ಕರ್ನಾಟಕ

karnataka

ETV Bharat / state

ಸಿಎಂ ಬೊಮ್ಮಾಯಿ ಅವರೇ ನನಗೆ 'ದಿ ಬೆಸ್ಟ್ ಎಂಎಲ್​ಎ' ಎಂದಿದ್ದಾರೆ: ಕಟ್ಟಾ ಸುಬ್ರಹ್ಮಣ್ಯನಾಯ್ಡುಗೆ ಬೈರತಿ ಸುರೇಶ್ ತಿರುಗೇಟು - ಹೆಬ್ಬಾಳ ಕ್ಷೇತ್ರದಲ್ಲಿ ಭ್ರಷ್ಟಾಚಾರ ಆರೋಪ

ಸಾರ್ವಜನಿಕ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನ್ನನ್ನು 'ದಿ ಬೆಸ್ಟ್ ಎಂಎಲ್​ಎ' ಎಂದು ಪ್ರಶಂಸಿಸಿದ್ದಾರೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಕಾಂಗ್ರೆಸ್​ ಶಾಸಕ ಬೈರತಿ ಸುರೇಶ್ ತಿರುಗೇಟು ನೀಡಿದ್ದಾರೆ.

congress-mla-byrathi-suresh-counter-attack-against-bjp-leader-katta-subramanya-naidu
ಸಿಎಂ ಬೊಮ್ಮಾಯಿ ಅವರೇ ನನಗೆ 'ದಿ ಬೆಸ್ಟ್ ಎಂಎಲ್​ಎ' ಎಂದಿದ್ದಾರೆ: ಕಟ್ಟಾ ಸುಬ್ರಹ್ಮಣ್ಯನಾಯ್ಡುಗೆ ಬೈರತಿ ಸುರೇಶ್ ತಿರುಗೇಟು

By

Published : Jul 16, 2022, 5:37 PM IST

ಬೆಂಗಳೂರು:ಬಿಜೆಪಿ ಮುಖಂಡ, ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಮಾಡಿದ ಭ್ರಷ್ಟಾಚಾರ ಆರೋಪ ಸಂಬಂಧ ಹೆಬ್ಬಾಳದ ಕಾಂಗ್ರೆಸ್​​ ಶಾಸಕ ಬೈರತಿ ಸುರೇಶ್ ಪ್ರತಿಕ್ರಿಯಿಸಿದ್ದು​, ಇದಕ್ಕೆ ಪ್ರತಿಯಾಗಿ 15 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧದ ಕೇಸುಗಳೆಲ್ಲಾ ಏನಾಗಿವೆ ಎಂಬ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಬೈರತಿ ಸುರೇಶ್ ಕೇಳಿದ ಪ್ರಶ್ನೆಗಳು ಹೀಗೆ...

1. ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಬ್ಬಾಳ ಕುಂತಿ ಗ್ರಾಮ ಗುಡ್ಡದಹಳ್ಳಿ ಸರ್ವೆ ನಂ:1ರಲ್ಲಿ 03 ಎಕರೆ 45 ಗುಂಟೆ ಸರ್ಕಾರಿ ಜಾಗದಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡುರವರೇ ನೀವು ಅಕ್ರಮವಾಗಿ ಟಿಡಿಆರ್ ಪಡೆದು 200 ಕೋಟಿ ಹಗರಣ ನಡೆದಿರುವುದು ಸರ್ಕಾರಿ ಮಟ್ಟದಲ್ಲಿ ಹಾಗೂ ಕೋರ್ಟ್​ ತನಿಖೆಯು ಯಾವ ಹಂತದಲ್ಲಿದೆ?.

2. ಕಟ್ಟಾ ಸುಬ್ರಮಣ್ಯ ನಾಯ್ಡುರವರೇ ನಿಮ್ಮ ಇಟಾಸ್ಕ ಕಂಪನಿಯ ಮೇಲೆ ಸಿಬಿಐ ಮತ್ತು ಇಡಿ ಹಾಗೂ ಲೋಕಾಯುಕ್ತರು ನಡೆಸುತ್ತಿರುವ ತನಿಖೆಗಳು ಎಷ್ಟು ಇವೆ?. ಇನ್ನೂ ಎಷ್ಟು ಕ್ರಿಮಿನಲ್ ಹಗರಣಗಳು ಮತ್ತು ಸಿವಿಲ್ ಹಗರಣಗಳು ಹಾಗೂ ಪರಿಶಿಷ್ಟ ಜಾತಿ / ಪರಿಶಿಷ್ಠ ಪಂಗಡ ದೌರ್ಜನ್ಯ ಕಾಯಿದೆಗಳ ಕೇಸ್ ಹಾಗೂ ಬಾಗಲೂರು ಮತ್ತು ಬಂಡ ಕೊಡಗೇನಹಳ್ಳಿ ಸುತ್ತಾಮುತ್ತಾಲ್ಲಿನ ಪುದೇಶಗಳಲ್ಲಿ ನಿಮ್ಮ ಮೇಲೆ ಇರುವ ಮೊಕದ್ದಮೆಗಳು ಎಷ್ಟು?.

3. ಕಟ್ಟಾ ಸುಬ್ರಮಣ್ಯ ನಾಯ್ಡು ನಿಮ್ಮ ಮೇಲೆ ಇರುವ ಹೈಕೋರ್ಟ್ ಪಿಟೇಶನ್ ನಂ: 432/2013 ಹಾಗೂ ಕ್ರೈಂ ನಂ:57/2010ರ ಕೇಸ್ ತನಿಖೆ ಯಾವ ಮಟ್ಟದಲ್ಲಿದೆ ? ತಿಳಿಸುವಿರಾ?.

4. ವೈದ್ಯಕೀಯ ಬೇಲ್ ಲಿಪೋಮ್ ಕ್ಯಾನ್ಸರ್ ಎಂದು ನೀವು ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೀರಾ? ಈಗ ಚಿಕಿತ್ಸೆ ಯಾವ ಹಂತದಲ್ಲಿದೆ? ತಮಗೆ ಈಗಲೂ ಸಹ ಮೆಡಿಕಲ್ ಬೆಲ್ ಇದೇಯೋ ಅಥಾವ ಇಲ್ಲವೋ?. ಯಾವ ತರಹದ ಬೇಲ್​ನಲ್ಲಿದೀರಾ? ರೆಗ್ಯುಲರ್ ಬೇಲ್ ಪಡೆದಿದ್ದೀರಾ?.

5. ಕೆಐಎಡಿಬಿ ಲ್ಯಾಂಡ್ ಕೇಸ್ ಯಾವ ಹಂತದಲ್ಲಿದೆ?, ಪಿಟೇಶನ್ ನಂ: 5698/2019 ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಹಾಗೂ ಆರ್.ಸುಭಾಷ್ ನೀಡಿರುವ ತೀರ್ಪು ಏನು ಬಂದಿದೆ ತಿಳಿಸುವಿರಾ? ಹಾಗೂ 27 ಕೋಟಿ ಹಗರಣದಲ್ಲಿ ಕುಟುಂಬದ ವಿರುದ್ಧ ಇಡಿ ಕೇಸ್ ಯಾವ ಹಂತದಲ್ಲಿದೆ?.

6. 19ರ ಡಿಸೆಂಬರ್ 2020ರ ಹೈಕೋರ್ಟ್ ನೀಡಿರುವ ತೀರ್ಪು ಮನಿ ಲ್ಯಾಂಡ್ರಿಗ್ ಕೇಸ್​ನ ಬಗ್ಗೆ ವಿವಿರ ನೀಡುವಿರಾ?. ಇನ್ನೂ ಈ ಕೇಸ್ ಯಾವ ಹಂತದಲ್ಲಿದೆ?.

7. ಇಂಡ್ ಸಿಂಡ್ ಡೆವಲಪರ್ಸ್​ನವರಿಗೆ 3 ಕೋಟಿ ವಂಚನೆ ಮಾಡಿರುವ ಕ್ರಿಮಿನಲ್ ಮೊಕದ್ದಮೆ ಯಾವ ಹಂತದಲ್ಲಿದೆ?.

8. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಡಿನೋಟಿಫೀಕೇಶನ್ ಹಗರಣದ ಕೇಸ್ ಹೈಕೋರ್ಟ್ ಮಟ್ಟದಲ್ಲಿ ಯಾವ ಹಂತದಲ್ಲಿದೆ?.

9. ಆರ್​ಟಿಐ ಕಾರ್ಯಕರ್ತರನ್ನು ಬಳಸಿಕೊಂಡು ಹೆಬ್ಬಾಳ ಕ್ಷೇತ್ರದ ಎಲ್ಲ ವಿಭಾಗದ ಸರ್ಕಾರಿ ಅಧಿಕಾರಿಗಳನ್ನು ಭಯಪಡಿಸಿ ಹೆದರಿಸಿ ಹಣ ವಸೂಲಿ ಮಾಡುತ್ತಿರುವ ನೀವು ಹಾಗೂ ಕಟ್ಟಾ ಜಗದೀಶ್‌ ಹಾಗೂ ಬಿಜೆಪಿ ಕಾರ್ಯಕರ್ತರು ಹಣ ವಸೂಲಿ ಮಾಡುತ್ತಿರುವ ಬಗ್ಗೆ ನಿಮ್ಮ ಉತ್ತರವೇನು?

10. ಬಿಬಿಎಂಪಿ ವಾರ್ಡ್ ಸಂಖ್ಯೆ: 20 ಮತ್ತು 34ರ ಗಂಗಾನಗರ, ಗಂಗೇನಹಳ್ಳಿ ವಾರ್ಡ್‌ಗಳಲ್ಲಿ ನೀವು ಹಾಗೂ ನಿಮ್ಮ ಜೊತೆಯಲ್ಲಿರುವ ರೌಡಿಗಳು ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಮತದಾರರನ್ನು ಸೇರಿಸುತ್ತಿರುವವರ ಬಗ್ಗೆ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲೆಯಾಗಿರುವ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ?.

11. ಒಂದು ತಿಂಗಳ ಹಿಂದೆ ಹೆಬ್ಬಾಳದ ಚೋಳನಾಯ್ಕನಹಳ್ಳಿ ನಿವಾಸಿ ಮುನಿಲಕ್ಷಮ್ಮ ನಿಮ್ಮ ಬಳಿ ಸಹಾಯ ಕೇಳಿ ಬಂದಾಗ ಅವರನ್ನು ನೀವು ದಲಿತ ಮಹಿಳೆ ಎಂದು ಹೀಯಾಳಿಸಿರುವುದು ಹಾಗೂ ಆಕೆ ನಿಮ್ಮ ಮೇಲೆ ಪ್ರತಿಭಟನೆ ನಡೆಸಿರುವ ಬಗ್ಗೆ ನಿಮ್ಮ ಅನಿಸಿಕೆ?.

12. ಹೆಬ್ಬಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡುರವರೇ ನಿಮ್ಮ ಗೂಂಡಾ ಪಡೆಯವರು ಜನರಲ್ಲಿ ಭಯಪಡಿಸಿ, ನಮ್ಮ ಸರ್ಕಾರ ಇದೆ ನಾವುಗಳು ಏನು ಬೇಕಾದರೂ ಮಾಡುತ್ತೇವೆ ಎಂದು ನೀವು ಹೇಳುಕೊಂಡು ಓಡಾಡುತ್ತೀರುತ್ತೀರಿ ನಿಜಾನಾ? ನಿಮ್ಮ ಅಭಿಪ್ರಾಯ?

13. ಹೆಚ್.ಎಂ.ಟಿ ಮೈದಾನದಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡುರವರೇ ತಮ್ಮ ಹುಟ್ಟು ಹಬ್ಬದ ಆಚರಣೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಭಾಗಿಯಾದ ವೇದಿಕೆಯಲ್ಲಿ ಕ್ಷೇತ್ರದ 8 ವಾರ್ಡ್‌ಗಳ ಮೀಸಲಾತಿ ಮತ್ತು ವಾರ್ಡ್ ವಿಂಗಡಣೆಯನ್ನು ನನಗೆ ಹೇಗೆ ಬೇಕೋ ಹಾಗೇ ಸಿಎಂ ಮಾಡಿ ಕೊಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದೀರಾ?. ಇದಕ್ಕೆ ಮುಖ್ಯ ಮಂತ್ರಿಗಳನ್ನು ಅಭಿನಂದಿಸುತ್ತೇನೆ ಎಂದು ಹೇಳುವುದು ಕ್ರಿಮಿನಲ್ ಅಪರಾಧವಲ್ಲವೇ?. ಸಂವಿಧಾನದ ದುರುಪಯೋಗವಲ್ಲವೇ?.

14. ಕಟ್ಟಾ ಸುಬ್ರಮಣ್ಯ ನಾಯ್ಡುರವರೇ ಮೀಸಲಾತಿ, ವಾರ್ಡ್ ವಿಂಗಡಣೆ ನೀಡು ನೀಡಿರುವ ಹೇಳಿಕೆಯ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿರವರು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್​ನಲ್ಲಿ ದಾವೆ ಹೂಡಲಿದ್ದಾರೆ ನಿಮ್ಮ ಅಭಿಪ್ರಾಯವೇನು?.

15. ಆರ್.ಟಿ ನಗರದಲ್ಲಿ ನಡೆದ ರವೀಂದ್ರನಾಥ್ ಠಾಗೋರ್ ಅವರ ಪುತ್ಥಳಿ ಉದ್ಘಾಟನೆ ಸಮಾರಂಭದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ನನಗೆ ಅಂದರೇ ಬೈರತಿ ಸುರೇಶ್​ಗೆ ಹೆಬ್ಬಾಳ ಕ್ಷೇತ್ರದ ಪ್ರಾಮಾಣಿಕ ದಕ್ಷ, ನಿಷ್ಕಾವಂತ ಶಾಸಕ 'ದಿ ಬೆಸ್ಟ್ ಎಂಎಲ್​ ಎ' ಎಂದು ಸಾರ್ವಜನಿಕ ವೇದಿಕೆಯಲ್ಲಿ ನನ್ನನ್ನು ಪ್ರಶಂಸಿಸಿದ್ದಾರೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು ಕಟ್ಟಾ ಸುಬ್ರಮಣ್ಯ ನಾಯ್ಡುರವರೇ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

ಇದನ್ನೂ ಓದಿ:ಹೆಬ್ಬಾಳ ಕ್ಷೇತ್ರದಲ್ಲಿ 'ಕೈ' ಶಾಸಕರಿಂದ ಶೇ.20, ಅಧಿಕಾರಿಗಳಿಂದ ಶೇ.30ರಷ್ಟು ಕಮಿಷನ್ ಲೂಟಿ: ​ಕಟ್ಟಾ ಸುಬ್ರಮಣ್ಯನಾಯ್ಡು

ABOUT THE AUTHOR

...view details