಹೋಗುವ ಮಾತಿಲ್ಲ: ಅನರ್ಹ ಶಾಸಕ ಪ್ರತಾಪ್​ ಗೌಡ ಪಾಟೀಲ್​ ! - ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿಕೆ

ಕಾಂಗ್ರೆಸ್​ ನಡೆಯ ಬಗ್ಗೆ ವ್ಯತ್ಯಾಸ ಬಂದು ಅಲ್ಲಿಂದ ಬಿಟ್ಟುಬಂದಿದ್ದೇನೆ. ಈಗ ವಾಪಾಸ್​ ಹೋಗುವ ಮಾತಿಲ್ಲ. ಹೈಕೋರ್ಟ್​ ತೀರ್ಪಿನ ಬಳಿಕ ಯಾವ ಪಕ್ಷ ಸೇರಬೇಕು ಎಂಬುದನ್ನು ಎಲ್ಲರೂ ನಿರ್ಧರಿಸುತ್ತೇವ ಎಂದು ಅನರ್ಹ ಶಾಸಕ ಪ್ರತಾಪ್​ಗೌಡ ಪಾಟೀಲ್ ಹೇಳಿದ್ದಾರೆ.

ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್

By

Published : Oct 23, 2019, 1:11 PM IST

ಬೆಂಗಳೂರು: ಯಾವುದೇ ಕಾರಣಕ್ಕೂ ಕಾಂಗ್ರೆಸ್​ಗೆ ವಾಪಾಸಾಗುವುದಿಲ್ಲ. ಅಲ್ಲಿನ ವ್ಯವಸ್ಥೆಯ ಬೇಸರದಿಂದಾಗಿಯೇ ಹೊರ ಬಂದಿದ್ದೇನೆ ಎಂದು ಮಸ್ಕಿ ಅನರ್ಹ ಶಾಸಕ ಪ್ರತಾಪ್​ಗೌಡ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್

ಇಲ್ಲಿನ ಡಾಲರ್ಸ್ ಕಾಲೋನಿಯಲ್ಲಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಇಂದು(ಅ.23) ಮಸ್ಕಿ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಭೇಟಿ ನೀಡಿದ ನಂತರ ಮಾಧ್ಯಮದವರರೊಂದಿಗೆ ಮಾತನಾಡಿದರು.

ಬಿಜೆಪಿಗೆ ಸೇರ್ಪಡೆ?: ಇನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಎಲ್ಲಾ ಒಟ್ಟಾಗಿ ಚರ್ಚೆ ಮಾಡಲಿದ್ದೇವೆ. ಈವರೆಗೂ ಬಿಜೆಪಿ ಪಕ್ಷ ಸೇರ್ಪಡೆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಆದರೆ, ಉಪಚುನಾವಣೆಗೆ ಸಹಕಾರ ಕೊಡುವಂತೆ ಯಡಿಯೂರಪ್ಪ, ಬಿ.ಎಲ್.ಸಂತೋಷ್ ಮತ್ತು ನಳೀನ್ ಕುಮಾರ್ ಕಟೀಲ್ ಜೊತೆ ಚರ್ಚೆ ಮಾಡಿದ್ದೇವೆ ಎಂದರು.

ಬಸನಗೌಡ ತುರವಿಹಾಳ ಅವರಿಗೆ ಕಾಡಾ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಬಿಜೆಪಿ ನಾಯಕರು ಅವರಿಗೆ ಮನವೊಲಿಕೆ ಮಾಡುತ್ತಿದ್ದಾರೆ. ಅವರು ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುತ್ತಾರೆ ಎಂದು ನಮಗೂ ವಿಶ್ವಾಸವಿದೆ ಎಂದು ಹೇಳಿದರು.

ಬಸನಗೌಡ ತುರವಿಹಾಳ ಕೂಡಾ ಮಸ್ಕಿ ಕ್ಷೇತ್ರದ ಉಪಚುನಾವಣೆ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ.

ABOUT THE AUTHOR

...view details