ಕರ್ನಾಟಕ

karnataka

ETV Bharat / state

ಗುತ್ತಿಗೆದಾರರಿಗೆ ಕಾಂಗ್ರೆಸ್‌ನವರು ಬೆದರಿಕೆ ಹಾಕಿರಬೇಕು: ಎನ್.ರವಿಕುಮಾರ್ - ಕಮೀಷನ್ ಆರೋಪ

ಗುತ್ತಿಗೆದಾರರು ಮೊದಲು ಕಮಿಷನ್ ಆರೋಪ ಮಾಡಿ ಈಗ ಯೂ ಟರ್ನ್​ ಹೊಡೆದಿರಬಹುದು. ಆದರೆ, ಕಮಿಷನ್ ಕೇಳಿರೋದು ಸತ್ಯ ಅಲ್ವಾ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿ ಕುಮಾರ್
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿ ಕುಮಾರ್

By

Published : Aug 14, 2023, 4:11 PM IST

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿ ಕುಮಾರ್

ಬೆಂಗಳೂರು :ಬಿಬಿಎಂಪಿ ಗುತ್ತಿಗೆದಾರರು 15% ಕಮಿಷನ್ ಆರೋಪ ಮಾಡಿದ್ದು ರಾಜ್ಯಪಾಲರು, ಬೊಮ್ಮಾಯಿ, ಯಡಿಯೂರಪ್ಪ ಮತ್ತು ನಮ್ಮ ಮಾಜಿ ಮಂತ್ರಿಗಳ ಬಳಿ ಹೋಗಿ ಮನವಿ ಪತ್ರ ಕೊಟ್ಟಿದ್ದರು. ಈಗ ಗುತ್ತಿಗೆದಾರರು ಯೂ ಟರ್ನ್ ಹೊಡೆದಿದ್ದಾರೆ. ಇದನ್ನು ಯಾರು ನಂಬುತ್ತಾರೆ. ಗುತ್ತಿಗೆದಾರರಿಗೆ ಕಾಂಗ್ರೆಸ್‌ನವರು ಬೆದರಿಕೆ ಹಾಕಿರಬೇಕು. ಅದಕ್ಕಾಗಿ ಗುತ್ತಿಗೆದಾರ ಹೇಮಂತ್ ಯೂ ಟರ್ನ್ ಹೊಡೆದಿದ್ದಾರೆ. ಇದು ಕಾಂಗ್ರೆಸ್​ನ ಬ್ಲಾಕ್‌ಮೇಲ್ ತಂತ್ರ. ಈ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಸ್ವಾತಂತ್ರ್ಯ ಧ್ವಜಾರೋಹಣದ ನಂತರ ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸಲಿದ್ದೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ತಿಳಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಸರ್ಕಾರ ಭ್ರಷ್ಟಾಚಾರದ ಸರ್ಕಾರ. ಚಲುವರಾಯಸ್ವಾಮಿ ಲಂಚ ಕೇಳಿರೋದು ಸುಳ್ಳಾ?. ಗುತ್ತಿಗೆದಾರರ ಆರೋಪ ಸುಳ್ಳಾ? ಎಂದು ಟೀಕಿಸಿದರು.

ಡಿ.ಕೆ.ಶಿವಕುಮಾರ್ ಶೇ. 15ರಷ್ಟು ಕಮಿಷನ್ ಕೇಳಿಲ್ಲ ಎಂದು ಈಗ ಹೇಳಿದರೆ ಯಾರು ಒಪ್ಪತ್ತಾರೆ?. ಇದು ಬ್ಲಾಕ್‌ಮೇಲ್ ತಂತ್ರವಲ್ಲದೇ ಮತ್ತೇನಲ್ಲ. ಈ ಸರ್ಕಾರ ಭ್ರಷ್ಟ ಸರ್ಕಾರ. ಕಮಿಷನ್ ಸರ್ಕಾರ. ಈ ಸರ್ಕಾರ ಮುಂದುವರೆದಷ್ಟು ರಾಜ್ಯಕ್ಕೆ ಅಪಾಯ. ಇವರಿಂದ ರಾಜ್ಯ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಇದು ಹಣ ಮಾಡಿಕೊಳ್ಳಲು ಬಂದಿರುವ ಸರ್ಕಾರ. ಇಷ್ಟು ವರ್ಷಗಳ ಕಾಲ ಅಧಿಕಾರದಿಂದ ದೂರವಿದ್ದು, ಹಸಿದ ಹುಲಿಗಳಾಗಿದ್ದಾರೆ. ಅನೇಕರು ಹಣ ಮಾಡಲು ನಿಂತಿದ್ದಾರೆ. ಹಾಗಾಗಿ, ಈ ಸರ್ಕಾರ ಮುಂದುವರೆದಷ್ಟು ರಾಜ್ಯಕ್ಕೆ ಬಹಳ ಅನ್ಯಾಯವಾಗಲಿದೆ. ಜೀರೋ ಟಾಲರೆನ್ಸ್ ಭ್ರಷ್ಟಾಚಾರದ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದರಲ್ಲ. ಈಗ ಏನು ಕ್ರಮ ಕೈಗೊಳ್ಳುತ್ತೀರಿ ರಾಹುಲ್ ಗಾಂಧಿಯವರೇ ಎಂದು ಪ್ರಶ್ನಿಸಿದರು.

ಕಾಮಗಾರಿ ಮುಗಿದಿಲ್ಲ ಎಂದರೆ ಈಗ ಎಷ್ಟು ಕಾಮಗಾರಿಯಾಗಿದೆಯೋ ಅಷ್ಟು ಹಣವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಬೇಕಲ್ಲವೇ?. ಇವರು ಒತ್ತಡಕ್ಕೆ ಮಣಿದು ಗುತ್ತಿಗೆದಾರ ಹೇಮಂತ್ ಯೂ ಟರ್ನ್ ಹೇಳಿಕೆ ನೀಡಿದ್ದಾರೆಯೇ ಹೊರತು, ಬೇರೆ ಏನೂ ಇಲ್ಲ. ಆದರೆ, ಕಮಿಷನ್ ಕೇಳಿರುವುದು ನಿಜ. ಬಹಳಷ್ಟು ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಬರುವ ದಿನಗಳಲ್ಲಿ ಈ ಸರ್ಕಾರಕ್ಕೆ ಜನ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಗುತ್ತಿಗೆದಾರರು ಗುತ್ತಿಗೆದಾರರೇ. ಅವರು ನಮ್ಮ ಕಾರ್ಯಕರ್ತರಲ್ಲ. ಕೆಂಪಣ್ಣ ಕಾಂಗ್ರೆಸ್ ಕಾರ್ಯಕರ್ತ ಇರಬಹುದು. ಯಾಕೆಂದರೆ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪದ ಪತ್ರ ತಯಾರು ಮಾಡಿದ್ದೇ ಕಾಂಗ್ರೆಸ್ ಕಚೇರಿಯಲ್ಲಿ. ಮೊದಲ ದಿನದಿಂದಲೂ ಕೆಂಪಣ್ಣ ಬಗ್ಗೆ ಗೊತ್ತಿರುವ ವಿಚಾರ. ಹಾಗಾಗಿ ಕೆಂಪಣ್ಣ ಕಾಂಗ್ರೆಸ್ ಕಾರ್ಯಕರ್ತ. ಇನ್ನು ಗುತ್ತಿಗೆದಾರರು ಯಾರೂ ನಮ್ಮ ಕಾರ್ಯಕರ್ತರಲ್ಲ. ಅವರ ಬಾಕಿ ಹಣ ಬಿಡುಗಡೆ ಮಾಡಬೇಕು ಎನ್ನುವುದು ಬಿಜೆಪಿಯ ನಿಲುವು ಎಂದರು.

ಪೋಸ್ಟರ್ ಅಭಿಯಾನ ಮಾಡುತ್ತೇವೆ: ಆಗಸ್ಟ್ 15ರ ಸ್ವಾತಂತ್ರ್ಯ ಧ್ವಜಾರೋಹಣ ಮುಗಿಯುತ್ತಿದ್ದಂತೆ ರಾಜ್ಯಾದ್ಯಂತ ಭ್ರಷ್ಟ ಸರ್ಕಾರದ ವಿರುದ್ಧ, ಕಮಿಷನ್ ಸರ್ಕಾರದ ವಿರುದ್ಧ ದೊಡ್ಡ ಹೋರಾಟ ಮಾಡುತ್ತೇವೆ. ಪೋಸ್ಟರ್ ಅಭಿಯಾನ ಮಾಡುತ್ತೇವೆ. ಶಾಸಕರು, ಸಂಸದರು ಎಲ್ಲರೂ ಸೇರಿಕೊಂಡು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ:ಬಿಜೆಪಿ ವತಿಯಿಂದ ವಿಶೇಷವಾಗಿ 76ನೇ ಸ್ವಾತಂತ್ರ್ಯೋತ್ಸವ ಆಚರಣೆ: ಎನ್.ರವಿಕುಮಾರ್

ABOUT THE AUTHOR

...view details