ಕರ್ನಾಟಕ

karnataka

ETV Bharat / state

ಪೇ ಸಿಎಂ ಯಶಸ್ಸಿನ ಬೆನ್ನಲ್ಲೇ ಕಾಂಗ್ರೆಸ್​​ ಮಾಧ್ಯಮ ಸಂವಹನ ವಿಭಾಗಕ್ಕೆ ನೂತನ ತಂಡ ರಚನೆ - communication department new team

ಕೆಪಿಸಿಸಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ವಿಶೇಷ ತಂಡ ನೇಮಕ ಮಾಡಲಾಗಿದೆ. ಮಾಧ್ಯಮ ಹಾಗೂ ಸಂವಹನ ರಾಜ್ಯ ಸಮಿತಿ, ಮುಖ್ಯ ವಕ್ತಾರರು ಮತ್ತು ವಕ್ತಾರರ ನೇಮಕಾತಿ ಪ್ರಸ್ತಾವನೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅನುಮೋದಿಸಿದ್ದಾರೆ.

congress-media-communication-department-new-team-formed
ಪೇ ಸಿಎಂ ಯಶಸ್ಸಿನ ಬೆನ್ನಲ್ಲೇ ಕಾಂಗ್ರೆಸ್​​ ಮಾಧ್ಯಮ ಸಂವಹನ ವಿಭಾಗಕ್ಕೆ ನೂತನ ತಂಡ ರಚನೆ

By

Published : Sep 25, 2022, 12:16 PM IST

ಬೆಂಗಳೂರು: ಪೇ ಸಿಎಂ ಕ್ಯಾಂಪೇನ್​ನ ಭಾರಿ ಯಶಸ್ಸಿನ ಬಳಿಕ ಮತ್ತಷ್ಟು ಉತ್ಸುಕರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ವಿಶೇಷ ತಂಡ ನೇಮಕ ಮಾಡಿದ್ದಾರೆ.

ತಕ್ಷಣವೇ ಜಾರಿಗೆ ಬರುವಂತೆ ಮಾಧ್ಯಮ ಹಾಗೂ ಸಂವಹನ ರಾಜ್ಯ ಸಮಿತಿ, ಮುಖ್ಯ ವಕ್ತಾರರು ಮತ್ತು ವಕ್ತಾರರ ನೇಮಕಾತಿ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ ಎಂದು ಕೆಪಿಸಿಸಿ ಸಂವಹನ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ ನೂತನ ಆದೇಶ ಹೊರಡಿಸಲಾಗಿದೆ. ಸಂವಹನ ವಿಭಾಗದ ರಾಜ್ಯ ಸಮಿತಿಗೆ ಅನಿಲ್ ತಡಕಲ್, ಲಕ್ಷ್ಮಣ್ ಹಾಗೂ ಅನಿಲ್ ಕುಮಾರ್ ಟಿ. ಉಪಾಧ್ಯಕ್ಷರಾಗಿದ್ದಾರೆ. ರಘು ದೊಡ್ಡೇರಿ ಸಂಶೋಧನಾ ವಿಭಾಗದ ಉಪಾಧ್ಯಕ್ಷರಾದರೆ, ವಿಜಯ್ ಮತ್ತಿಕಟ್ಟಿ ಅಡ್ಮಿನ್ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ. ಉಳಿದಂತೆ ಪ್ರಧಾನ ಕಾರ್ಯದರ್ಶಿಗಳಾಗಿ ರಾಜು, ಕಿರಣ್ ದೇಶಮುಖ್, ಸಂಕೇತ ವೈ, ಅಮೃತ್ ಶೆಣೈ, ಸತ್ಯ ಪ್ರಕಾಶ್, ಭವ್ಯ ನರಸಿಂಹಮೂರ್ತಿ, ಪ್ರಸಾದ್ ಜೈನ್, ಬಾಲಕೃಷ್ಣ, ಯಾದವ್, ವೆಂಕಟೇಶ್, ಅಬ್ದುಲ್ ಮುನೀರ್, ರವಿ ಗೌಡ (ಮಾಧ್ಯಮ) ಆಯ್ಕೆಯಾಗಿದ್ದು, ಕಾರ್ಯದರ್ಶಿಗಳಾಗಿ, ಲಕ್ಷ್ಮಿಪತಿ ಜಿ, ಚಂದ್ರಶೇಖರ್ ಗೌಡ, ಸೈಯದ್ ಅರ್ಷದ್ ನೇಮಕಗೊಂಡಿದ್ದಾರೆ.

ನೂತನ ನೇಮಕಾತಿ ಪಟ್ಟಿ​

ಕೆಪಿಸಿಸಿ ಮುಖ್ಯ ವಕ್ತಾರರಾಗಿ ಬಿಎಲ್ ಶಂಕರ್, ವಿಎಸ್ ಉಗ್ರಪ್ಪ, ವಿ ಆರ್ ಸುದರ್ಶನ್, ಬಿಕೆ ಚಂದ್ರಶೇಖರ್, ಡಾ ಎಲ್ ಹನುಮಂತಯ್ಯ, ಪ್ರಕಾಶ್ ರಾಥೋಡ್, ಮೋಟಮ್ಮ, ಹೆಚ್ಎಂ ರೇವಣ್ಣ, ಬಿಎನ್ ಚಂದ್ರಪ್ಪ, ಐವಾನ್ ಡಿಸೋಜ, ಡಿಆರ್ ಪಾಟೀಲ್, ಆರ್​​ವಿ ವೆಂಕಟೇಶ್, ನಾರಾಯಣಸ್ವಾಮಿ ಎಂ, ಜಲಜ ನಾಯಕ್, ಪಿಆರ್ ರಮೇಶ್, ಕೆಇ ರಾಧಾಕೃಷ್ಣ, ಸಿ ನಾರಾಯಣಸ್ವಾಮಿ, ನಂಜಯ್ಯನಮಠ, ಪ್ರೊ. ದ್ವಾರಕನಾಥ್, ಶಂಕರ್ಗುಹಾ, ಧರ್ಮಸೇನಾ, ವೆಂಕಟೇಶ್, ನಿವೇದಿತ್ ಆಳ್ವ, ನಿಖಿತ್ ರಾಜ್, ಎಸ್​​ಎ ಹುಸೇನ್ ಹಾಗೂ ನಟರಾಜ್ ಗೌಡ ನೇಮಕವಾಗಿದ್ದಾರೆ.

ನೂತನ ನೇಮಕಾತಿ ಪಟ್ಟಿ​

ಹಾಗೆಯೇ ಜಿಲ್ಲಾವಾರು ವಕ್ತಾರು ಹಾಗೂ ಉಪ ವಕ್ತಾರನ್ನು ನೇಮಕ ಮಾಡಲಾಗಿದೆ ಎಂದು ಕೆಪಿಸಿಸಿ ಸಂವಹನ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ನೂತನ ನೇಮಕಾತಿ ಪಟ್ಟಿ​
ನೂತನ ನೇಮಕಾತಿ ಪಟ್ಟಿ​

ಇದನ್ನೂ ಓದಿ:ಪೇಸಿಎಂ ಅಭಿಯಾನ: ಸಿದ್ದರಾಮಯ್ಯ, ಡಿಕೆಶಿ‌ ವಿರುದ್ಧ ದೂರು ದಾಖಲು

ABOUT THE AUTHOR

...view details