ಕರ್ನಾಟಕ

karnataka

ETV Bharat / state

ವಿವಿ ನೇಮಕಾತಿ ಹಗರಣಗಳಲ್ಲಿ ಮುಖ್ಯಮಂತ್ರಿಗಳೇ ಪಾಲುದಾರರು: ಡಿ.ಕೆ.ಸುರೇಶ್ ಆರೋಪ

ಆರ್​ಎಸ್ಎಸ್, ಸಮಾಜವನ್ನು ಒಡೆಯಲು ಹೊರಟಿದೆ. ಬಿಜೆಪಿ ಅಶಾಂತಿ ಮೂಡಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಆರ್​ಎಸ್​ಎಸ್ ಪಠ್ಯ ಪುಸ್ತಕ ಸಿದ್ಧಪಡಿಸಿದೆ. ಆಚಾರ, ವಿಚಾರ ನಿತ್ಯದ ಸಂಗತಿಗಳಲ್ಲೂ ಜನರನ್ನು ಭಯ ಭೀತ ಮೂಡಿಸಲು ಹೊರಟಿದ್ದಾರೆ ಎಂದು ಡಿ.ಕೆ.ಸುರೇಶ್ ದೂರಿದರು.

Congress MP DK Suresh
ಕಾಂಗ್ರೆಸ್​​ ಸಂಸದ ಡಿ.ಕೆ.ಸುರೇಶ್​

By

Published : May 17, 2022, 6:06 PM IST

Updated : May 17, 2022, 7:00 PM IST

ಬೆಂಗಳೂರು: ಪಿಎಸ್ಐ ಹುದ್ದೆಗಳ ನೇಮಕಾತಿ ಮಾತ್ರವಲ್ಲ, ವಿಶ್ವವಿದ್ಯಾಲಯಗಳ ನೇಮಕಾತಿಯಲ್ಲೂ ಅಕ್ರಮಗಳು ನಡೆದಿದ್ದು, ಹಗರಣಗಳಲ್ಲಿ ಮುಖ್ಯಮಂತ್ರಿಗಳೇ ಇದರಲ್ಲಿ ಪಾಲುದಾರರು. ತಕ್ಷಣವೇ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕೆಂದು ಕಾಂಗ್ರೆಸ್​​ ಸಂಸದ ಡಿ.ಕೆ.ಸುರೇಶ್​ ಒತ್ತಾಯಿಸಿದರು.

ಇಂದು ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚಿಸಿ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೇಮಕಾತಿ ಹಗರಣಗಳಲ್ಲಿ ಮಂತ್ರಿಮಂಡಲದ ಅನೇಕರು ಕೂಡ ಇದರಲ್ಲಿ ಪಾಲುದಾರರಿದ್ದಾರೆ. ಹೀಗಾಗಿ ಇದನ್ನು ಮುಚ್ಚಿ ಹಾಕುವುದಕ್ಕೆ ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.

ಕಾಂಗ್ರೆಸ್​​ ಸಂಸದ ಡಿ.ಕೆ.ಸುರೇಶ್​

ಸರ್ಕಾರ ಯುವಕರ ಭವಿಷ್ಯ ಹಾಳು ಮಾಡುವ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿಗಳಿಗೆ ಯುವಕರ ರಕ್ಷಣೆ ಜವಾಬ್ದಾರಿ ಇರಬೇಕು. ಹೀಗಾಗಿ ನ್ಯಾಯಸಮ್ಮತ ತನಿಖೆ ಮಾಡಲಿ. ನಮ್ಮ ಕಾಲದಲ್ಲೂ ಅಕ್ರಮ ಆಗಿದ್ದರೂ ತನಿಖೆ ಮಾಡಲಿ. ಆದರೆ, ಸರ್ಕಾರ ಯಾವುದೇ ತನಿಖೆಯನ್ನೇ ಮಾಡುತ್ತಿಲ್ಲವಲ್ಲರೀ ಎಂದು ಮರು ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯ ನಮ್ಮ ನಾಯಕರು:ಸಿದ್ದರಾಮಯ್ಯ ಹಿರಿಯರು, ನಮ್ಮ ಪಕ್ಷದ ನಾಯಕರು. ನಮ್ಮ ನಾಯಕರ ಮನೆಗೆ ಆಗಾಗ ಬರುತ್ತಿರುತ್ತೇನೆ. ಅವರನ್ನು ಕ್ಷೇತ್ರದ ಹಲವು ಕಾರ್ಯಕ್ರಮಗಳಿಗೆ ಆಹ್ವಾನ ಮಾಡಲು ಬಂದಿದ್ದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಡಿ.ಕೆ.ಸುರೇಶ್​ ಇದೇ ವೇಳೆ ಸ್ಪಷ್ಟಪಡಿಸಿದರು.

ರಾಜ್ಯಸಭೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಹಿರಿಯರು, ಮುಖಂಡರು, ಹೈಕಮಾಂಡ್ ಚರ್ಚೆ ಮಾಡಿ ತೀರ್ಮಾನ ಮಾಡುತ್ತದೆ. ಮುದ್ದಹನುಮೇಗೌಡ ಅವರಿಗೆ ಟಿಕೆಟ್​ ಕೊಟ್ಟರೂ ಸ್ವಾಗತ ಮಾಡುತ್ತೇನೆ. ಅವರು ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿಧಾನಸಭೆ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದವರು. ಸಂಸದರಾಗಿಯೂ ಕೆಲಸ ಮಾಡಿದವರು ಎಂದರು.

ಪ್ರಿಯಾಂಕಾ ಬಂದ್ರೆ ಸ್ವಾಗತಿಸುತ್ತೇನೆ: ಪಕ್ಷದ ನಾಯಕಿ ಪ್ರಿಯಾಂಕಾ​ ಗಾಂಧಿ ರಾಜ್ಯಕ್ಕೆ ಬರುತ್ತಾರೆ ಎಂಬ ವಿಚಾರ ಮಾಧ್ಯಮಗಳಲ್ಲಿ ನೋಡಿದ್ದೇನೆ. ಪಕ್ಷದ ಹಿತದೃಷ್ಟಿ, ಸಂಘಟನೆ ದೃಷ್ಟಿಯಿಂದ ಏನೇ ನಿರ್ಧಾರ ಕೈಗೊಂಡರೂ ಸ್ವಾಗತ ಮಾಡುತ್ತೇವೆ. ಪ್ರಿಯಾಂಕಾ ಗಾಂಧಿ ರಾಜ್ಯದಿಂದ ಸ್ಪರ್ಧಿಸುವುದಾದರೆ ಖಂಡಿತ ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ:ಶಾಲಾ ವಿದ್ಯಾರ್ಥಿಗಳಿಗೆ ರೈಫಲ್ ತರಬೇತಿ, ತಾಲಿಬಾನ್ ಸಂಸ್ಕೃತಿ ಬಿಂಬಿಸುತ್ತದೆ: ಯು ಟಿ ಖಾದರ್

Last Updated : May 17, 2022, 7:00 PM IST

ABOUT THE AUTHOR

...view details