ಕರ್ನಾಟಕ

karnataka

ETV Bharat / state

ತಾಜ್​ನಿಂದ ಪ್ರಕೃತಿಯೆಡೆಗೆ... ಇನ್ನೂ ಮೂರು ದಿನ ರೆಸಾರ್ಟ್​ನಲ್ಲೇ ಕೈ ಶಾಸಕರ ವಾಸ್ತವ್ಯ - ತಾಜ್​ ವಿವಾಂತ್ ರೆಸಾರ್ಟ್​

ರಾಜ್ಯದಲ್ಲಿ ಸ್ಮಾರ್ಟ್‌ ರಾಜಕಾರಣ ಮುಂದುವರೆದಿದೆ. ಅತೃಪ್ತ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ತಂತ್ರಗಾರಿಕೆಗೆ ಮುಂದಾಗಿರುವ ಆಯಾ ಪಕ್ಷದ ಮುಖಂಡರು ಒಂದೊಂದು ರೆಸಾರ್ಟ್​ನಲ್ಲಿ‌‌ ತಮ್ಮ ಶಾಸಕರನ್ನು ಇರಿಸಿದ್ದಾರೆ.

ತಾಜ್​ ವಿವಾಂತ್​ನಿಂದ ಪ್ರಕೃತಿ ರೆಸಾರ್ಟ್​ಗೆ ಕೈ ಶಾಸಕರು

By

Published : Jul 16, 2019, 2:42 PM IST

Updated : Jul 16, 2019, 3:45 PM IST

ಬೆಂಗಳೂರು: ರಾಜೀನಾಮೆ ಪರ್ವದಿಂದ ತಮ್ಮ ತಮ್ಮ ಶಾಸಕರನ್ನು ಕೂಡಿಟ್ಟುಕೊಳ್ಳುವ ತಂತ್ರಕ್ಕೆ ಮುಂದಾಗಿರುವ ಮೂರು ಪಕ್ಷಗಳು ಒಂದೊಂದು ರೆಸಾರ್ಟ್​ನಲ್ಲಿ‌‌ ತಮ್ಮ ಶಾಸಕರನ್ನು ಇರಿಸಿದ್ದಾರೆ.

ಅದೇ ರೀತಿ ಕಾಂಗ್ರೆಸ್​ ಪಕ್ಷ ಕೂಡ ಯಶವಂತಪುರದಲ್ಲಿರುವ ತಾಜ್​ ವಿವಾಂತ್ ರೆಸಾರ್ಟ್​ನಲ್ಲಿ ತಮ್ಮ ಶಾಸಕರನ್ನು ಕಳೆದ ಎರಡು ದಿನಗಳಿಂದ ಇರಿಸಿದ್ದು, ಇಂದು ದೇವನಹಳ್ಳಿ ತಾಲೂಕಿನ ಹೆಗ್ಗನಹಳ್ಳಿ ಬಳಿಯ ಪ್ರಕೃತಿ ರೆಸಾರ್ಟ್​ಗೆ ವಾಸ್ತವ್ಯ ಶಿಪ್ಟ್ ಆಗಿದೆ.

ತಾಜ್​ ವಿವಾಂತ್​ನಿಂದ ಪ್ರಕೃತಿ ರೆಸಾರ್ಟ್​ಗೆ ತೆರಳಿದ ಕೈ ಶಾಸಕರು

ದೇವನಹಳ್ಳಿ ಪ್ರಕೃತಿ ರೆಸಾರ್ಟ್​ಗೆ ಈಗಾಗಲೇ ಕಾಂಗ್ರೆಸ್ ಶಾಸಕರು ಆಗಮಿಸಿದ್ದು, ಇನ್ನು ಮೂರು ದಿನಗಳ‌ ಕಾಲ ಈ ರೆಸಾರ್ಟ್​ನಲ್ಲೇ ಶಾಸಕರು ವಾಸ್ತವ್ಯ ಹೂಡಲಿದ್ದಾರೆ. ಬಸ್​ನಲ್ಲಿ ಪೊಲೀಸ್ ಭದ್ರತೆಯ ಮೂಲಕ ಶಾಸಕರು ರೆಸಾರ್ಟ್​ಗೆ ಶಾಸಕರು ಆಗಮಿಸಿದ್ದರು.

ಅಧಿವೇಶನದ ಬಳಿಕ ಕೆಲ ಶಾಸಕರು ಹೋಟೆಲ್​ಗೆ ಬಾರದೆ ತಮ್ಮ ತಮ್ಮ ಮನೆಗಳಿಗೆ ಹೋಗುತ್ತಿದ್ದರೆ ಎನ್ನುವ ಹಿನ್ನೆಲೆ‌ ಎಲ್ಲಾ ಶಾಸಕರನ್ನು ಒಂದು ಕಡೆ ಇರಿಸಲು ಮುಂದಾದ ಕಾಂಗ್ರೆಸ್ ಮುಖಂಡರು, ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿ ಇರುವ ಪ್ರಕೃತಿ ರೆಸಾರ್ಟ್​ಗೆ ಎಲ್ಲರನ್ನು ಶಿಫ್ಟ್​ ಮಾಡಲು ಮುಂದಾದರು. ಈ ಹಿನ್ನೆಲೆ ಇಂದು ಮಧ್ಯಾಹ್ನ ಪ್ರಕೃತಿ ರೆಸಾರ್ಟ್​ಗೆ ಖಾಸಗಿ ಬಸ್​ನಲ್ಲಿ ಶಾಸಕರು ಆಗಮಿಸಿದ್ದಾರೆ..

ಈ ಹಿಂದೆ ಬೆಂಗಳೂರಲ್ಲಿ ಇದ್ದ ತಾಜ್ ವಿವಂತಾ ರೆಸಾರ್ಟ್​ನಲ್ಲಿ ವಾಸ್ತವ್ಯವಿದ್ದಾಗ ವೈಯಕ್ತಿಕ ಕೆಲಸಗಳಿಂದಾಗಿ ಹಲವಾರು ಶಾಸಕರು ಹೊರಗಡೆ ಹೋಗುತ್ತಿದ್ದರು. ಈ ವೇಳೆ ಬಿಜೆಪಿ ಪಕ್ಷದ ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡುತ್ತಾರೆ ಎಂಬ ಅನುಮಾನದ ಹಿನ್ನೆಲೆ ಶಾಸಕರನ್ನು ಪ್ರಕೃತಿ ರೆಸಾರ್ಟ್​ಗೆ ಶಿಫ್ಟ್​ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಬೆಂಗಳೂರಿನಿಂದ ಹೊರಗೆ ಇರುವ ದೇವನಹಳ್ಳಿ ಪ್ರಕೃತಿ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡುವುದರಿಂದ ಹೊರಗಡೆಯ ಸಂಪರ್ಕ ಇಲ್ಲದೆ ಒಗ್ಗಟ್ಟಾಗಿ ಇರಬಹುದು ಅನ್ನೋದು ಕೈ ನಾಯಕರ ಉದ್ದೇಶವಾಗಿದೆ.

ಈಗಾಗಲೇ ಕೈ ಶಾಸಕರ ವಾಸ್ತವ್ಯಕ್ಕೆ ಪ್ರಕೃತಿ ರೆಸಾರ್ಟ್​ನಲ್ಲಿ ರೂಂ ಗಳು ಬುಕ್ ಆಗಿದ್ದು, ಶಾಸಕರು ತಮ್ಮ ತಮ್ಮ ರೂಂ ಗಳಲ್ಲಿ ತಂಗಿದ್ದಾರೆ. ಇನ್ನು ಇಲ್ಲಿ ಒಂದು ರೂಂಗೆ ದಿನವೊಂದಕ್ಕೆ 14 ಸಾವಿರ ರೂ. ಬಾಡಿಗೆಯಿದೆಯಂತೆ.‌ ಇನ್ನು ಪ್ರಕೃತಿ ರೆಸಾರ್ಟ್​ಗೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದ್ದು, ನೂರಾರು ಪೊಲೀಸ್ ಸಿಬ್ಬಂದಿ ರೆಸಾರ್ಟ್ ಸುತ್ತಮುತ್ತ ಬೀಡು ಬಿಟ್ಟಿದ್ದಾರೆ.

Last Updated : Jul 16, 2019, 3:45 PM IST

ABOUT THE AUTHOR

...view details