ಬೆಂಗಳೂರು :ಕಾಂಗ್ರೆಸ್ನ ಮುಖ್ಯ ಸಚೇತಕ ಅಜಯ್ ಸಿಂಗ್ ಕೊರೊನಾ ಮೇಲಿನ ಚರ್ಚೆ ವೇಳೆ ಸೋಂಕಿತ ಸರ್ಕಾರ ಎಂಬ ಬರಹ ಇರುವ ಮಾಸ್ಕ್ ಧರಿಸಿ ಗಮನ ಸೆಳೆದರು. ಚರ್ಚೆ ವೇಳೆ, ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಕೊರೊನಾ ಸಂಬಂಧ ಸರ್ಕಾರದ ವೈಫಲ್ಯಗಳನ್ನು ಪ್ರಸ್ತಾಪಿಸಿದರು.
ಸದನದಲ್ಲಿ 'ಸೋಂಕಿತ ಸರ್ಕಾರ' ಮಾಸ್ಕ್ ಸದ್ದು: ಶಾಸಕ ಅಜಯ್ ಸಿಂಗ್ ವಿಭಿನ್ನ ಪ್ರಯತ್ನ - Congress legislator Ajay Singh mask
ಸದನದಲ್ಲಿ 'ಸೋಂಕಿತ ಸರ್ಕಾರ' ಎಂಬ ಬರಹದ ಮಾಸ್ಕ್ ಧರಿಸಿದ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್, ಕೊರೊನಾ ಸಂಬಂಧ ಸರ್ಕಾರದ ವೈಫಲ್ಯಗಳನ್ನು ಪ್ರಸ್ತಾಪಿಸಿ ಈ ಮೂಲಕ ಗಮನ ಸೆಳೆದರು.
ವಿಧಾನಸಭಾ ಅಧಿವೇಶನ (ಸಂಗ್ರಹ ಚಿತ್ರ)
ಈ ವೇಳೆ ಸೋಂಕಿತ ಸರ್ಕಾರ ಎಂಬ ಸ್ಲೋಗನ್ ಉಳ್ಳ ಮಾಸ್ಕ್ ಧರಿಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ಪ್ರತಿಭಟನಾ ರೀತಿಯಲ್ಲಿ ಸೋಂಕಿತ ಸರ್ಕಾರ ಎಂಬ ಘೋಷಣೆಯ ಕಪ್ಪು ಮಾಸ್ಕ್ ಧರಿಸಿ, ಕೋವಿಡ್- 19 ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಮೊದಲಿಗೆ ಸರ್ಜಿಕಲ್ ಮಾಸ್ಕ್ ಧರಿಸಿದ್ದ ಅಜಯ್ ಸಿಂಗ್, ಮಾತಿನ ಮಧ್ಯೆ ಪ್ರತಿಭಟನಾರ್ಥವಾಗಿ ಸೋಂಕಿತ ಸರ್ಕಾರ ಎಂಬ ಬರಹದ ಕಪ್ಪು ಬಣ್ಣದ ಮಾಸ್ಕ್ ಧರಿಸಿದರು. ಆ ಮೂಲಕ ಸರ್ಕಾರಕ್ಕೆ ಸದನದಲ್ಲಿ ಪ್ರತಿಭಟನೆಯ ಬಿಸಿ ಮುಟ್ಟಿಸಲು ಮುಂದಾದರು.
Last Updated : Sep 22, 2020, 7:05 PM IST