ಕರ್ನಾಟಕ

karnataka

ETV Bharat / state

'ಹಿಜಾಬ್ ವಿವಾದವನ್ನು ವಿದ್ಯಾರ್ಥಿನಿಯರ ಮೂಲಕ ಆಡಿಸುತ್ತಿರುವ ಕೀಲಿಕೈ ಬೇರೆಯೇ ಇದೆ'

ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಹಿಜಾಬ್ ವಿವಾದದ ವಿಚಾರಣೆಯನ್ನು ಫೆ. 28 ರ ವರೆಗೆ ಮುಂದೂಡುವಂತೆ ವಿದ್ಯಾರ್ಥಿಗಳ ಪರ ವಕೀಲರು ಈಗ ಹೈಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

Karnataka BJP chief  Nalin kumar Kateel
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

By

Published : Feb 15, 2022, 6:45 AM IST

ಬೆಂಗಳೂರು:ಹಿಜಾಬ್ ವಿವಾದವನ್ನು ವಿದ್ಯಾರ್ಥಿನಿಯರ ಮೂಲಕ ಆಡಿಸುತ್ತಿರುವ ಕೀಲಿಕೈ ಬೇರೆಯೇ ಇದೆ. ಕಾಂಗ್ರೆಸ್ ಈ ವ್ಯೂಹದ ಮೆದುಳು, ಎಸ್‌ಡಿಪಿಐ ಅದರ ದೇಹ ಎಂದು ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಇದು ಕೇವಲ ವಿವಾದವಲ್ಲ, ಮೂಲಭೂತವಾದವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ವ್ಯವಸ್ಥಿತ ಸಂಚು. ಹಿಜಾಬ್ ವಿವಾದ ಸಂಬಂಧ ವಿದ್ಯಾರ್ಥಿನಿಯರ ಪರ ವಾದ ಮಾಡುತ್ತಿರುವ ವಕೀಲರ ಪೈಕಿ‌ ಒಬ್ಬರು ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ನ್ಯಾಯವಾದಿಗಳ ಸಮಿತಿಯ ಅಧ್ಯಕ್ಷರು. ಈಗ ಈ ವಿವಾದ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದ ಬಗ್ಗೆ ಮಾತನಾಡುತ್ತಿದೆ ಎಂದರೆ ಇದೊಂದು ಕಾಂಗ್ರೆಸ್ ಪ್ರೇರಿತ 'ಟೂಲ್ ಕಿಟ್' ಭಾಗವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ವಿಚಾರಣೆ ಮುಂದೂಡುವಂತೆ ಮಧ್ಯಂತರ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಲ್ಲಿ ನಾಲ್ವರು ಅಪ್ರಾಪ್ತರು. ಈ ಅಪ್ರಾಪ್ತ ವಿದ್ಯಾರ್ಥಿನಿಯರು ಹಿಜಾಬ್ ವಿವಾದವನ್ನು ಪಂಚರಾಜ್ಯಗಳ ಚುನಾವಣೆಗೆ ಥಳುಕು ಹಾಕುತ್ತಿದ್ದಾರೆ ಎಂದರೆ ಅರ್ಥವೇನು?. ಈ ವಿದ್ಯಾರ್ಥಿನಿಯರು ಬೇರೆಯವರ ತಾಳಕ್ಕೆ ಕುಣಿಯುವ ಗೊಂಬೆಗಳು ಎಂದು ಅರ್ಥವಲ್ಲವೇ? ಎಂದಿದ್ದಾರೆ.

ಇದನ್ನೂ ಓದಿ:ಬುಧವಾರದಿಂದ ಪಿಯುಸಿ, ಡಿಗ್ರಿ ಕಾಲೇಜು ಆರಂಭಿಸಲು ಸರ್ಕಾರದ ನಿರ್ಧಾರ

ABOUT THE AUTHOR

...view details