ಬೆಂಗಳೂರು : ಕೊರೊನಾ ಅಟ್ಟಹಾಸಕ್ಕೆ ಅತಂತ್ರರಾದ ಬಡವರಿಗೆ ತಮ್ಮ ತಮ್ಮ ವ್ಯಾಪ್ತಿ ಹಾಗೂ ಕ್ಷೇತ್ರದಲ್ಲಿ ಊಟೋಪಚಾರ ವ್ಯವಸ್ಥೆ ಕಲ್ಪಿಸುವಂತೆ ಕಾಂಗ್ರೆಸ್ ಸೂಚಿಸಿದೆ. ಹಿನ್ನೆಲೆಯಲ್ಲಿ ಶಾಸಕರು, ಮಾಜಿ ಶಾಸಕರು ಹಾಗೂ ನಾಯಕರು ಕಾರ್ಯಪ್ರವೃತ್ತರಾಗಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದ ಬಡವರ ನೆರವಿಗೆ ಮುಂದಾದ ಕೈ ನಾಯಕರು.. - ಕೈ ನಾಯಕರಿಂದ ಬಡಜನರಿಗೆ ಸಹಾಯ
ಶಾಸಕ ಜಮೀರ್ ಅಹ್ಮದ್ ಜೆಜೆಆರ್ ಪೊಲೀಸ್ ಠಾಣೆ ಆವರಣದಲ್ಲಿ ಸಭೆ ನಡೆಸಿ, ಕೊರೊನಾ ಸೋಂಕು ತಡೆಗೆ ಎಲ್ಲರ ಸಲಹೆ ಸ್ವೀಕರಿಸಿದರು.

ಬಡವರ ನೆರವಿಗೆ ಮುಂದಾದ ಕೈ ನಾಯಕರು
ಮಾಜಿ ಸಚಿವ ರಾಮಲಿಂಗರೆಡ್ಡಿ ಹಾಗೂ ಪುತ್ರಿ ಸೌಮ್ಯ ರೆಡ್ಡಿ ಕೂಡಾ ಬಿಟಿಎಂ ಲೇಔಟ್ನ ಸ್ಲಂ ನಿವಾಸಿಗಳಿಗೆ ಊಟ, ನೀರಿನ ಬಾಟಲಿಗಳನ್ನು ವಿತರಣೆ ಮಾಡಿದರು. ಕಳೆದ ಕೆಲ ದಿನಗಳಿಂದ ಇವರು ನಿರಂತರವಾಗಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ.
ಶಾಸಕ ಜಮೀರ್ ಅಹ್ಮದ್ ಜೆಜೆಆರ್ ಪೊಲೀಸ್ ಠಾಣೆ ಆವರಣದಲ್ಲಿ ಸಭೆ ನಡೆಸಿ, ಕೊರೊನಾ ಸೋಂಕು ತಡೆಗೆ ಎಲ್ಲರ ಸಲಹೆ ಸ್ವೀಕರಿಸಿದರು. ಸಭೆಯಲ್ಲಿ ವಿವಿಧ ಸಂಘ, ಸಂಸ್ಥೆಗಳು, ಸ್ತ್ರೀ ಸಂಘ, ಸ್ವಯಂಸೇವಾ ಪ್ರತಿನಿಧಿಗಳು, ಮಸೀದಿ, ದೇವಸ್ಥಾನಗಳ ಮುಖ್ಯಸ್ಥರು, ಚರ್ಚ್ ಪಾದ್ರಿಗಳು ಸಹ ಪಾಲ್ಗೊಂಡಿದ್ದರು.