ಬೆಂಗಳೂರು: ರಾಜ್ಯದಲ್ಲಿ ನೆರೆಯಿಂದ ಆಗಿರುವ ಬಾರಿ ಪ್ರಮಾಣದ ಹಾನಿಗೆ, ಕೇಂದ್ರ ಸರ್ಕಾರ ತೇಪೆ ಹಚ್ಚುವ ಪರಿಹಾರವನ್ನು ನೀಡಿದೆಯೆಂದು ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.
1200 ಕೋಟಿ ರೂ. ಪರಿಹಾರ ಕೊಟ್ಟು ತೇಪೆ ಹಚ್ಚುವ ಯತ್ನ: ಟ್ವೀಟ್ ಮೂಲಕ ಕಾಂಗ್ರೆಸ್ ಆಕ್ರೋಶ - ಇತ್ತೀಚಿನ ಬೆಂಗಳೂರಿನ ಸುದ್ದಿ
ರಾಜ್ಯದಲ್ಲಿ ನೆರೆಯಿಂದ ಆಗಿರುವ ಬಾರಿ ಪ್ರಮಾಣದ ಹಾನಿಗೆ, ಕೇಂದ್ರ ಸರ್ಕಾರ 1200 ಕೋಟಿ ರೂ.ಗಳ ತೇಪೆ ಹಚ್ಚುವ ಪರಿಹಾರವನ್ನು ನೀಡಿದೆಯೆಂದು ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.
ನೆರೆ ಸಂತ್ರಸ್ತರಿಗೆ ಪರಿಹಾರ ವಿಳಂಬ ಹಿನ್ನಲೆ : ಟ್ವೀಟ್ ಮೂಲಕ ಕಾಂಗ್ರೆಸ್ ಆಕ್ರೋಶ
ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ನೆರೆ ಸಂತ್ರಸ್ತರ ಪ್ರತಿಭಟನೆಯಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಬಿಎಸ್ವೈ ನೇತೃತ್ವದ ರಾಜ್ಯ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾಗಿವೆ. ಕೇಂದ್ರ ಸರ್ಕಾರ, ಪಕ್ಷದ ವರ್ಚಸ್ಸಿಗೆ ಆಗಿರುವ ಹಾನಿಗೆ 1200 ಕೋಟಿ ರೂ.ಗಳ ನೆರೆ ಪರಿಹಾರದ ತೇಪೆ ಹಚ್ಚಿದೆ ಎಂದು ಆರೋಪಿಸಿದೆ.
ನೀರುಪಾಲಾದ ಅರ್ಧ ರಾಜ್ಯದ ಪುನರ್ ನಿರ್ಮಾಣ ₹1200 ಕೋಟಿಯಲ್ಲಿ ಸಾಧ್ಯವೇ? ಎಂದು ಕೂಡ ರಾಜ್ಯ ಕಾಂಗ್ರೆಸ್, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದೆ.