ಕರ್ನಾಟಕ

karnataka

ETV Bharat / state

ಯಲಹಂಕ ಮೇಲ್ಸೇತುವೆಗೆ​ ಸಾವರ್ಕರ್ ಹೆಸರು ಇಟ್ಟಿರುವುದು ದೇಶದ್ರೋಹಿ ಕೆಲಸ: ಕಾಂಗ್ರೆಸ್ - Congress outrage against state government

ಗಾಂಧಿ ಹತ್ಯೆಯ ಆರೋಪಿ ಸಾವರ್ಕರ್ ಹೆಸರನ್ನು ಯಲಹಂಕ ಮೇಲ್ಸೇತುವೆಗೆ ನಾಮಕರಣ ಮಾಡಿರುವುದು ನಿಜಕ್ಕೂ ನಾಚಿಕೆಗೇಡಿನ ಕೆಲಸ ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್​ ಆಕ್ರೋಶ ವ್ಯಕ್ತಪಡಿಸಿದೆ.

dsd
ಕಾಂಗ್ರೆಸ್ ಟ್ವೀಟ್​

By

Published : Sep 8, 2020, 1:41 PM IST

ಬೆಂಗಳೂರು: ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನು ಇಟ್ಟಿರುವುದು ದೇಶದ್ರೋಹಿ ಕೆಲಸ ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕಾಂಗ್ರೆಸ್ ಟ್ವೀಟ್​

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್​, ಜನಾಂದೋಲನ ಆಗುವವರೆಗೆ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯ ವಿಷಯದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಆಸಕ್ತಿ ತೋರಲಿಲ್ಲ ಎಂದು ಕಿಡಿಕಾರಿದೆ.

ಇತ್ತ ಜೆಡಿಎಸ್ ಪಕ್ಷ ಕೂಡ ರಾಜ್ಯ ಬಿಜೆಪಿ ಸರ್ಕಾರದ ನಿಲುವನ್ನು ಖಂಡಿಸಿದೆ. ಈ ಮೂಲಕ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಸಾಕಷ್ಟು ಸಾರಿ ಮುಂದೂಡಿಕೆಯಾಗಿದ್ದ ಸಾವರ್ಕರ್ ಹೆಸರು ನಾಮಕರಣ ಕಾರ್ಯಕ್ರಮ ಇಂದು ನೆರವೇರಿದೆ.

ABOUT THE AUTHOR

...view details