ಕರ್ನಾಟಕ

karnataka

ETV Bharat / state

ಬೆಂಗಳೂರಿನ ವಿವಿಧೆಡೆ ಕಾಂಗ್ರೆಸ್ ನಾಯಕರಿಂದ ಆಹಾರ ಸಾಮಗ್ರಿಗಳ ಕಿಟ್​​​ ವಿತರಣೆ - ಆಹಾರ ಸಾಮಗ್ರಿಗಳ ಕಿಟ್​ ವಿತರಣೆ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷ ಈಶ್ವರ್ ಕಂಡ್ರೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಕಾರ್ಮಿಕರು ಹಾಗೂ ಬಡವರಿಗೆ ಆಹಾರ ಸಾಮಗ್ರಿಗಳ ಕಿಟ್​ಗಳನ್ನು ವಿತರಿಸಿದರು.

food kit distribute
ಬೆಂಗಳೂರಿನ ವಿವಿಧೆಡೆ ಆಹಾರದ ಕಿಟ್ ವಿತರಿಸಿದ ಕಾಂಗ್ರೆಸ್ ನಾಯಕರು

By

Published : May 14, 2020, 7:19 PM IST

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ನಗರದ ವಿವಿಧಡೆ ಇಂದು ಕಾರ್ಮಿಕರು ಹಾಗೂ ಬಡವರಿಗೆ ಆಹಾರ ಸಾಮಗ್ರಿಗಳ ಕಿಟ್​ಗಳನ್ನು ವಿತರಿಸಿದರು.

ಸಿದ್ದರಾಮಯ್ಯ ಉಪಸ್ಥಿತಿ: ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ, ದಿನಸಿ ಹಾಗೂ ತರಕಾರಿ ಕಿಟ್​ಗಳನ್ನು ವಿತರಿಸಿದರು. ಈ ವೇಳೆ ಮಾಜಿ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ವೇಣುಗೋಪಾಲ್ ಹಾಜರಿದ್ದರು. ಇದೇ ಸಂದರ್ಭ ರಾಮಲಿಂಗಾರೆಡ್ಡಿ 4,000ಕ್ಕೂ ಅಧಿಕ ಮಂದಿಗೆ ದಿನಸಿ ಕಿಟ್​ ವಿತರಿಸಿದರು. ಲಾಕ್​ಡೌನ್ ಘೋಷಣೆಯಾದ ದಿನದಿಂದಲೂ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ರಾಮಲಿಂಗಾರೆಡ್ಡಿ ನಿರಂತರವಾಗಿ ದಿನಸಿ ಕಿಟ್ ಹಾಗೂ ಊಟ, ಉಪಹಾರ ಪೂರೈಸುತ್ತಾ ಬಂದಿದ್ದು ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.

ಬೆಂಗಳೂರಿನ ವಿವಿಧೆಡೆ ದಿನಸಿ ಕಿಟ್ ವಿತರಿಸಿದ ಕಾಂಗ್ರೆಸ್ ನಾಯಕರು


ಎರಡು ಕಡೆ ಡಿಕೆಶಿ ಭಾಗಿ: ಡಿ.ಕೆ.ಶಿವಕುಮಾರ್ ಇಂದು ಎರಡು ಕಡೆಗಳಲ್ಲಿ ದಿನಸಿ ಕಿಟ್ ವಿತರಿಸುವ ಕಾರ್ಯದಲ್ಲಿ ಭಾಗಿಯಾದರು. ಮೊದಲು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಳೇಕಹಳ್ಳಿಯಲ್ಲಿ ಆಹಾರ ಪದಾರ್ಥಗಳನ್ನು ವಿತರಿಸಿದರು. ನಂತರ ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿದರಳ್ಳಿಯಲ್ಲಿ 5000 ದಿನಸಿ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ ಹಾಗೂ ಸ್ಥಳೀಯ ನಾಯಕರು ಇದ್ದರು.

ಬೆಂಗಳೂರಿನ ವಿವಿಧೆಡೆ ದಿನಸಿ ಕಿಟ್ ವಿತರಿಸಿದ ಕಾಂಗ್ರೆಸ್ ನಾಯಕರು


ಕಿಟ್ ವಿತರಿಸಿದ ಖಂಡ್ರೆ: ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​​ನ ಕುರುಬರಹಳ್ಳಿಯಲ್ಲಿ 5 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ದಿನಸಿ ಕಿಟ್​​ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ಶಿವರಾಜ್, ಮಾಜಿ ಮಂತ್ರಿಗಳಾದ ಹೆಚ್.ಎಂ.ರೇವಣ್ಣ ಹಾಗೂ ಬೆಂಗಳೂರು ಉತ್ತರ ಕಾಂಗ್ರೆಸ್ ಅಧ್ಯಕ್ಷ ರಾಜ್ ಕುಮಾರ್​​ ಉಪಸ್ಥಿತರಿದ್ದರು.

ABOUT THE AUTHOR

...view details