ಕರ್ನಾಟಕ

karnataka

ETV Bharat / state

ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ: ಬಿಜೆಪಿಗೆ ಮಾನ ಮರ್ಯಾದೆ ಇದೆಯಾ? ಮಹದೇವಪ್ಪ ಕಿಡಿ

ಗೋಮಾಂಸ ರಫ್ತಿನಲ್ಲಿ ಭಾರತವು ವಿಶ್ವದಲ್ಲೇ 3ನೇ ಸ್ಥಾನದಲ್ಲಿದೆ. ಹೀಗಿದ್ದರೂ ನಾಚಿಕೆ ಮಾನ ಮರ್ಯಾದೆ ಇಲ್ಲದ ಬಿಜೆಪಿಯವರು ಗೋಮಾಂಸ ರಫ್ತನ್ನು ನಿಲ್ಲಿಸುವುದನ್ನು ಬಿಟ್ಟು, ಸದನದಲ್ಲಿ ಗೋಹತ್ಯೆ ನಿಷೇಧ ಎಂದು ಬೊಗಳೆ ಬಿಡುತ್ತಾರೆ. ಇವರಿಗೆ ಮಾನ ಮರ್ಯಾದೆ ಇದೆಯೇ? ಇವರೆಲ್ಲರೂ ಎಡಬಿಡಂಗಿಗಳು ಎಂದು ಪ್ರಶ್ನಿಸಿ ಮಾಜಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಕಿಡಿಕಾರಿದ್ದಾರೆ.

Congress Leader
ಕಾಂಗ್ರೆಸ್ ನಾಯಕರು

By

Published : Dec 10, 2020, 4:35 AM IST

Updated : Dec 10, 2020, 6:14 AM IST

ಬೆಂಗಳೂರು: ವಿಧಾನಸಭೆಯಲ್ಲಿ ಸರ್ಕಾರವು ಗೋಹತ್ಯೆ ನಿಷೇಧ ವಿಧೇಯಕ ಮಂಡನೆಯ ಬಗ್ಗೆ ಮುನ್ಸೂಚನೆ ನೀಡದೆ ಮಂಡಿಸಿದ್ದರ ಬಗ್ಗೆ ಕಾಂಗ್ರೆಸ್​ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸಭಾ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಸಂಬಂಧ ಚರ್ಚೆಗೆ ಅವಕಾಶ ನೀಡದೆ, ಮಸೂದೆಯ ಪ್ರತಿಯನ್ನು ಸದನದ ಸದಸ್ಯರಿಗೂ ಕೊಡದೆ ಏಕಾಏಕಿ ಅಂಗೀಕರಿಸುವ ಮೂಲಕ ರಾಜ್ಯ ಸರ್ಕಾರವು ಪ್ರಜಾಪ್ರಭುತ್ವದ ಕತ್ತು ಹಿಸುಕಲು ಹೊರಟಿದೆ ಎಂದು ಆರೋಪಿಸಿದ್ದಾರೆ.

ಮಂಗಳವಾರದ ಕಲಾಪ ಸಲಹಾ ಸಮಿತಿಯಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆಯ ಬಗ್ಗೆ ಮಾಹಿತಿ ನೀಡಿಲ್ಲ. ಬುಧವಾರದ ಕಲಾಪ ಪಟ್ಟಿಯಲ್ಲಿ ಈ ವಿಷಯವನ್ನು ಉಲ್ಲೇಖಿಸಿಲ್ಲ. ಆದರೆ, ಮಧ್ಯಾಹ್ನದ ವೇಳೆಗೆ ಏಕಾಏಕಿ ಗೋಹತ್ಯೆ ನಿಷೇಧ ವಿಧೇಯಕ ಮಂಡಿಸಿ ಅಂಗೀಕರಿಸುವ ಮೂಲಕ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸಿದೆ. ಸದನದ ಗಮನಕ್ಕೆ ತರದೆ, ಸದಸ್ಯರಿಗೆ ಮಸೂದೆಯ ಪ್ರತಿಯನ್ನೂ ನೀಡದೆ, ಏಕಾಏಕಿ ಮಂಡಿಸುವ ಮೂಲಕ ಸರ್ಕಾರ ಸಂವಿಧಾನಕ್ಕೆ ಅಪಚಾರವೆಸಗಿದೆ. ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.

ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಅಂಗೀಕಾರ.. ಹಳೆ ಕಾಯ್ದೆಗಿಂತ ಹೊಸ ವಿಧೇಯಕ ಎಷ್ಟು ಕಠಿಣ?

ಮಾಜಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಟ್ವೀಟ್ ಮಾಡಿದ್ದು, ಗೋಹತ್ಯೆ ನಿಷೇಧ ವಿಧೇಯಕ ಇರಲಿ ಏನೇ ಇರಲಿ ಸದನದಲ್ಲಿ ವಿಸ್ತೃತವಾಗಿ ಚರ್ಚೆ ಮಾಡಿಯೇ ಕಾಯ್ದೆಗಳನ್ನು ಜಾರಿಗೊಳಿಸಬೇಕು. ಆದರೆ, ಈ ಸಾಮಾನ್ಯ ಜ್ಞಾನವೇ ಇಲ್ಲದ ರಾಜ್ಯ ಬಿಜೆಪಿ ಸರ್ಕಾರವು ಕಾಯ್ದೆಗಳ ಜಾರಿಯ ವಿಷಯದಲ್ಲಿ ಮನಸ್ಸಿಗೆ ಬಂದಂತೆ ವರ್ತಿಸುತ್ತಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನೂ ಗಾಳಿಗೆ ತೂರಿ ಸದನದ ಘನತೆ ನಾಶಮಾಡಿದೆ ಎಂದು ದೂರಿದ್ದಾರೆ.

ಗೋಮಾಂಸ ರಫ್ತಿನಲ್ಲಿ ಭಾರತವು ವಿಶ್ವದಲ್ಲೇ 3ನೇ ಸ್ಥಾನದಲ್ಲಿದೆ. ಹೀಗಿದ್ದರೂ ನಾಚಿಕೆ ಮಾನ ಮರ್ಯಾದೆ ಇಲ್ಲದ ಬಿಜೆಪಿಯವರು ಗೋಮಾಂಸ ರಫ್ತನ್ನು ನಿಲ್ಲಿಸುವುದನ್ನು ಬಿಟ್ಟು, ಸದನದಲ್ಲಿ ಗೋಹತ್ಯೆ ನಿಷೇಧ ಎಂದು ಬೊಗಳೆ ಬಿಡುತ್ತಾರೆ. ಇವರಿಗೆ ಮಾನ ಮರ್ಯಾದೆ ಇದೆಯೇ? ಇವರೆಲ್ಲರೂ ಎಡಬಿಡಂಗಿಗಳು ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ರಾಜ್ಯ ಸರ್ಕಾರದ ನಿಲುವು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತರೆ ಹಲವು ಕಾಂಗ್ರೆಸ್ ನಾಯಕರು ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.

Last Updated : Dec 10, 2020, 6:14 AM IST

ABOUT THE AUTHOR

...view details