ಕರ್ನಾಟಕ

karnataka

ETV Bharat / state

ಜ.16 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ 'ನಾ ನಾಯಕಿ' ಸಮಾವೇಶ: ಪ್ರಿಯಾಂಕ ಗಾಂಧಿ ಆಗಮನ - Priyanka Gandhi to karnataka

ಕರ್ನಾಟಕ ವಿಧಾನಸಭೆಯ ಮುಂದಿನ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿವೆ. ರಾಜಕೀಯ ಪಕ್ಷಗಳು ವಿವಿಧ ರೀತಿಯಲ್ಲಿ ಮತದಾರರ ಮನ ಸೆಳೆಯುವ ಕಸರತ್ತು ನಡೆಸುತ್ತಿವೆ. ಇದರ ಭಾಗವಾಗಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆಗೊಳಿಸಲು ಯೋಜನೆ ರೂಪಿಸುತ್ತಿದೆ.

separate manifesto for women
ರಾಜ್ಯಕ್ಕೆ ಪ್ರಿಯಾಂಕಾ ಗಾಂಧಿ ಭೇಟಿ

By

Published : Jan 11, 2023, 6:48 AM IST

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಬಿರುಸಿನ ಸಿದ್ಧತೆ ಮುಂದುವರಿಸಿರುವ ಕಾಂಗ್ರೆಸ್ ಸದ್ಯದಲ್ಲೇ ರಾಷ್ಟ್ರೀಯ ನಾಯಕಿ ಪ್ರಿಯಂಕಾ ಗಾಂಧಿ ಅವರನ್ನು ರಾಜ್ಯಕ್ಕೆ ಕರೆಸಿ ಕಾರ್ಯಕ್ರಮ ನಡೆಸುವ ತಯಾರಿಯಲ್ಲಿದೆ. ಕರ್ನಾಟಕಕ್ಕೆ ಪ್ರಿಯಾಂಕಾ ಗಾಂಧಿ ಜನವರಿ 16ರಂದು ಬರಲಿದ್ದಾರೆ. ಮಹಿಳೆಯರ ಸಬಲೀಕರಣ ಉದ್ದೇಶದಿಂದ ರಾಜ್ಯ ಕಾಂಗ್ರೆಸ್​ ಅಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಾ ನಾಯಕಿ ಸಮಾವೇಶ ಆಯೋಜಿಸಿದೆ. ಯುವ ಸಮುದಾಯ ಹಾಗೂ ವಿಶೇಷವಾಗಿ ಮಹಿಳೆಯರಿಗೆ ಪಕ್ಷದ ತನ್ನ ತತ್ವ ಸಿದ್ಧಾಂತವನ್ನು ಮನದಟ್ಟು ಮಾಡಿಸುವ ಉದ್ದೇಶದಿಂದ ಪ್ರಿಯಂಕಾ ಅವರನ್ನು ಈ ಕಾರ್ಯಕ್ರಮಕ್ಕೆ ಕರೆಸಲಾಗುತ್ತಿದೆ. ಈ ಮೂಲಕ ಯುವ ಹಾಗೂ ಮಹಿಳಾ ಮತದಾರರನ್ನು ಪಕ್ಷದೆಡೆಗೆ ಸೆಳೆಯುವ ಗುರಿ ಹೊಂದಲಾಗಿದೆ ಎಂದು ತಿಳಿದು ಬಂದಿದೆ.

ನಾ ನಾಯಕಿ ಸಮಾವೇಶ:ಸೋಮವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿರುವ ಸಮಾವೇಶದಲ್ಲಿ ರಾಜ್ಯದ ಎಲ್ಲಾ ಭಾಗದ ಕಾರ್ಯಕರ್ತೆಯರು, ಮಹಿಳೆಯರು ಆಗಮಿಸಿ ಪಾಲ್ಗೊಳ್ಳಲಿದ್ದಾರೆ. ಉತ್ತರ ಕರ್ನಾಟಕ ಭಾಗದ ಪ್ರತಿ ಬೂತ್‌ನಿಂದ ತಲಾ ಇಬ್ಬರು ಮಹಿಳೆಯರು ಬರುವಂತೆ ನೋಡಿಕೊಳ್ಳಲಾಗುತ್ತಿದೆ. ದಕ್ಷಿಣ ಕರ್ನಾಟಕ ಭಾಗದ ಪ್ರತಿ ಬೂತ್‌ ನಿಂದ ತಲಾ ಮೂವರು ಮಹಿಳೆಯರನ್ನು ಕಡ್ಡಾಯವಾಗಿ ಕರೆ ತರಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಇದೆ.

ಬೆಂಗಳೂರಿಗೆ ಸಮೀಪದಲ್ಲಿರುವ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನು ಸಮಾವೇಶಕ್ಕೆ ಕರೆ ತರುವಂತೆ ನಿರ್ದೇಶನ ಕೊಡಲಾಗಿದೆ. ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ ಜಿಲ್ಲೆಗಳಿಂದ ಹೆಚ್ಚು ಜನರಿಗೆ ಆಗಮಿಸುವಂತೆಯೂ ತಿಳಿಸಲಾಗಿದೆ. ಡಿಸಿಸಿ ಅಧ್ಯಕ್ಷರು, ಶಾಸಕರು, ಸಂಸದರಿಗೆ ಈ ಸಂಬಂಧ ಡಿಕೆಶಿ ಹೊಣೆ ಹೊರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದನ್ನೂ ಓದಿ:’ನಾ ನಾಯಕಿ’ ಉದ್ಘಾಟನೆಗೆ ಪ್ರಿಯಾಂಕಾ ಗಾಂಧಿ: ಕೈ ಪಡೆಯಲ್ಲಿ ಸಂಚಲನ

ಮಹಿಳೆಯರಿಗೆ ಪ್ರತ್ಯೇಕ ಚುನಾವಣಾ ಪ್ರಣಾಳಿಕೆ: ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ. ಮಹಿಳೆಯರ ಸಮಸ್ಯೆಗಳು, ಎಲ್ಲ ಹಂತದ ಮಹಿಳೆಯರ ಸಾಮಾಜಿಕ, ಆರ್ಥಿಕ, ರಾಜಕೀಯ ಸಬಲೀಕರಣ ಅದಕ್ಕೆ ತೆಗೆದುಕೊಳ್ಳಬಹುದಾದ ಕ್ರಮಗಳ ಪಟ್ಟಿ ಮಾಡಿ ಕೊಡಿ ಎಂದು ಡಿಕೆಶಿ ಈಗಾಗಲೇ ಸೂಚನೆ ನೀಡಿದ್ದಾರೆ. ಸಮಾವೇಶದಲ್ಲಿ ಈ ಕುರಿತು ಮಾಹಿತಿ ಘೋಷಣೆಯಾಗುವ ಸಾಧ್ಯತೆ ಇದೆ. ಡಿಸಿಸಿ ಅಧ್ಯಕ್ಷರು, ಶಾಸಕರು, ಸಂಸದರು, ಮಾಜಿ ಶಾಸಕರು, ಮುಂಚೂಣಿ ಘಟಕಗಳ ಅಧ್ಯಕ್ಷರು, ಟಿಕೆಟ್ ಆಕಾಂಕ್ಷಿಗಳಿಗೆ ಡಿಕೆಶಿ ಸೂಚನೆ ನೀಡಿದ್ದು, ಅವರು ಮಾಹಿತಿ ಕಲೆ ಹಾಕಿ ವಿವರ ಸಲ್ಲಿಸಲಿದ್ದಾರೆ.

ಇದನ್ನೂ ಓದಿ:ಐವರ ವಿರುದ್ಧ ಎಫ್​ಐಆರ್ ದಾಖಲು, ಮೆಟ್ರೋ ಪಿಲ್ಲರ್ ಉರುಳಿದ ಕೇಸ್ ಉನ್ನತ ಮಟ್ಟದ ತನಿಖೆಗೆ ನಿರ್ಧಾರ: ಸಿಎಂ

ABOUT THE AUTHOR

...view details