ಕರ್ನಾಟಕ

karnataka

ETV Bharat / state

ನಾಳೆ ರಾಮನಗರದಿಂದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಎರಡನೇ ಹಂತ ಆರಂಭ - ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ 'ನಮ್ಮ ನೀರು, ನಮ್ಮ ಹಕ್ಕು' ಪಾದಯಾತ್ರೆ ಎರಡನೇ ಹಂತ ನಾಳೆ ಆರಂಭವಾಗಲಿದೆ.

mekedatu-padayatra-to-restart-from-tomorrow
ನಾಳೆ ರಾಮನಗರದಿಂದ ಕಾಂಗ್ರೆಸ್ ಪಾದಯಾತ್ರೆ ಎರಡನೇ ಹಂತ ಆರಂಭ

By

Published : Feb 26, 2022, 4:09 PM IST

Updated : Feb 26, 2022, 4:36 PM IST

ಬೆಂಗಳೂರು :ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ 'ನಮ್ಮ ನೀರು, ನಮ್ಮ ಹಕ್ಕು' ಪಾದಯಾತ್ರೆ ಎರಡನೇ ಹಂತ ನಾಳೆ ಆರಂಭವಾಗಲಿದೆ. ನಾಳೆ ಬೆಳಗ್ಗೆ ರಾಮನಗರದಿಂದ ಆರಂಭವಾಗುವ ಪಾದಯಾತ್ರೆಯು ಮಾರ್ಚ್ 3ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾರೋಪಗೊಳ್ಳಲಿದೆ.

ಜನವರಿ 9ರಂದು ರಾಮನಗರದ ಕನಕಪುರ ತಾಲೂಕಿನ ಮೇಕೆದಾಟು ಸಮೀಪದ ಸಂಗಮದಿಂದ ಪಾದಯಾತ್ರೆ ಆರಂಭಿಸಿದ್ದ ಕಾಂಗ್ರೆಸ್ ನಾಯಕರು ಕೋವಿಡ್ ನಿರ್ಬಂಧ ಹಿನ್ನೆಲೆ ನ್ಯಾಯಾಲಯದ ಸೂಚನೆ ಮೇರೆಗೆ ಐದನೇ ದಿನ ರಾಮನಗರದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಿದ್ದರು.

ಜನವರಿ 9ರಿಂದ 19ರವರೆಗೆ ನಡೆಸಲು ಉದ್ದೇಶಿಸಿದ್ದ ಪಾದಯಾತ್ರೆ ಮೊಟಕುಗೊಂಡಿತ್ತು. ಇದೀಗ ಕೋವಿಡ್ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಎರಡನೇ ಹಂತದ ಪಾದಯಾತ್ರೆಗೆ ಮುಂದಾಗಿರುವ ಕಾಂಗ್ರೆಸ್ ನಾಯಕರು, ನಾಳೆ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ.

ಮೊದಲ ಹಂತದ ಪಾದಯಾತ್ರೆ

ಮಾರ್ಗ ವಿವರ :ಫೆ.27ರಂದು ಬೆಳಗ್ಗೆ 8 ಗಂಟೆಗೆ ಆರಂಭವಾಗುವ ಪಾದಯಾತ್ರೆ ರಾಮನಗರದಿಂದ ಬಿಡದಿವರೆಗೂ ತಲುಪಲಿದೆ. ಫೆ. 28ರಂದು ಬಿಡದಿಯಿಂದ ಕೆಂಗೇರಿ (ಪೂರ್ಣಿಮ ಕನ್ವೆಷನ್ ಹಾಲ್)ವರೆಗೆ ಆಗಮಿಸುವ ಕಾಂಗ್ರೆಸ್ ನಾಯಕರು, ಮಾರ್ಚ್​ 1ರಂದು ಕೆಂಗೇರಿ ಪೂರ್ಣಿಮಾ ಕನ್ವೆಷನ್ ಹಾಲ್​ನಿಂದ ಅದ್ವೈತ್ ಪೆಟ್ರೋಲ್ ಬಂಕ್​ವರೆಗೂ ತಲುಪಲಿದ್ದಾರೆ.

ಮಾರನೇ ದಿನ ಅದ್ವೈತ್ ಪೆಟ್ರೋಲ್ ಬಂಕ್​ನಿಂದ ಹೊರಟು ಅರಮನೆ ಮೈದಾನದವರೆಗೂ ಆಗಮಿಸುವ ನಾಯಕರು, ಮಾರ್ಚ್ 3ರಂದು ಅರಮನೆ ಮೈದಾನದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ತೆರಳಿ ಬೃಹತ್​ ಸಮಾರೋಪ ಸಮಾರಂಭ ನಡೆಸುವ ಮೂಲಕ ಪಾದಯಾತ್ರೆ ಮುಕ್ತಾಯಗೊಳಿಸಲಿದ್ದಾರೆ.

ಇದನ್ನೂ ಓದಿ:ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಪುನೀತ್ ದರ್ಶನ ಪಡೆದ ನಟ ವಿಜಯ್​

ಐದು ದಿನದ ಪಾದಯಾತ್ರೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಮಾಜಿ ಸಚಿವರು, ಶಾಸಕರು, ಮುಖಂಡರು ಹಾಗೂ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಕೊನೆಯ ದಿನದ ಸಮಾರೋಪ ಸಮಾರಂಭಕ್ಕೆ ಪಕ್ಷದ ರಾಷ್ಟ್ರೀಯ ನಾಯಕರು ಸಹ ಆಗಮಿಸುವ ನಿರೀಕ್ಷೆಯಿದೆ.

Last Updated : Feb 26, 2022, 4:36 PM IST

ABOUT THE AUTHOR

...view details