ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಪ್ರಕಟವಾಗಿದೆ. ಒಟ್ಟು 124 ಅಭ್ಯರ್ಥಿಗಳನ್ನ ಒಳಗೊಂಡ ಮೊದಲ ಪಟ್ಟಿಯನ್ನು ಇಂದು ಬೆಳಗ್ಗೆ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಬಿಡುಗಡೆ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ತಿಂಗಳ ಹಿಂದೆಯೇ ಸಿದ್ಧಪಡಿಸಿ ಕಳುಹಿಸಿದ್ದ ಪಟ್ಟಿಯನ್ನು ಪರಿಶೀಲನೆ ನಡೆಸಿ ಇಂದು ಅಂತಿಮಗೊಳಿಸಿದ್ದಾರೆ. ನಿನ್ನೆ ಸಂಜೆ ಕಾಂಗ್ರೆಸ್ನ ಮೊದಲ ಪಟ್ಟಿ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಇತ್ತು. ಆದರೆ, ಕೊಂಚ ವಿಳಂಬವಾಗಿ ಇಂದು ಪಟ್ಟಿ ಬಿಡುಗಡೆ ಆಗಿದ್ದು, 124 ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವರುಣ ಕ್ಷೇತ್ರಕ್ಕೆ ಹಿಂದಿರುಗಿದ್ದಾರೆ. ಉಳಿದಂತೆ ಡಿಕೆ ಶಿವಕುಮಾರ್ ಕನಕಪುರ ಕ್ಷೇತ್ರದಿಂದ, ಕೊರಟಗೆರೆಯಿಂದ ಡಾ ಜಿ ಪರಮೇಶ್ವರ್ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.
ಪಟ್ಟಿಯಲ್ಲಿ ಗಮನಿಸಿದರೆ.. ಚಿಕ್ಕೋಡಿ- ಸದಲಗಾ ವಿಧಾನಸಭಾ ಕ್ಷೇತ್ರಕ್ಕೆ ಗಣೇಶ್ ಹುಕ್ಕೇರಿ, ಕಾಗವಾಡಕ್ಕೆ ಭರಮ ಗೌಡ ಆಲಗೌಡ ಕಾಗೆ, ಕುಡಚಿ ಎಸ್‌ಸಿ ಕ್ಷೇತ್ರಕ್ಕೆ ಮಹೇಂದ್ರ ತಮ್ಮಣ್ಣನವರ್, ಹುಕ್ಕೇರಿಗೆ ಎಬಿ ಪಾಟೀಲ್, ಯಮಕನಮರಡಿ ಎಸ್ಟಿ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ, ಬೆಳಗಾವಿ ಗ್ರಾಮಾಂತರಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್, ಖಾನಾಪುರಕ್ಕೆ ಅಂಜಲಿ ನಿಂಬಾಳ್ಕರ್, ಬೈಲಹೊಂಗಲಕ್ಕೆ ಮಹಾಂತೇಶ ಶಿವಾನಂದ ಕೌಜಲಗಿ, ರಾಮದುರ್ಗದಿಂದ ಅಶೋಕ್ ಎಂ ಪಟ್ಟಣ್, ಜಮಖಂಡಿಗೆ ಆನಂದ ಸಿದ್ದು ನ್ಯಾಮಗೌಡ, ಹುನಗುಂದದಿಂದ ವಿಜಯಾನಂದ ಎಸ್ ಕಾಶಪ್ಪನವರ್, ಮುದ್ದೇಬಿಹಾಳದಿಂದ ಅಪ್ಪಾಜಿ ಅಲಿಯಾಸ್ ಸಿ.ಎಸ್. ನಾಡಗೌಡ, ಬಸವನಬಾಗೇವಾಡಿಯಿಂದ ಶಿವಾನಂದ ಪಾಟೀಲ್.
ಬಬಲೇಶ್ವರದಿಂದ ಎಂಬಿ ಪಾಟೀಲ್, ಇಂಡಿಯಿಂದ ಯಶವಂತರಾಯ ಗೌಡ ವಿ ಪಾಟೀಲ್, ಜೇವರ್ಗಿಯಿಂದ ಡಾ. ಅಜಯ್ ಸಿಂಗ್, ಸುರಪುರದಿಂದ ರಾಜ ವೆಂಕಟಪ್ಪ ನಾಯಕ್, ಶಹಾಪುರದಿಂದ ಶರಣಬಸಪ್ಪ ಗೌಡ, ಚಿತ್ತಾಪುರ ಎಸ್ಟಿ ಕ್ಷೇತ್ರದಿಂದ ಪ್ರಿಯಾಂಕ ಖರ್ಗೆ, ಸೇಡಂನಿಂದ ಡಾ ಶರಣಪ್ರಕಾಶ್ ಪಾಟೀಲ್, ಚಿಂಚೋಳಿ ಎಸ್ಸಿ ಕ್ಷೇತ್ರಕ್ಕೆ ಸುಭಾಷ್ ವಿ ರಾಥೋಡ್, ಕಲಬುರ್ಗಿ ಉತ್ತರ ಕ್ಷೇತ್ರಕ್ಕೆ ಖನಿಜ ಫಾತಿಮಾ, ಆಳಂದ ಕ್ಷೇತ್ರದಿಂದ ಬಿಆರ್ ಪಾಟೀಲ್, ಹುಮ್ನಾಬಾದ್ನಿಂದ ರಾಜಶೇಖರ್ ವಿ ಪಾಟೀಲ್, ಬೀದರ್ ದಕ್ಷಿಣದಿಂದ ಅಶೋಕ್ ಖೇಣಿ, ಬೀದರ್ನಿಂದ ರಹೀಮ್ ಖಾನ್, ಭಾಲ್ಕಿಯಿಂದ ಈಶ್ವರ್ ಖಂಡ್ರೆ, ರಾಯಚೂರು ಗ್ರಾಮಾಂತರ ಎಸ್ಟಿ ಕ್ಷೇತ್ರಕ್ಕೆ ಬಸವನಗೌಡ ದದ್ದಲ್.
ಮಸ್ಕಿ ಎಸ್‌ಟಿ ಕ್ಷೇತ್ರಕ್ಕೆ ಬಸವನಗೌಡ ತುರುವಿಹಾಳ, ಕುಷ್ಟಗಿ ವಿಧಾನಸಭೆ ಕ್ಷೇತ್ರದಿಂದ ಅಮರೇಗೌಡ ಪಾಟೀಲ್ ಬಯ್ಯಾಪುರ, ಕನಕಗಿರಿ ಎಸ್ಸಿ ವಿಧಾನಸಭೆ ಕ್ಷೇತ್ರದಿಂದ ಶಿವರಾಜ್ ಸಂಗಪ್ಪ ತಂಗಡಗಿ, ಯಲಬುರ್ಗಾದಿಂದ ಬಸವರಾಜ್ ರಾಯರೆಡ್ಡಿ, ಕೊಪ್ಪಳದಿಂದ ಕೆ ರಾಘವೇಂದ್ರ, ಗದಗ ವಿಧಾನಸಭೆ ಕ್ಷೇತ್ರಕ್ಕೆ ಹೆಚ್ ಕೆ ಪಾಟೀಲ್, ರೋಣದಿಂದ ಬಿಎಸ್ ಪಾಟೀಲ್, ಹುಬ್ಬಳ್ಳಿ ಧಾರವಾಡ ಪೂರ್ವದಿಂದ ಪ್ರಸಾದ್ ಅಬ್ಬಯ್ಯ, ಹಳಿಯಾಳ ಕ್ಷೇತ್ರಕ್ಕೆ ಆರ್ ವಿ ದೇಶಪಾಂಡೆ, ಕಾರವಾರ ಸತೀಶ್ ಸೈಲ್, ಭಟ್ಕಳ ಮಂಕಾಳ ಸುಬ್ಬಾ ವಿದ್ಯಾ, ಹಾನಗಲ್ ಶ್ರೀನಿವಾಸ್ ವಿ ಮಾನೆ, ಹಾವೇರಿ ಎಸ್ ಸಿ ರುದ್ರಪ್ಪ ಲಮಾಣಿ, ಬ್ಯಾಡಗಿ ಬಸವರಾಜ್ ಎಂ ಶಿವಣ್ಣನವರ್, ಹಿರೇಕೆರೂರು ಯು ಬಿ ಬಣಕಾರ್, ರಾಣೆಬೆನ್ನೂರು ಪ್ರಕಾಶ್ ಕೆ ಕೋಳಿವಾಡ, ಹಡಗಲಿ ಎಸ್ ಟಿ ಪಿ ಪರಮೇಶ್ವರ್ ನಾಯಕ್.
ಹಗರಿಬೊಮ್ಮನಹಳ್ಳಿ ಎಸ್ ಕ್ಷೇತ್ರಕ್ಕೆ ಭೀಮಾ ನಾಯಕ್, ವಿಜಯನಗರಕ್ಕೆ ಎಚ್ ಆರ್ ಗವಿಯಪ್ಪ, ಕಂಪ್ಲಿ ಎಸ್ ಟಿ ಕ್ಷೇತ್ರಕ್ಕೆ ಜೆಎನ್ ಗಣೇಶ್, ಬಳ್ಳಾರಿ ಎಸ್ ಟಿ ಕ್ಷೇತ್ರಕ್ಕೆ ಬಿ ನಾಗೇಂದ್ರ, ಕಡೂರು ಎಸ್ ಟಿ ಕ್ಷೇತ್ರಕ್ಕೆ ಈ ತುಕಾರಾಂ, ಚಳ್ಳಕೆರೆ ಎಸ್ ಟಿ ಕ್ಷೇತ್ರಕ್ಕೆ ಟಿ ರಘುಮೂರ್ತಿ, ಹಿರಿಯೂರು ಕ್ಷೇತ್ರಕ್ಕೆ ಡಿ ಸುಧಾಕರ್, ಹೊಸದುರ್ಗ ಕ್ಷೇತ್ರಕ್ಕೆ ಗೋವಿಂದಪ್ಪ ಬಿಜಿ, ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಎಸ್ ಎಸ್ ಮಲ್ಲಿಕಾರ್ಜುನ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಶಾಮನೂರು ಶಿವಶಂಕರಪ್ಪ, ಮಾಯಕೊಂಡ ಎಸಿ ಕ್ಷೇತ್ರಕ್ಕೆ ಕೆಎಸ್ ಬಸವರಾಜ್, ಭದ್ರಾವತಿಯಿಂದ ಸಂಗಮೇಶ್ವರ ಬಿಕೆ, ಸೊರಬ ಕ್ಷೇತ್ರಕ್ಕೆ ಮಧು ಬಂಗಾರಪ್ಪ, ಸಾಗರ ವಿಧಾನಸಭೆ ಕ್ಷೇತ್ರಕ್ಕೆ ಗೋಪಾಲಕೃಷ್ಣ ಬೇಳೂರು, ಬೈಂದೂರು ಕ್ಷೇತ್ರಕ್ಕೆ ಕೆ.ಗೋಪಾಲ್ ಪೂಜಾರಿ, ಕುಂದಾಪುರದಿಂದ ಎಂ.ದಿನೇಶ್ ಹೆಗಡೆ, ಕಾಪು ಕ್ಷೇತ್ರಕ್ಕೆ ವಿನಯ್ ಕುಮಾರ್ ಸೊರಕೆ.
ಶೃಂಗೇರಿಯಿಂದ ಟಿ.ಡಿ.ರಾಜೇಗೌಡ, ಚಿಕ್ಕನಾಯಕನಹಳ್ಳಿಯಿಂದ ಕಿರಣ್ ಕುಮಾರ್, ತಿಪಟೂರು ಕ್ಷೇತ್ರದಿಂದ ಕೆ ಷಡಕ್ಷರಿ, ತುರುವೇಕೆರೆಯಿಂದ ಕಾಂತರಾಜ್ ಬಿ.ಎಂ, ಕುಣಿಗಲ್ನಿಂದ ಡಾ.ಹೆಚ್.ಡಿ. ರಂಗನಾಥ್, ಕೊರಟಗೆರೆಯಿಂದ ಎಸ್‌ಸಿ - ಡಾ. ಜಿ. ಪರಮೇಶ್ವರ, ಸಿರಾದಿಂದ ಟಿ.ಬಿ. ಜಯಚಂದ್ರ, ಪಾವಗಡದಿಂದ (ಎಸ್ಸಿ) ಹೆಚ್.ವಿ. ವೆಂಕಟೇಶ್, ಮಧುಗಿರಿಯಿಂದ ಕೆ.ಎನ್. ರಾಜಣ್ಣ, ಗೌರಿಬಿದನೂರು ಕ್ಷೇತ್ರದಿಂದ ಶಿವಶಂಕರ ರೆಡ್ಡಿ, ಎನ್.ಹೆಚ್, ಬಾಗೇಪಲ್ಲಿಯಿಂದ ಎಸ್.ಎನ್. ಸುಬ್ಬಾರೆಡ್ಡಿ, ಚಿಂತಾಮಣಿಯಿಂದ ಡಾ. ಎಂ.ಸಿ. ಸುಧಾಕರ್, ಶ್ರೀನಿವಾಸಪುರಯಿಂದ ಕೆ.ಆರ್. ರಮೇಶ್ ಕುಮಾರ್, ಕೋಲಾರ ಗೋಲ್ಡ್ ಫೀಲ್ಡ್(ಕೆಜಿಎಫ್) ಕ್ಷೇತ್ರದಿಂದ (SC) ರೂಪಕಲಾ ಎಂ, ಬಂಗಾರಪೇಟೆಯಿಂದ (ಎಸ್ಸಿ) ಎಸ್.ಎನ್. ನಾರಾಯಣಸ್ವಾಮಿ, ಮಾಲೂರುಯಿಂದ ಕೆ.ವೈ. ನಂಜೇಗೌಡ, ಬ್ಯಾಟರಾಯನಪುರಯಿಂದ ಕೃಷ್ಣ ಬೈರೇಗೌಡ, ರಾಜರಾಜೇಶ್ವರಿನಗರಯಿಂದ ಕುಸುಮಾ ಹೆಚ್,