ಬೆಂಗಳೂರು:ದಸರಾ ಆಚರಣೆಯ ಮೊದಲ ದಿನವಾದ ಇಂದು ರಾಜ್ಯ ಕಾಂಗ್ರೆಸ್ ನಾಯಕರು ನಾಡಿನ ಸಮಸ್ತ ಜನತೆಗೆ ನವರಾತ್ರಿ ಹಬ್ಬದ ಶುಭಾಶಯ ಸಲ್ಲಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಮ್ಮ ಟ್ವೀಟರ್ನಲ್ಲಿ, ತಮ್ಮೆಲ್ಲರಿಗೂ ನವರಾತ್ರಿಯ ಮೊದಲನೇ ದಿವಸದ ಘಟಸ್ಥಾಪನೆಯ ಹಾರ್ದಿಕ ಶುಭಾಶಯಗಳು. ಜಗನ್ಮಾತೆಯು ಎಲ್ಲರ ಬಾಳಲ್ಲಿ ಸುಖ,ಶಾಂತಿ,ನೆಮ್ಮದಿ,ಆರೋಗ್ಯ ಕೊಟ್ಟು ಕಾಪಾಡಲೆಂದು ಹಾಗೂ ಮನುಕುಲಕ್ಕೆ ಮಾರಕವಾಗಿ ಕಾಡುತ್ತಿರುವ ಮಹಾಮಾರಿ ಕೊರೊನಾ ಆದಷ್ಟು ಬೇಗ ನಾಶವಾಗಲೆಂದು ಆ ತಾಯಿಯಲ್ಲಿ ಪ್ರಾರ್ಥನೆ ಮಾಡಿ ಪೂಜೆ ಸಲ್ಲಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಮ್ಮ ಟ್ವೀಟರ್ನಲ್ಲಿ, ನಾಡಿನ ಸಮಸ್ತ ಜನತೆಗೆ ನವರಾತ್ರಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿ ನಾಡಿನ ಮೇಲಿರುವ ಎಲ್ಲಾ ವಿಘ್ನಗಳನ್ನು ನಿವಾರಿಸಿ, ಜನರನ್ನು ಸಂಕಷ್ಟದಿಂದ ಪಾರು ಮಾಡಿ ಸರ್ವರಿಗೂ ಸನ್ಮಂಗಳ ಉಂಟು ಮಾಡಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ರಾಜ್ಯ ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ, ನಾಡಿನ ಸಮಸ್ತ ಜನತೆಗೆ ನವರಾತ್ರಿ ಹಾಗೂ ದಸರಾ ಹಬ್ಬದ ಶುಭಾಶಯಗಳು ತಿಳಿಸಿದೆ.
ಮಾಜಿ ಡಿಸಿಎಂ ಜಿ ಪರಮೇಶ್ವರ್ ಟ್ವೀಟ್ ಮಾಡಿದ್ದು, ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು. ನವದುರ್ಗೆಯರು ನಮ್ಮೆಲ್ಲರ ಮನೋಭಿಲಾಷೆಗಳನ್ನು ಈಡೇರಿಸಿ, ಅಜ್ಞಾನದ ಕತ್ತಲನ್ನು ದೂರವಾಗಿಸಿ ಬೆಳಕಿನೆಡೆಗೆ ಕರೆದೊಯ್ಯಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ರಾಜ್ಯಸಭೆ ಸದಸ್ಯ ಜಿಸಿ ಚಂದ್ರಶೇಖರ್ ಟ್ವೀಟ್ ಮಾಡಿದ್ದು, ನವರಾತ್ರಿ ಮೊದಲ ದಿನದ ವೈಭವ ಶೈಲಪುತ್ರೀ ದೇವಿ, ನಾಡ ದೇವತೆ ತಾಯಿ ಚಾಮುಂಡೇಶ್ವರಿ ಕೊರೊನಾ ಮಹಾ ಮಾರಿಯನ್ನು ಸಂಹಾರ ಮಾಡಿ, ನಮ್ಮ ನಿಮ್ಮೆಲ್ಲರಿಗೆ ಸಕಲ ಸುಖ, ಸಂತೋಷ, ಸಮೃದ್ದಿ ಆರೋಗ್ಯ ನೀಡಿ ನಾಡಿನ ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಲಿ, ಸಕಲ ಕರ್ನಾಟಕ ಜನತೆಗೆ ಕಾವೇರಿ ಸಂಕ್ರಮಣ ಶುಭಾಷಯಗಳು ತಿಳಿಸಿದರು.