ಕರ್ನಾಟಕ

karnataka

ETV Bharat / state

ಉಪ ಚುನಾವಣೆಗೆ ಹೊಸ ಅಸ್ತ್ರ.. ಹಿಂದುಳಿದ ವರ್ಗದ ಮತ ಸೆಳೆಯಲು ಮುಂದಾದ ಕಾಂಗ್ರೆಸ್! - alliance government

ಮೈತ್ರಿ ಸರ್ಕಾರ ಪತನದ ನಂತರ ಕಾಂಗ್ರೆಸ್ ಎಚ್ಚೆತ್ತುಕೊಂಡಂತೆ ಕಾಣಿಸುತ್ತಿದೆ. ಮತದಾರರನ್ನು ತನ್ನತ್ತ ಸೆಳೆಯಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಉಪ ಚುನಾವಣೆಗಳಿಗೆ ತಯಾರಿ ನಡೆಸಿದೆ. ಹಿಂದುಳಿದ ಸುಮುದಾಯಗಳ ಮತಗಳ ಮೇಲೆ ವಿಶೇಷ ಕಣ್ಣು ನೆಟ್ಟಿದೆ.

ಕೆಪಿಸಿಸಿ ಒಬಿಸಿ ಘಟಕದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ್

By

Published : Aug 25, 2019, 12:33 PM IST

ಬೆಂಗಳೂರು:ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ರಾಜ್ಯದಲ್ಲಿ14 ಶಾಸಕರನ್ನು ಕಳೆದುಕೊಂಡು ಕಂಗಾಲಾಗಿರುವ ಕಾಂಗ್ರೆಸ್‌ ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸುವ ಮಹತ್ವ ಹೆಜ್ಜೆಯನ್ನಿರಿಸಲು ಮುಂದಾಗಿದೆ. ಸಾಂಪ್ರದಾಯಿಕ ಮತ ಬುಟ್ಟಿಯನ್ನ ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ಪ್ರಯತ್ನ ಆರಂಭಿಸಿದೆ.

ಉಪಚುನಾವಣೆಗೆ ಸಿದ್ಧತೆ ನಡೆಸಿರುವ ಕಾಂಗ್ರೆಸ್ ನಾಯಕರು, ಹಿಂದುಳಿದ ಸಮುದಾಯಗಳ ಮತಗಳ ಮೇಲೆ ವಿಶೇಷ ಕಣ್ಣು ನೆಟ್ಟಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ವಿವಿಧೆಡೆ ಬೃಹತ್‍ ಸಮಾವೇಶ, ಜನಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. ಇದೇ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಹೊಸಪೇಟೆಯಲ್ಲಿ ನೇಕಾರರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕೆಪಿಸಿಸಿ ಒಬಿಸಿ ಘಟಕದ ಅಧ್ಯಕ್ಷ ಎಂ ಡಿ ಲಕ್ಷ್ಮಿನಾರಾಯಣ್ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ.

ABOUT THE AUTHOR

...view details