ಬೆಂಗಳೂರು:ಸಚಿವ ಆರ್.ಅಶೋಕ್ ಪುತ್ರ ಭಾಗಿಯಾಗಿದ್ದಾರೆ ಎನ್ನಲಾಗಿರುವ ಅಪಘಾತದ ತನಿಖೆಯಾಗಲಿ ಎಂದು ಒತ್ತಾಯಿಸಿರುವ ರಾಜ್ಯ ಕಾಂಗ್ರೆಸ್, ತನಿಖೆ ಮುಗಿಯುವವರೆಗೂ ಆರ್.ಅಶೋಕ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಟ್ವೀಟ್ ಮಾಡಿದೆ.
'ಅಪಘಾತದ ಬಗ್ಗೆ ತನಿಖೆಯಾಗಲಿ, ಸಚಿವ ಸ್ಥಾನಕ್ಕೆ ಅಶೋಕ್ ರಾಜೀನಾಮೆ ನೀಡಲಿ' - ಅಪಘಾತದ ತನಿಖೆಯಾಗಲಿ ಎಂದು ಒತ್ತಾಯ
ಸಚಿವ ಆರ್.ಅಶೋಕ್ ಪುತ್ರ ಮಾಡಿದ್ದಾರೆ ಎನ್ನಲಾದ ಅಪಘಾತ ಪ್ರಕರಣದ ಬ್ಗಗೆ ಸೂಕ್ತ ತನಿಖೆಗೆ ಆಗ್ರಹಿಸಿ, ರಾಜ್ಯ ಕಾಂಗ್ರೆಸ್ ಪಕ್ಷ ಟ್ವಿಟರ್ನಲ್ಲಿ ಸಚಿವರ ರಾಜೀನಾಮೆಗೆ ಆಗ್ರಹಿಸಿದೆ.
!['ಅಪಘಾತದ ಬಗ್ಗೆ ತನಿಖೆಯಾಗಲಿ, ಸಚಿವ ಸ್ಥಾನಕ್ಕೆ ಅಶೋಕ್ ರಾಜೀನಾಮೆ ನೀಡಲಿ' ಅಶೋಕ್ ರಾಜೀನಾಮೆ](https://etvbharatimages.akamaized.net/etvbharat/prod-images/768-512-6083506-thumbnail-3x2-dfaghgh.jpg)
ಅಶೋಕ್ ರಾಜೀನಾಮೆ
ಹೊಸಪೇಟೆ ಅಪಘಾತ ಪ್ರಕರಣದಲ್ಲಿ ಸಚಿವ ಅಶೋಕ್ ಪುತ್ರನ ಪಾತ್ರ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ರಾಜ್ಯ ಬಿಜೆಪಿ ಸರ್ಕಾರವು ತನಿಖೆ ನಡೆಸುವ ಬದಲಿಗೆ, ಸಚಿವರ ಪುತ್ರನ ರಕ್ಷಣೆಗೆ ನಿಂತಿದೆ. ಕೂಡಲೇ ಶರತ್ ಅವರನ್ನು ಬಂಧಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
ತನಿಖೆ ಮುಗಿಯುವವರೆಗೂ ಆರ್.ಅಶೋಕ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿರುವ ಪಕ್ಷ, ಒಟ್ಟಾರೆ ತನಿಖೆ ರಾಜ್ಯ ಪೊಲೀಸರ ಮೂಲಕ ಪ್ರಾಮಾಣಿಕವಾಗಿ ನಡೆಸಲಿ ಎಂದು ಕೂಡ ಸೂಚಿಸಿದೆ.