ಬೆಂಗಳೂರು :ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯತಿಥಿ ಹಾಗೂ ಉಕ್ಕಿನ ಮನುಷ್ಯ ವಲ್ಲಭ್ ಭಾಯ್ ಪಟೇಲ್ ಜನ್ಮದಿನವನ್ನು ಕಾಂಗ್ರೆಸ್ ಒಟ್ಟಿಗೆ ಆಚರಣೆ ಮಾಡುತ್ತಿತ್ತು. ಆದರೆ, ಈ ಬಾರಿ ಎಡವಟ್ಟು ಮಾಡಿಕೊಂಡಿದೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಪಟೇಲರನ್ನು ಕಾಂಗ್ರೆಸ್ ಮರೆತಿದೆ ಎಂಬ ಆರೋಪಗಳು ಕೇಳಿ ಬಂದ ಬೆನ್ನಲ್ಲೆ ಎಲ್ಲಿಯೂ ಪಟೇಲರಿಗೆ ಅಪಮಾನ ಆಗದಂತೆ ನೋಡಿಕೊಂಡು ಬರುತ್ತಿತ್ತು. ಆದರೆ, ಕಳೆದ ಅ.31ರಂದು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಇಂದಿರಾ ಗಾಂಧಿ ಪುಣ್ಯತಿಥಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ವೇದಿಕೆ ಮೇಲೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಈ ವಿಚಾರ ನೆನಪಾಗಿ ಇಂದು ಪಟೇಲರ ಜನ್ಮದಿನ. ಅವರಿಗೂ ಗೌರವ ಸಲ್ಲಿಸುವುದು ಉತ್ತಮ. ಇಲ್ಲವಾದರೆ ಬಿಜೆಪಿಯವರು ಇದನ್ನೇ ಆಡಿಕೊಳ್ಳುತ್ತಾರೆ. ಅವರಿಗೆ ಅನುಕೂಲ ಮಾಡಿ ಕೊಡುವುದು ಬೇಡ ಎಂದು ವಿವರಿಸಿದ್ದರು.
ಇದಾದ ಬಳಿಕ ಪಟೇಲರ ಭಾವಚಿತ್ರವನ್ನೂ ಇರಿಸಿ ಗೌರವ ಸೂಚಿಸುವ ಕಾರ್ಯ ನಡೆಸಲಾಯಿತು. ಸಮಾರಂಭದ ಆರಂಭಕ್ಕೆ ಮುನ್ನ ನಡೆದ ಈ ಬೆಳವಣಿಗೆ ಅಂದು ಹೆಚ್ಚಿನವರ ಗಮನಕ್ಕೆ ಬರಲಿಲ್ಲ.