ಕರ್ನಾಟಕ

karnataka

ETV Bharat / state

ಇಂದಿರಾ ಕ್ಯಾಂಟೀನ್​​ ಹೆಸರು ಬದಲಿಗೆ ಕಾಂಗ್ರೆಸ್ ನಾಯಕರ ತೀವ್ರ ಆಕ್ರೋಶ - ಇಂದಿರಾ ಕ್ಯಾಂಟೀನ್​​ಗೆ ಮರುನಾಮಕರಣ ವಿವಾದ ಸುದ್ದಿ

ಇಂದಿರಾ ಕ್ಯಾಂಟೀನ್​​ಗೆ ಮರುನಾಮಕರಣ ಚಿಂತನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಖಂಡನೆ ವ್ಯಕ್ತಪಡಿಸಿದ್ದಾರೆ.

congress
ಕಾಂಗ್ರೆಸ್ ನಾಯಕರ ತೀವ್ರ ಆಕ್ರೋಶ

By

Published : Dec 18, 2019, 11:26 PM IST

ಬೆಂಗಳೂರು:ಇಂದಿರಾ ಕ್ಯಾಂಟೀನ್​​ಗೆ ಮರುನಾಮಕರಣ ಕುರಿತ ರಾಜ್ಯ ಸರ್ಕಾರದ ಚಿಂತನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಮಾಜಿ ಸಂಸದ ವಿಎಸ್ ಉಗ್ರಪ್ಪ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಈಶ್ವರ್ ಖಂಡ್ರೆ, ಬಿಜೆಪಿಯವರು ಬಡವರ ವಿರೋಧಿಗಳು. ಬಡವರ ಪರ ಯೋಜನೆ ತಂದವರು ನಾವು. ಅವುಗಳನ್ನ ಮುಚ್ಚೋಕೆ ಈಗ ಇಂತಹ ಪ್ರಯತ್ನ ನಡೆಸ್ತಿದ್ದಾರೆ. ಸಂಕುಚಿತ ಮನೋಭಾವವನ್ನ ಮೊದಲು ಬಿಡಿ. ವಾಲ್ಮೀಕಿ ಹೆಸರನ್ನ ಹೊಸ ಯೋಜನೆಗೆ ಇಡಿ. ಇರುವ ಹೆಸರನ್ನ ಬದಲಾಯಿಸುವುದು ಬೇಡ. ಅಯೋಧ್ಯೆಯಲ್ಲಿ ವಾಲ್ಮೀಕಿ ಹೆಸರಿಡಿ ಎಂದ್ರು.

ಮಾಜಿ ಸಂಸದ ವಿಎಸ್ ಉಗ್ರಪ್ಪ ಮಾತನಾಡಿ, ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡ್ತೀರ. ಅಲ್ಲಿ ವಾಲ್ಮೀಕಿ ಹೆಸರನ್ನ ಇಡಿ. ವಾಲ್ಮೀಕಿ ಸಮುದಾಯಕ್ಕೆ ಶೇ.7.5 ರಷ್ಟು ಮೀಸಲಾತಿ ಕೊಟ್ರಾ?ಯಾವುದಾದರೂ ವಿವಿಗೆ ವಾಲ್ಮೀಕಿ ಹೆಸರಿಟ್ರಾ? ಇದು ನಿಮ್ಮಿಂದ ಸಾಧ್ಯವೇ ಬಿಜೆಪಿ ನಾಯಕರೇ? ಪಾಪ ವಾಲ್ಮೀಕಿ ಮುಖಂಡರಿಗೆ ಜಗಳ ಹಚ್ಚಿದ್ದೀರ. ಶ್ರೀರಾಮುಲು, ರಮೇಶ್ ಜಾರಕಿಹೊಳಿ ನಡುವೆ ಕಲಹ ತಂದಿಟ್ಟಿದ್ದೀರಿ. ಮೊದಲು ಅದನ್ನ ಬಿಡಿ, ನ್ಯಾಯ ಒದಗಿಸಿ ಎಂದು ಆಗ್ರಹಿಸಿದರು.

For All Latest Updates

TAGGED:

ABOUT THE AUTHOR

...view details