ಕರ್ನಾಟಕ

karnataka

ETV Bharat / state

ಮಹದೇವಪುರ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕಾರ್ಯಕರ್ತರು

ಮಹದೇವಪುರ ಗ್ರಾಮಾಂತರ ಮಂಡಲದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡಿದ್ದು, ಶಾಸಕ ಅರವಿಂದ ಲಿಂಬಾವಳಿ ಪಕ್ಷಕ್ಕೆ ಬರಮಾಡಿಕೊಂಡರು.

mahadevapura
ಬಿಜೆಪಿ ಸೇರಿದ ಕಾರ್ಯಕರ್ತರು

By

Published : Aug 30, 2021, 7:06 AM IST

ಮಹದೇವಪುರ: ಇಲ್ಲಿನ ಗ್ರಾಮಾಂತರ ಮಂಡಲದ ಕುರುಡುಸೊಣ್ಣೇನಹಳ್ಳಿ ಹಾಗೂ ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯುವ ನಾಯಕ, ಗ್ರಾಮ ಪಂಚಾಯಿತಿ ಸದಸ್ಯ ರಾಜೇಶ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ಶಾಸಕ ಅರವಿಂದ ಲಿಂಬಾವಳಿ ಪಕ್ಷಕ್ಕೆ ಬರಮಾಡಿಕೊಂಡರು.

ಮಹದೇವಪುರವನ್ನು ಕಾಂಗ್ರೆಸ್‌ಮುಕ್ತ ಕ್ಷೇತ್ರವನ್ನಾಗಿ ಮಾಡುವುದಾಗಿ ಶಾಸಕ ಅರವಿಂದ ಲಿಂಬಾವಳಿ ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಕಳೆದ ಒಂದು ವರ್ಷದಿಂದ ಅನೇಕ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ.

ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, "ನಾವು ಜನಪ್ರತಿನಿಧಿಗಳು. ಜನರ ಕೆಲಸ ಮಾಡುತ್ತೇವೆ. ಒಳರಾಜಕೀಯ ಎಲ್ಲಾ ಪಕ್ಷದಲ್ಲೂ ಇರುತ್ತವೆ. ಆದರೆ ಜನರ ಕೆಲಸ ಮಾಡುವುದನ್ನೇ ಕಾಂಗ್ರೆಸ್ ಪಕ್ಷ ಮರೆತಿದೆ. ಆದ್ದರಿಂದ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಮಹದೇವಪುರ ಕ್ಷೇತ್ರವನ್ನು ಕಾಂಗ್ರೆಸ್ ಮುಕ್ತ ಕ್ಷೇತ್ರವಾಗಿ ಮಾಡಲು ನಾವು ಶ್ರಮಿಸುತ್ತೇವೆ. ಬಿಜೆಪಿಗೆ ಸೇರ್ಪಡೆಗೊಂಡವರು ಯಾವುದೇ ಅಪೇಕ್ಷೆಗಳಿಲ್ಲದೆ ಪಕ್ಷಕ್ಕಾಗಿ ದುಡಿಯಿರಿ. ಆಗ ಪಕ್ಷವೇ ನಿಮ್ಮನ್ನು ಗುರುತಿಸಿ ಸ್ಥಾನಮಾನ ನೀಡುತ್ತದೆ" ಎಂದು ಹೇಳಿದರು.

"ಅಷ್ಟೇ ಅಲ್ಲದೆ, ಪಕ್ಷದ ಸಿದ್ಧಾಂತಗಳಿಗೆ ತಲೆಬಾಗಬೇಕಾಗುತ್ತದೆ. ಕಳೆದ 2 ವರ್ಷಗಳಲ್ಲಿ ಬಿದರಹಳ್ಳಿ ಗ್ರಾಮ ಪಂಚಾಯಿತಿಗೆ 8.5 ಕೋಟಿ ರೂ ಅನುದಾನ ನೀಡಿದ್ದೇವೆ. ಅಭಿವೃದ್ಧಿಗಾಗಿ ಒಂದೇ ಪಕ್ಷ ಇದ್ದರೆ ಅಭಿವೃದ್ಧಿ ಶೀಘ್ರವಾಗಿ ನಡೆಯುತ್ತದೆ" ಎಂದರು.

ABOUT THE AUTHOR

...view details