ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನ ಎಟಿಎಂ ಕಲೆಕ್ಷನ್ ಮಾಡೆಲ್ ಪ್ರದರ್ಶಿಸಿ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ: ಅಶ್ವತ್ಥನಾರಾಯಣ - ಡಿಸಿಎಂ ಡಿಕೆ ಶಿವಕುಮಾರ್

''ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ರಾಜ್ಯವನ್ನು ಇವರು ಎಟಿಎಂ ಮಾಡಿಕೊಳ್ತಾರೆ ಅಂತ ಹೇಳಿದ್ದೆವು. ಇದಕ್ಕೆ ಉತ್ತರವನ್ನಾಗಿ ಅವರು ರಾಜ್ಯವನ್ನು ಕಲೆಕ್ಷನ್ ಸೆಂಟರ್ ಮಾಡಿಕೊಂಡಿದ್ದಾರೆ'' ಎಂದು ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಕಿಕಾರಿದರು.

Aswatthanarayan
ಅಶ್ವತ್ಥನಾರಾಯಣ

By ETV Bharat Karnataka Team

Published : Oct 17, 2023, 7:17 AM IST

ಬೆಂಗಳೂರು:''ಅಮಾಯಕ, ಪ್ರಾಮಾಣಿಕ ಗುತ್ತಿಗೆದಾರರ ಹಣ ಲೂಟಿ ಮಾಡಿ, ಐದು ರಾಜ್ಯಗಳ ಚುನಾವಣೆಗೆ ಕೊಡುವ ಕೆಲಸವನ್ನು ರಾಜ್ಯ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಇದರ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಎಟಿಎಂ ಕಲೆಕ್ಷನ್ ಮಾಡೆಲ್ ಪ್ರದರ್ಶನ ಮಾಡಿ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ'' ಎಂದು ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಆರೋಪಿಸಿದ್ದಾರೆ.

ಮಲ್ಲೇಶ್ವರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಲೂಟಿಕೋರರು ಸೇರಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದರೆ, ಬೆಂಗಳೂರು ನಗರದಲ್ಲಿ ಐಟಿ ದಾಳಿಗೆ ಒಳಗಾಗಿರುವ ಕೆಲ ವ್ಯಕ್ತಿಗಳು, ಕಾಂಟ್ರಾಕ್ಟರ್ ಅಸೋಸಿಯೇಷನ್ ಪದಾಧಿಕಾರಿಗಳು ಬಿಜೆಪಿ ಸರ್ಕಾರದ ಮೇಲೆ 40% ಆರೋಪ ಮಾಡಿದ್ದರು. ಈಗ ಆ ವ್ಯಕ್ತಿಯ ಮನೆಯಲ್ಲಿ 42 ಕೋಟಿ ಸಿಕ್ಕಿದೆ. ಬೇರೆ ಕಡೆ ನಡೆದ ಐಟಿ ದಾಳಿ ವೇಳೆಯಲ್ಲೂ ಕೋಟ್ಯಂತರ ರೂಪಾಯಿ ಸಿಕ್ಕಿದೆ‌'' ಎಂದರು.

''ಪೇ ಸಿಎಂ, 40% ಕಮೀಷನ್ ಆಪಾದನೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈ ಹಣದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಐಟಿ ದಾಳಿ ವೇಳೆ ಹಣ ಸಿಕ್ಕಿರುವುದನ್ನು ಕಾನೂನಾತ್ಮಕವಾಗಿ ಸ್ವಾಗತ ಮಾಡಬೇಕಿತ್ತು. ಆದರೆ, ಅದನ್ನು ಬಿಟ್ಟು ರಾಜಕೀಯ ಪ್ರೇರಿತ ಅಂತ ಹೇಳಿದ್ದಾರೆ. ಭ್ರಷ್ಟಾಚಾರದ ಹಣ ಸಿಕ್ಕಿದೆ. ಈ ರೀತಿ ಹಣ ಸಂಗ್ರಹಿಸಿಟ್ಟುಕೊಂಡಿದ್ದು ತಪ್ಪು ಅಂತ ಹೇಳದೇ ರಾಜಕೀಯ ಪ್ರೇರಿತ ಅಂತ ಎಲ್ಲರೂ ಹೇಳುತ್ತಿದ್ದಾರೆ'' ಎಂದು ಕಿಡಿಕಾರಿದರು.

ಕಾಂಗ್ರೆಸ್​ ವಿರುದ್ಧ ಗರಂ:''ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮೊದಲೇ ನಾವು ಈ ಬಗ್ಗೆ ಹೇಳಿದ್ದೆವು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ರಾಜ್ಯವನ್ನು ಇವರು ಎಟಿಎಂ ಮಾಡಿಕೊಳ್ತಾರೆ ಅಂತ ಹೇಳಿದ್ದೆವು. ಇದಕ್ಕೆ ಉತ್ತರವನ್ನಾಗಿ ಅವರು ಕಲೆಕ್ಷನ್ ಸೆಂಟರ್ ಮಾಡಿಕೊಂಡಿದ್ದಾರೆ. ಅವರಿಂದ ಈ ಹಣದ ವಿಚಾರದಲ್ಲಿ ಉತ್ತರ ಕೊಡಲು ಸಾಧ್ಯವಿಲ್ಲ. ಈಗ ಸಿಕ್ಕಿರುವ ಹಣ ಯಾರದ್ದು, ಯಾವ ಮೂಲದ್ದು? ಅದಕ್ಕೆ ಉತ್ತರ ನೀಡಿ ಎಂದು ಕಾಂಗ್ರೆಸ್ ನಾಯಕರಿಗೆ ಅಶ್ವತ್ಥನಾರಾಯಣ ನೇರ ಸವಾಲು ಹಾಕಿದರು. ಇದು ನಿಮ್ಮ ಹಣವಾ? ಐದು ರಾಜ್ಯಗಳಿಗೆ ಹೋಗುತ್ತಿದ್ದ ಹಣವಾ? ಇದಕ್ಕೆ ಉತ್ತರ ಕೊಡಲು ಸಿದ್ಧರಿಲ್ಲ. ಇದರ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಎಟಿಎಂ ಕಲೆಕ್ಷನ್ ಮಾಡೆಲ್ ಪ್ರದರ್ಶನ ಮಾಡಿ ಜನರನ್ನ ಎಚ್ಚರಿಸುವ ಕೆಲಸ ಮಾಡುತ್ತೇವೆ. ಅಮಾಯಕ, ಪ್ರಾಮಾಣಿಕ ಗುತ್ತಿಗೆದಾರರ ಹಣ ಲೂಟಿ ಮಾಡಿ, ಐದು ರಾಜ್ಯಗಳಿಗೆ ಕೊಡುವ ಕೆಲಸ ಮಾಡುತ್ತಿದ್ದಾರೆ'' ಎಂದು ಅವರು ಗರಂ ಆದರು.

''ವಿಚಾರವಾದಿ ಭಗವಾನ್ ಅಂತವರು ಅಧಿಕಾರಕ್ಕೆ ಪೆನ್ನು, ಪೇಪರ್ ಕೇಳಿದವರು. ಅವರು ಈಗ ಒಕ್ಕಲಿಗರು ಹೀನ ಸಂಸ್ಕೃತಿಯವರು ಅಂತ ಹೇಳಿದ್ದಾರೆ. ಈ‌ ರೀತಿ ಹೇಳಿಕೆ ಸಂತೋಷ ತಂದಿದೆಯಾ? ಇದನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರೇ ಪ್ರಶ್ನೆ ಮಾಡಲ್ವಾ?'' ಎಂದು ಪ್ರಶ್ನಿಸಿದರು.

ಜಗದೀಶ್ ಶೆಟ್ಟರ್​ಗೆ ಸವಾಲು:ಕಾಂಗ್ರೆಸ್​ನ ವಿಧಾನ ಪರಿಷತ್​ ಸದಸ್ಯಜಗದೀಶ್ ಶೆಟ್ಟರ್ ಪಾಪ ಎಲ್ಲೊ ಕಳೆದುಹೋಗಿದ್ದಾರೆ. ಅವರ ಪಕ್ಷದಲ್ಲೇ ಅವರು ಕಳೆದು ಹೋಗಿದ್ದಾರೆ. ನಿಮಗೆ ನೈತಿಕತೆ ಏನಿದೆ. ನಿಮ್ಮಲ್ಲಿ ಒಬ್ಬ ಅಧ್ಯಕ್ಷನ ಮಾಡೋಕೆ ಅವನ ಬಿಟ್ಟು, ಇವನ ಬಿಟ್ಟು, ಇವನ್ಯಾರು ಅನ್ನೊ ತರ ಆಗಿದೆ‌. ಒಬ್ಬ ಅಧ್ಯಕ್ಷನ ಆಯ್ಕೆ ಮಾಡೋಕೆ ನಿಮಗೆ ಆಗೋದಿಲ್ಲ. ನಮ್ಮ ಬಗ್ಗೆ ಮಾತನಾಡೋಕೆ ಏನು ನೈತಿಕತೆ ಇದೆ. ಜಗದೀಶ್ ಶೆಟ್ಟರ್ ಈಗ ಸಿಕ್ಕಿರುವ ಹಣದ ಬಗ್ಗೆ ಉತ್ತರ ಕೊಡಬೇಕು ಎಂದು ಸವಾಲು ಹಾಕಿದರು.

ಇದನ್ನೂ ಓದಿ:ಮದ್ಯದಂಗಡಿ ಲೈಸೆನ್ಸ್ ವಿಚಾರ.. ಸಾರ್ವಜನಿಕ ವೇದಿಕೆಯಲ್ಲೇ ಶಾಸಕದ್ವಯರ ಕಿತ್ತಾಟ

ABOUT THE AUTHOR

...view details