ಕರ್ನಾಟಕ

karnataka

ETV Bharat / state

ಬಿಬಿಎಂಪಿ ಅಕ್ರಮ: ಎನ್.ಆರ್. ರಮೇಶ್ ವಿರುದ್ಧ ತನಿಖೆಗೆ ಕೈ ನಾಯಕರ ಆಗ್ರಹ - ಎನ್ಆರ್ ರಮೇಶ್ ಬಿಬಿಎಂಪಿ ಅಕ್ರಮ

ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಮೇಯರ್ ಹಾಗೂ ಮಾಜಿ ಆಡಳಿತ ಪಕ್ಷದ ನಾಯಕರ ನೇತೃತ್ವದಲ್ಲಿ ಸುದ್ದಿಗೋಷ್ಟಿ ನಡೆಯಿತು. ಬಿಜೆಪಿ ವಕ್ತಾರ ಎನ್.ಆರ್. ರಮೇಶ್ ಬಿಬಿಎಂಪಿಯಲ್ಲಿ ಅಕ್ರಮಗಳನ್ನು ನಡೆಸಿದ್ದು, ಅವರ ವಿರುದ್ಧ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ.

ಎನ್.ಆರ್ ರಮೇಶ್ ಬಿಬಿಎಂಪಿಯಲ್ಲಿ ನಡೆಸಿದ ಅಕ್ರಮಗಳ ವಿರುದ್ಧ ತನಿಖೆಗೆ ಕೈ ನಾಯಕರು ಆಗ್ರಹ

By

Published : Oct 17, 2019, 3:57 PM IST

ಬೆಂಗಳೂರು: ಬಿಜೆಪಿ ವಕ್ತಾರ ಎನ್.ಆರ್. ರಮೇಶ್ ಬಿಬಿಎಂಪಿಯಲ್ಲಿ ನಡೆಸಿದ ಅಕ್ರಮಗಳನ್ನು ನಡೆಸಿದ್ದಾರೆಂದು ಆರೋಪಿಸಿ, ಅವರ ವಿರುದ್ಧ ತನಿಖೆ ನಡೆಯಬೇಕೆಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಮೇಯರ್ ಹಾಗೂ ಮಾಜಿ ಆಡಳಿತ ಪಕ್ಷದ ನಾಯಕರು ಸುದ್ದಿಗೋಷ್ಟಿ ನಡೆಸಿ ಈ ಆಗ್ರಹ ಮಾಡಿದರು. ಸುದ್ದಿಗೋಷ್ಟಿಯಲ್ಲಿ ಹಾಜರಿದ್ದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮಾಜಿ ಮೇಯರ್​ಗಳಾದ ರಾಮಚಂದ್ರಪ್ಪ, ಪಿ.ಆರ್. ರಮೇಶ್, ಪದ್ಮಾವತಿ, ಮಾಜಿ ಆಡಳಿತ ಪಕ್ಷದ ನಾಯಕರಾದ ಸತ್ಯನಾರಾಯಣ್, ಶಿವರಾಜ್, ವಾಜೀದ್ ಆಗ್ರಹಿಸಿದ್ದಾರೆ.

ಈ ವೇಳೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮಾತನಾಡಿ, ಬಿಬಿಎಂಪಿಯನ್ನ ಎನ್.ಆರ್ ರಮೇಶ್ ಕಂಟ್ರೋಲ್ ಮಾಡುತ್ತಿದ್ದು, ಬಿಬಿಎಂಪಿ ಅಧಿಕಾರಿಗಳು ರಮೇಶ್​ ಅಕ್ರಮಗಳ ಬಗ್ಗೆ ದೂರು ಕೊಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಎನ್. ಆರ್. ರಮೇಶ್ ಪತ್ರ ಬರೆದಿದ್ದಾರೆ. ವೈಟ್ ಟ್ಯಾಪಿಂಗ್ 4ಜಿ ವಿನಾಯತಿ ಕೊಡಿ ಎಂದು ಹೇಳುತ್ತಾರೆ. ಆದರೆ, ಅವರು 16 ಕೋಟಿಯ ಕಾಮಗಾರಿಗಳಿಗೆ ಟೆಂಡರ್ ಯಾಕೆ ಕೊಟ್ಟಿಲ್ಲ? ಅವರೇನು ಸೂಪರ್ ಮಿನಿಸ್ಟರ್ ಆಗಿದ್ದಾರಾ? ಈವರೆಗೂ ಸಿಎಂ ಕಚೇರಿಗೆ ಎಷ್ಟು ಕಿಕ್ ಬ್ಯಾಕ್ ಹೋಗಿದೆ? ಎಂದು ಪ್ರಶ್ನೆಗಳನ್ನು ಎತ್ತಿದ್ದಾರೆ.

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ:

ಆಡಳಿತ ಯಂತ್ರ ಇಂದು ಹಳಿ ತಪ್ಪಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಉಪಕುಲಪತಿ ಕೊಲೆ ನಡೆಯುತ್ತೆ. ಜೈಲಿನೊಳಗೇ ಪತ್ರಕರ್ತರ ಸಾವಾಗಿದೆ. ಬಾಗಲಕೋಟೆಯಲ್ಲಿ ಡಬಲ್ ಮರ್ಡರ್ ನಡೆದಿದೆ. ಒಟ್ಟಾರೆ, ಲೆಕ್ಕವಿಲ್ಲದಷ್ಟು ಅಪರಾಧಗಳು ವಿಜೃಂಭಿಸುತ್ತಿವೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣವೆಂದು ಸರ್ಕಾರದ ವಿರುದ್ಧ ಮಾಜಿ ಸಂಸದ ಉಗ್ರಪ್ಪ ವಾಗ್ದಾಳಿ ನಡೆಸಿದರು.

ABOUT THE AUTHOR

...view details