ಕರ್ನಾಟಕ

karnataka

ETV Bharat / state

ಯಾರನ್ನ ಕೇಳಿ ಲೆಟರ್​ ಬರೆದ್ರು?:  ಇಬ್ರಾಹಿಂ ಪತ್ರಕ್ಕೆ ಕೈ ನಾಯಕರಲ್ಲೇ ಅಸಮಾಧಾನ! - CM Ibrahim news

ಮೊದಲೇ ತಬ್ಲಿಘಿಗಳಿಂದ ಕೊರೊನಾ ಜಾಸ್ತಿ ಆಯಿತು ಎಂಬ ಮನೋಭಾವ ಇದೆ. ಈ ಸಂದರ್ಭದಲ್ಲಿ ಸಿ.ಎಂ.ಇಬ್ರಾಹಿಂ ಸಾಮೂಹಿಕ ಪ್ರಾರ್ಥನೆಗೆ ಪತ್ರ ಬರೆದರೆ, ಅದರಿಂದ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

CM Ibrahim
ಸಿ.ಎಂ.ಇಬ್ರಾಹಿಂ ಪತ್ರಕ್ಕೆ ಕೈ ನಾಯಕರಲ್ಲೇ ಅಸಮಾಧಾನ!

By

Published : May 15, 2020, 7:04 PM IST

ಬೆಂಗಳೂರು:ರಂಜಾನ್​​​​​ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಗಾಗಿ ಪತ್ರ ಬರೆದ ಸಿ.ಎಂ.ಇಬ್ರಾಹಿಂ ನಡೆ ಬಗ್ಗೆ ಕೈ ನಾಯಕರೇ ಅಸಮಾಧಾನಗೊಂಡಿದ್ದಾರೆ.

ರಂಜಾನ್ ಹಬ್ಬದ ಹಿನ್ನೆಲೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೊಡಿ ಅಂತ ಸಿ.ಎಂ.ಇಬ್ರಾಹಿಂ ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದರು. ಈ ಪತ್ರದ ಬಗ್ಗೆ ಬಿಜೆಪಿ ನಾಯಕರು ಹಾಗೂ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಇತ್ತ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಪತ್ರಕ್ಕೆ ಕಾಂಗ್ರೆಸ್​​ನಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಪಕ್ಷದ ಗಮನಕ್ಕೆ ತರದೇ ಸಿಎಂಗೆ ಪತ್ರ ಬರೆದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕೊರೊನಾ ಸಂದರ್ಭದಲ್ಲಿ ಈ ರೀತಿ ಪತ್ರ ಬರೆದರೆ ಪಕ್ಷಕ್ಕೆ ‌ಮಾರಕ ಆಗಲ್ವೇ ಎಂದು ಪ್ರಶ್ನಿಸಿದ್ದಾರೆ.

ಮೊದಲೇ ತಬ್ಲಿಘಿಗಳಿಂದ ಕೊರೊನಾ ಜಾಸ್ತಿ ಆಯಿತು ಎಂಬ ಮನೋಭಾವನೆ ಹುಟ್ಟಿದೆ. ಈ ಸಂದರ್ಭದಲ್ಲಿ ಸಿ.ಎಂ.ಇಬ್ರಾಹಿಂ ಸಾಮೂಹಿಕ ಪ್ರಾರ್ಥನೆಗೆ ಪತ್ರ ಬರೆದರೆ, ಅದರಿಂದ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇಬ್ರಾಹಿಂ ಪತ್ರ ಪಕ್ಷಕ್ಕೆ ಮಾರಕವೇ ಹೊರತು ಪೂರಕವಲ್ಲ ಎಂದು ಪಕ್ಷದ ವರಿಷ್ಠರಲ್ಲಿ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details