ಕರ್ನಾಟಕ

karnataka

ETV Bharat / state

ಲೋಕಸಭೆಯಲ್ಲಿ ಭದ್ರತಾ ಲೋಪ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರ ವಾಗ್ದಾಳಿ

ಲೋಕಸಭೆಯಲ್ಲಿನ ಭದ್ರತಾ ಲೋಪ ಸಂಬಂಧ ಸಂಸದ ಪ್ರತಾಪ್ ಸಿಂಹ ವಿರುದ್ಧ ನ್ಯಾಷನಲ್​ ಸೆಕ್ಯುರಿಟಿ ಆಕ್ಟ್​ ಅಡಿ ಪ್ರಕರಣ ದಾಖಲಿಸಬೇಕು ಎಂದು ಶಾಸಕ ರಿಜ್ವಾನ್ ಅರ್ಷದ್ ಒತ್ತಾಯಿಸಿದ್ದಾರೆ.

Etv Bharatcongress-mlas-reaction-on-security-breach-in-lok-sabha
ಲೋಕಸಭೆಯಲ್ಲಿ ಭದ್ರತಾ ಲೋಪ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರ ವಾಗ್ದಾಳಿ

By ETV Bharat Karnataka Team

Published : Dec 13, 2023, 5:32 PM IST

Updated : Dec 13, 2023, 5:54 PM IST

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರ ವಾಗ್ದಾಳಿ

ಬೆಳಗಾವಿ: ಸಂಸತ್​ನಲ್ಲಿ ಭದ್ರತಾ ಲೋಪವಾದ ಹಿನ್ನೆಲೆ ಕಾಂಗ್ರೆಸ್ ಶಾಸಕರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.‌ ಸುವರ್ಣಸೌಧದಲ್ಲಿ ಮಾತನಾಡಿದ ಶಾಸಕ ರಿಜ್ವಾನ್ ಅರ್ಷದ್, "ಸಂಸತ್​ ಮೇಲೆ ಸುಮಾರು 20 ವರ್ಷಗಳ ಹಿಂದೆ ದಾಳಿಯಾಗಿತ್ತು. ಅನೇಕರು ಪ್ರಾಣ ಕಳೆದುಕೊಂಡಿದ್ದರು. 20 ವರ್ಷದ ಬಳಿಕ ಆನಿವರ್ಸರಿ ಆಗಿದೆ. ಇಂದು ಲೋಕಸಭೆ ಕಲಾಪದ ವೇಳೆ ಇಬ್ಬರು ದುಷ್ಕರ್ಮಿಗಳು ಒಳನುಗ್ಗಿ, ಸ್ಮೋಕ್​ ಕ್ರ್ಯಾಕರ್​ವೊಂದನ್ನು ಸ್ಪ್ರೇ ಮಾಡುತ್ತಾರೆ ಎಂದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಷ್ಟು ಅಸಮರ್ಥವಾಗಿದೆ ಎಂದು ತಿಳಿಯುತ್ತದೆ. ಇದು ಇವರ ನಿರ್ಲಕ್ಷ್ಯನೋ, ಅಸಹಾಯಕತೆನೋ ನನಗೆ ಅರ್ಥವಾಗುತ್ತಿಲ್ಲ" ಎಂದು ಟೀಕಿಸಿದರು.

ಸಂಸದ ಪ್ರತಾಪ್ ಸಿಂಹ ಮೇಲೆ ಕೇಸ್​ ದಾಖಲಾಗಬೇಕು: "ನನಗೆ 56 ಇಂಚಿನ ಎದೆ ಇದೆ, ಶಕ್ತಿ ಇದೆ. ಎಲ್ಲರಿಗೂ ಭದ್ರತೆ ಕೊಡುತ್ತೀವಿ ಅಂತ ಘೋಷಣೆ ಕೂಗುತ್ತಾರೆ. ಕಲಾಪ ನಡೆಯುವಾಗ ಸಂಸತ್​ ರಕ್ಷಣೆ ಮಾಡದೇ ಇರುವಂತಹ ಅಸಮರ್ಥ ಸರ್ಕಾರವನ್ನು ಇತಿಹಾಸದಲ್ಲಿ ನೋಡಿಲ್ಲ. ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದಲೇ ಪಾಸ್​ ಕೊಡಲಾಗಿರುವುದರಿಂದ ಅವರ ಮೇಲೆ ಮೊದಲು ನ್ಯಾಷನಲ್​ ಸೆಕ್ಯುರಿಟಿ ಆಕ್ಟ್​ ಅಡಿ ಪ್ರಕರಣ ದಾಖಲಿಸಬೇಕು. ಇದೇ ರೀತಿ ಬೇರೆ ಯಾರಾದರೂ ಪಾಸ್​ ನೀಡಿದ್ದರೆ ಬಿಜೆಪಿಯವರು ಯುಎಪಿಎ, ಎನ್​ಎಸ್​ಎ ಪ್ರಕರಣ ಹಾಕುತ್ತಿದ್ದರು. ಇದೊಂದು ದೊಡ್ಡ ಷಡ್ಯಂತ್ರ ಎಂದು ಕೊಗುತ್ತಿದ್ದರು" ಎಂದು ವಾಗ್ದಾಳಿ ನಡೆಸಿದರು.

ಘಟನೆಯನ್ನು ಖಂಡಿಸುತ್ತೇನೆ:ಇದೇ ವೇಳೆ ಮಾತನಾಡಿದ ವಿಧಾನ ಪರಿಷತ್​ ಸದಸ್ಯ ಬಿ.ಕೆ.ಹರಿಪ್ರಸಾದ್, "ಈ‌ ಹಿಂದೆ ಉಗ್ರಗಾಮಿಗಳು ‌ಪಾರ್ಲಿಮೆಂಟ್‌ ಮೇಲೆ ದಾಳಿ‌ ನಡೆಸಿದ್ದರು. ಹುತಾತ್ಮರಿಗೆ ಸಂತಾಪ ಸೂಚಿಸುವ ದಿನವೇ‌ ಈ ಘಟನೆ ನಡೆದಿದೆ. ಹೊಸ‌ ಪಾರ್ಲಿಮೆಂಟ್ ಕಟ್ಟಿದ್ದಾರೆ. ಆದರೂ‌ ರಾಷ್ಟ್ರದ ಭದ್ರತೆ ಕುಸಿದಿದೆ. ಭದ್ರತಾ ವೈಫಲ್ಯದ ಹೊಣೆಯನ್ನ ಗೃಹ ಸಚಿವರು‌ ಹೊರಬೇಕು. ಈ ಘಟನೆಯನ್ನು ನಾನು ಖಂಡಿಸುತ್ತೇನೆ" ಎಂದು ಹೇಳಿದರು.

ಅಮಿತ್ ಶಾ ರಾಜೀನಾಮೆ ಕೊಡಬೇಕು:ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ಶಾಸಕ‌ ಅಜಯ ಸಿಂಗ್, "ಲೋಕಸಭೆಯಲ್ಲಿ ಈ ರೀತಿ ಆಗಿರುವುದು ದೇಶದ ದೊಡ್ಡ ಭದ್ರತಾ ವೈಫಲ್ಯ. ಪಾರ್ಲಿಮೆಂಟ್ ನಲ್ಲಿ ಈ ರೀತಿ ಆದರೆ ಸಾರ್ವಜನಿಕ ಪರಿಸ್ಥಿತಿ ಏನು?. ಘಟನೆಯ ಸಂಪೂರ್ಣ ಜವಾಬ್ದಾರಿ ಕೇಂದ್ರ ಸರ್ಕಾರ ಹೊರಬೇಕು. ಅಮಿತ್ ಶಾ ಘಟನೆಯ ಹೊಣೆ ಹೊತ್ತು ರಾಜೀನಾಮೆ ನೀಡಬೇಕು" ಎಂದು ಆಗ್ರಹಿಸಿದರು.

ಇದನ್ನೂ ಓದಿ:ಸಂಸತ್ ನಮಗೆ ದೇಗುಲ ಇದ್ದಂತೆ, ತಂದೆಯಾಗಿ ಖಂಡಿಸುತ್ತೇನೆ: ಮನೋರಂಜನ್​ ತಂದೆ ಪ್ರತಿಕ್ರಿಯೆ

Last Updated : Dec 13, 2023, 5:54 PM IST

ABOUT THE AUTHOR

...view details